Site icon Vistara News

Pro Kabaddi: ಪಾಟ್ನಾ ಮೇಲೆ ಸವಾರಿ ಮಾಡಿದ ಪುಣೇರಿ ಪಲ್ಟಾನ್

Pro Kabaddi

ಚೆನ್ನೈ: ಪ್ರೊ ಕಬಡ್ಡಿ ಲೀಗ್​ನ(Pro Kabaddi) 42ನೇ ಪಂದ್ಯದಲ್ಲಿ ಆಡಲಿಳಿದ ಅಗ್ರಸ್ಥಾನಿ ಪುಣೇರಿ ಪಲ್ಟಾನ್(Puneri Paltan)​ ತಂಡ ಪಾಟ್ನಾ ಪೈರೆಟ್ಸ್(Patna Pirates) ವಿರುದ್ಧ 18 ಅಂಕದ ಅಂತರದಿಂದ ಗೆದ್ದು ಬೀಗಿದೆ. ಏಕಪಕ್ಷೀಯವಾಗಿ ಸಾಗಿದ ಈ ಪಂದ್ಯದಲ್ಲಿ ಪಾಟ್ನಾಕ್ಕೆ ಯಾವುದೇ ಹಂತದಲ್ಲಿಯೂ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಪುಣೇರಿ ತಂಡ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಪಂದ್ಯದ ಆರಂಭದಿಂದಲೇ ಬಿಗಿ ಹಿಡಿತ ಸಾಧಿಸಿದ ಪುಣೇರಿ ತಂಡ ಇದೇ ಜೋಶನ್ನು ಪಂದ್ಯದ ಕೊನೆ ತನಕವೂ ತೋರಿಸುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ 46-28 ಅಂತರದಿಂದ ಗದ್ದು ಬೀಗಿತು. ಯುವ ರೇಡರ್​ ಪಂಕಜ್​ ಬಿರುಗಾಳಿಯಂತ ವೇಗದ ರೇಡಿಂಗ್​ ನಡೆಸಿ ಪಾಟ್ನಾ ರಕ್ಷಣ ಕೋಟೆಯನ್ನು ಛಿದ್ರಗೊಳಿಸಿದರು. ಅವರ ರೇಡಿಂಗ್​ ಆರ್ಭಟವನ್ನು ತಡೆದು ನಿಲ್ಲಿಸುವಲ್ಲಿ ಪಾಟ್ನಾ ಡಿಫೆಂಡರ್​ಗಳು ವಿಫಲರಾದರು. 10 ರೇಡಿಂಗ್​ ನಡೆಸಿ 11 ಅಂಕ ಕಳೆ ಹಾಕಿದರು.

ಪಂಕಜ್ ಅವರಿಗೆ ತಂಡದ ಸಹ ಆಟಗಾರ ಮೋಹಿತ್​ ಕೂಡ ಉತ್ತಮ ಸಾಥ್​ ನೀಡಿದರು. ಅವರು ಕೂಡ ಜಾಣ್ಮಯಿಂದ ರೇಡಿಂಗ್​ ನಡೆಸಿ 9 ಅಂಕ ಪಡೆದರು. ಆಲ್​ರೌಂಡರ್​ ಆಟವಾಡಿದ ಅಸ್ಲಂ ಮುಸ್ತಫಾ 6 ಅಂಕ ಗಳಿಸಿದರೆ, ಡಿಫೆಂಡರ್​ ಅಭಿನೇಶ್(5),ಮೊಹಮ್ಮದ್ರೇಜಾ(6), ಗೌರವ್​(2) ಅಂಕ ಗಳಿಸಿದರು. ಒಟ್ಟಾರೆ ಪುಣೇರಿ ತಂಡದ ಆಟ ಸರ್ವಾಂಗೀಣವಾಗಿತ್ತು.

ಸಚಿನ್​ಗೆ ಸಾಥ್​ ನೀಡಿದ ಸಹ ಆಟಗಾರರು

ಪಾಟ್ನಾ ಪೈರೆಟ್ಸ್ ತಂಡದ ಪ್ರಧಾನ ರೇಡರ್​ ಸಚಿನ್​ ಅವರಿಗೆ ಈ ಪಂದ್ಯದಲ್ಲಿ ಸಹ ಆಟಗಾರರಿಂದ ಅಷ್ಟಾಗಿ ಉತ್ತಮ ಸಾಥ್​ ಸಿಗಲಿಲ್ಲ. ಜತೆಗೆ ಅವರ ಆಟವೂ ಕೂಡ ಎಂದಿನಂತೆ ಬಿರುಸಿನಿಂದ ಕೂಡಿರಲಿಲ್ಲ. ಹೀಗಾಗಿ ತಂಡ ಸೋಲಿಗೆ ಸಿಲುಕಿತು. 15 ರೇಡಿಂಗ್​ ನಡೆಸಿದ ಸಚಿನ್​ 9ರಲ್ಲಿ ಯಶಸ್ವಿಯಾದರು. ನಾಯಕ ನೀರಜ್​ ಅವರದ್ದು ಶೂನ್ಯ ಸಂಪಾದನೆ. ಸುಧಾಕರ್​(5) ಮತ್ತು ಮಂಜಿತ್​(4) ಅಂಕ ಪಡೆದರೂ ಪಾಟ್ನಾ ಗಳಿಸಿದ ಅಂಕದ ಮುಂದೆ ಇದು ಎಲ್ಲಿಗೂ ಸಾಕಾಗಲಿಲ್ಲ. ಅಂತಿಮ ಹಂತದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ಸಂದೀಪ್​ ಕುಮಾರ್​ 4 ಅಂಕ ಗಳಿಸಿ ಮಿಂಚಿದರೂ ಕೂಡ ಅದಾಗಲೇ ಪಂದ್ಯದ ಸಮಯವೂ ಕೂಡ ಮುಕ್ತಾಯದ ಹಂತಕ್ಕೆ ಬಂದು ನಿಂತಿತ್ತು. ಒಂದೊಮ್ಮ ಇವರು ಆರಂಭದಿಂದಲೇ ಆಡುವ ಬಳಗದಲ್ಲಿ ಅವಕಾಶ ಪಡೆಯುತ್ತಿದ್ದರೆಎ ಪಂದ್ಯವನ್ನು ಗೆಲ್ಲುವು ಸಾಧ್ಯತೆಯೂ ಇರುತ್ತಿತ್ತು.

ಇದನ್ನೂ ಓದಿ Pro Kabaddi: ತವರಿನಲ್ಲೇ ಹೀನಾಯ ಸೋಲು ಕಂಡ ತಮಿಳ್​ ತಲೈವಾಸ್​

Exit mobile version