Site icon Vistara News

Pro Kabaddi: ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಮುಂದೂಡಿಕೆ

pro kabaddi

ಬೆಂಗಳೂರು: 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi)ನ ಆಟಗಾರರ ಹರಾಜು ಪ್ರಕ್ರಿಯೆಯ ದಿನಾಂಕ ಮುಂದೂಡಿಕೆಯಾಗಿದೆ.(Pro Kabaddi 2023 Auction postponed) ಪೂರ್ವ ನಿಗದಿಯಂತೆ ಮಹತ್ವದ ಟೂರ್ನಿಯ ಆಟಗಾರರ ಹರಾಜು(pro kabaddi league 2023 auction date) ಸೆಪ್ಟೆಂಬರ್ 8 ರಿಂದ 9 ರವರೆಗೆ ಮುಂಬೈಯಲ್ಲಿ ನಡೆಯಬೇಕಿತ್ತು. ಆದರೆ ಮುಂಬರುವ ಏಷ್ಯನ್​ ಗೇಮ್ಸ್​ಗೆ ರಾಷ್ಟ್ರೀಯ ತಂಡದ ಆಟಗಾರರ ತರಬೇತಿ ಶಿಬಿರದ ಸಿದ್ಧತೆಗಳಿಗೆ ನೆರವಾಗುವಂತೆ ಕೋರಿ ಭಾರತೀಯ ಅಮೆಚೂರ್​ ಕಬಡ್ಡಿ ಫೆಡರೇಶನ್(Amateur Kabaddi Federation of India)​ ಸಲ್ಲಿಸಿದ ಮನವಿಯ ಮೇರೆಗೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

ಪ್ರೊ ಕಬಡ್ಡಿ ಲೀಗ್​ನ ಸಂಘಟಕರಾದ ಮಶಾಲ್ ಸ್ಪೋರ್ಟ್ಸ್*Mashal Sports) ಸಂಸ್ಥೆ ಹರಾಜು ಪ್ರಕ್ರಿಯೆಯನ್ನು ಮುಂದೂಡಿದ ವಿಚಾರವನ್ನು ಖಚಿತಪಡಿಸಿದೆ. ಮುಂದಿನ ದಿನಾಂಕವನ್ನು ಶ್ರೀಘ್ರದಲ್ಲೇ ತಿಳಿಸಲಾಗುವುದು ಎಂದು ತಿಳಿಸಿದೆ. ಈ ಬಾರಿ ಕೆಲ ಬದಲಾವಣೆ ಮಾಡಲಾಗಿದ್ದು, ಮೂರು ಆವೃತ್ತಿಗಳ ಬಳಿಕ ಪ್ರತಿ ಫ್ರಾಂಚೈಸಿಗೆ ಲಭ್ಯವಿರುವ ಒಟ್ಟು ವೇತನ 4.4 ಕೋಟಿ ರೂ.ಗಳನ್ನು 5 ಕೋಟಿ ರೂ.ಗೆ ಏರಿಸಲಾಗಿದೆ. ಈ ಮಹತ್ವದ ಟೂರ್ನಿ ಡಿಸೆಂಬರ್​ 2ರಂದು ಆರಂಭವಾಗಲಿದೆ. 

ಹಳೆಯ ಮಾದರಿಯಲ್ಲಿ ಟೂರ್ನಿ

10ನೇ ಆವೃತ್ತಿಯ ಈ ಲೀಗ್​ ಎರಡು ವರ್ಷಗಳ ಬಳಿಕ ಮತ್ತೆ ಹಳೆಯ “ಕ್ಯಾರವಾನ್‌ ಮಾದರಿ’ಗೆ(carvan format) ಮರಳಿದೆ. ಎಲ್ಲ 12 ಫ್ರಾಂಚೈಸಿಗಳ ತವರು ಕೇಂದ್ರಗಳಲ್ಲಿ ಪಂದ್ಯಗಳನ್ನು ಆಡಲಾಗುವುದು. ಇದರಿಂದ ತವರಿನ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳ ಪಂದ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕೊರೊನಾ ಕಾರಣದಿಂದ 8ನೇ ಪ್ರೊ ಕಬಡ್ಡಿ ಪಂದ್ಯಾವಳಿ ಸಂಪೂರ್ಣವಾಗಿ ಬೆಂಗಳೂರಿನ “ಬಯೋ ಬಬಲ್‌’ ಸುರಕ್ಷೆಯಲ್ಲಿ ನಡೆದಿತ್ತು. 9ನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಗಳನ್ನು ಬೆಂಗಳೂರು, ಪುಣೆ, ಹೈದರಾಬಾದ್‌ ಮತ್ತು ಮುಂಬಯಿಯಲ್ಲಿ ಆಡಲಾಗಿತ್ತು. ಈ ಬಾರಿ ಎಲ್ಲ ತಂಡಗಳ ತವರಿನಲ್ಲಿಯೂ ನಡೆಯಲಿದೆ.

ಇದನ್ನೂ ಓದಿ Pro Kabaddi: ಎರಡು ವರ್ಷಗಳ ಬಳಿಕ ಹಳೆ ಮಾದರಿಗೆ ಮರಳಿದ ಪ್ರೊ ಕಬಡ್ಡಿ ಲೀಗ್

500ಕ್ಕೂ ಹೆಚ್ಚು ಆಟಗಾರರು

ಹರಾಜು ಪ್ರಕ್ರಿಯೆಯಲ್ಲಿ ದೇಶೀಯ ಮತ್ತು ವಿದೇಶಿ ಆಟಗಾರರನ್ನು ಎ, ಬಿ, ಸಿ ಮತ್ತು ಡಿ. ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗದಲ್ಲಿ ಆಟಗಾರರನ್ನು ‘ಆಲ್ ರೌಂಡರ್ಸ್’, ‘ಡಿಫೆಂಡರ್ಸ್’ ಮತ್ತು ‘ರೈಡರ್ಸ್’ ಎಂದು ವಿಂಗಡಿಸಲಾಗುವುದು. ಪ್ರವರ್ಗ ಎ- 30 ಲಕ್ಷ ರೂ., ಬಿ ವರ್ಗಕ್ಕೆ 20 ಲಕ್ಷ ರೂ., ವರ್ಗ ಸಿಗೆ 13 ಲಕ್ಷ ರೂ., ಡಿ ವರ್ಗಕ್ಕೆ 9 ಲಕ್ಷ ರೂ. ಹೊಂದಿರುತ್ತಾರೆ. ಒಟ್ಟು 500ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿ ಇರುವ ಸಾಧ್ಯತೆ ಇದೆ.

ಲೀಗ್ ನಿಯಮಗಳ ಪ್ರಕಾರ 9ನೇ ಆವೃತ್ತಿಯಲ್ಲಿ ಆಡಿದ ಕೆಲ ಆಟಗಾರರನ್ನು ತಮ್ಮದೇ ತಂಡದಲ್ಲಿ ಉಳಿಸಿಕೊಳ್ಳುವ ಆಯ್ಕೆಯನ್ನು ಫ್ರಾಂಚೈಸಿಗಳು ಹೊಂದಿವೆ. 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಈ ಬಾರಿಯ ಏಷ್ಯಾನ್​ ಕಬಡ್ಡಿ ಚಾಂಪಿಯನ್​​ಶಿಪ್​ನಲ್ಲಿ ಗಮನ ಸೆಳೆದಿದ್ದ ಅನೇಕ ಆಟಗಾರರು ಉತ್ತಮ ಬೆಲೆಗೆ ಖರೀದಿಯಾಗುವ ಸಾಧ್ಯತೆ ಇದೆ.

Exit mobile version