Site icon Vistara News

Pro Kabaddi: ಗೆಲುವಿನ ನಗೆ ಬೀರಿದ ಪಾಟ್ನಾ ಪೈರೇಟ್ಸ್‌, ಯುಪಿ ಯೋಧಾಸ್

pro kabaddi

ಅಹಮದಾಬಾದ್​: ಬುಧವಾರದ ಡಬಲ್ ಹೆಡರ್​​ ಪ್ರೊ ಕಬಡ್ಡಿ ಲೀಗ್(Pro Kabaddi )​ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌​ ಮತ್ತು ಯುಪಿ ಯೋಧಾಸ್​ ತಂಡಗಳು ಗೆಲುವಿನ ನಗೆ ಬೀರಿದೆ. ಪಾಟ್ನಾ ತಂಡ ತೆಲುಗು ವಿರುದ್ಧ 50-28 ಅಂಕದ ಅಂತರ ಗೆಲುವು ಸಾಧಿಸಿದರೆ, ಪಿ ಯೋಧಾ ತಂಡ ಹರ್ಯಾಣ ಸ್ಟೀಲರ್ಸ್ ವಿರುದ್ಧ 57-27 ಅಂಕದಿಂದ ಗೆದ್ದು ಬೀಗಿತು.

ಸಚಿನ್​ ರೇಡಿಂಗ್​ ಆರ್ಭಟಕ್ಕೆ ತಲೆಬಾಗಿದ ತೆಲುಗು

ಅಹಮದಾಬಾದ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅಮೋಘ ರೇಡಿಂಗ್​ ಪ್ರದರ್ಶನ ತೋರಿದ ಸಚಿನ್​ ಅವರು ತಾವು ಮಾಡಿದ ಎಲ್ಲ 14 ರೇಡಿಂಗ್​ನಲ್ಲಿಯೂ ಯಶಸ್ಸು ಕಂಡು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಕೆಲವು ನಿಮಿಷಗಳಲ್ಲಿ ತೆಲುಗು ಟೈಟಾನ್ಸ್​ ಉತ್ತಮವಾಗಿ ಆಡಿತ್ತಾದರೂ ಇದೇ ಲಯವನ್ನು ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲವಾಯಿತು.

ಸ್ಟಾರ್​ ಆಟಗಾರ ಪವನ್​ ಸೆಹ್ರಾವತ್​ ಅವರು ತೆಲುಗು ಪರ ಏಕಾಂಗಿ ಹೋರಾಟ ನಡೆಸಿ 11 ಅಂಕ ಕಲೆಹಾಕಿದರು. ಇವರಿಗೆ ಬೇರೆ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ತಂಡ ಸೋಲು ಕಂಡಿತು. ಸಂದೀಪ್​ ಅವರು 10 ಬಾರಿ ಟ್ಯಾಕಲ್​ ಪ್ರಯತ್ನ ಮಾಡಿದರು ಕೇವಲ ನಾಲ್ಕು ಬಾರಿ ಮಾತ್ರ ಯಶಸ್ವಿಯಾದರು.

ಪಾಟ್ನಾ ಪರ ಸಚಿನ್​ ಅವರು ಮಿಂಚಿನ ವೇಗದ ರೇಡಿಂಗ್​ ಮೂಲಕ ಎದುರಾಳಿ ಕೋಟೆಯನ್ನು ಪುಡಿಗಟ್ಟಿದರು. ಇವರಿಗೆ ಮಂಜಿತ್​ ಉತ್ತಮ ಸಾಥ್​ ನೀಡಿದರು. ಮಂಜಿತ್ 8 ಅಂಕ ಗಳಿಸಿದರೆ, ಸಂದೀಪ್​ ಕುಮಾರ್​(4), ಅಂಕಿತ್​(5), ನಾಯಕ ನೀರಜ್​ ಕುಮಾರ್​(5) ಮತ್ತು ಸಚಿನ್​(3) ಅಂಕ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಪಾಟ್ನಾ ತಂಡ ತೆಲುಗು ವಿರುದ್ಧ 50-28 ಅಂಕದ ಅಂತರದಿಂದ ಗೆದ್ದು ಬೀಗಿತು.

ಇದನ್ನೂ ಓದಿ Pro Kabaddi : ಮುಂಬಾ ವಿರುದ್ಧ ಜಯಂಟ್ಸ್​​ಗೆ 39-37 ಅಂಕಗಳ ಜಯ

ಗೆಲುವಿನ ಖಾತೆ ತೆರೆದ ಯುಪಿ ಯೋಧಾಸ್

ದಿನದ ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್​ ತಂಡವನ್ನು ಹರ್ಯಾಣ ಸ್ಟೀಲರ್ಸ್​ 57-27 ಅಂಕದಿಂದ ಮಣಿಸಿ ಗೆಲುವಿನ ನಗೆ ಬೀರಿತು. ಇದು ಯುಪಿ ಯೋಧಾಸ್​ಗೆ ಒಲಿದ ಮೊದಲ ಗೆಲುವಾಗಿದೆ. ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿತ್ತು.

ಡುಮ್ಮಿ ಖ್ಯಾತಿಯ ಪ್ರದೀಪ್ ನರ್ವಾಲ್​ ಈ ಪಂದ್ಯದಲ್ಲಿ ತಮ್ಮ ಹಳೆಯ ಶೈಲಿ ರೇಡಿಂಗ್​ ಮೂಲಕ ಗಮನ ಸೆಳೆದರು. ಒಟ್ಟು 11 ಅಂಕಗಳನ್ನು ಗಳಿಸಿ ಮಿಂಚಿದರು. ಈ ಹಿಂದಿನ ಪಂದ್ಯದಲ್ಲಿ ಅವರು ಸಂಪೂರ್ಣ ವೈಫಲ್ಯ ಕಂಡಿದ್ದರು. ಇದೀಗ ಪ್ರದೀಪ್ ತಮ್ಮ ಹಳೆಯ ಲಯಕ್ಕೆ ಮರಳಿದ್ದು ತಂಡಕ್ಕೆ ಮುಂದಿನ ಪಂದ್ಯದಲ್ಲಿ ಇನ್ನಷ್ಟು ಆತ್ಮವಿಶ್ವಾಸ ಮೂಡಿಸುವಂತೆ ಮಾಡಿದೆ. ಸುರೇಂದರ್​ ಗಿಲ್​ ಅವರು 13 ಅಂಕ ಮತ್ತು ಡೆಫೆಂಡರ್​ ಸುಮಿತ್​ 8 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅತ್ತ ಹರ್ಯಾಣ ಪರ ಮೋಹಿತ್​ ಮತ್ತು ವಿನಯ್​ ತಲಾ 5 ಅಂಕಗಳಿಸಿದರು. ತಂಡದ ಸ್ಟಾರ್​ ರೇಡರ್​ ಸಿದ್ದಾರ್ಥ್​ ದೇಸಾಯಿ ಕೇವಲ 4 ಅಂಕಕ್ಕೆ ಸೀಮಿತವಾದದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು.

Exit mobile version