Site icon Vistara News

Pro Kabaddi: ಪುಣೇರಿ ಪಲ್ಟನ್ ಎದುರು ಅಬ್ಬರಿಸದ ಬುಲ್ಸ್; ಹೀನಾಯ ಸೋಲು

Puneri Paltan vs Bengaluru Bulls

ಪುಣೆ: ಪುಣೇರಿ ಪಲ್ಟನ್(Puneri Paltan) ತಂಡ ತವರಿನ ಅಂತಿಮ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​(Bengaluru Bulls) ತಂಡವನ್ನು ಬರೋಬ್ಬರಿ 43-18 ಅಂಕದ ಅಂತರದಿಂದ ಮಗುಚಿ ಹಾಕಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ದಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಜೈಪುರ ಪಿಂಕ್​ ಪ್ಯಾಂಥರ್ಸ್(Jaipur Pink Panthers)​ 41-24 ಅಂತರದಿಂದ ಯುಪಿ ಯೋಧಾಸ್(UP Yoddhas)​ಗೆ ಸೋಲಿನ ರುಚಿ ತೋರಿಸಿತು.

ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣ, ಪುಣೆ ಚರಣದ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದ ಪುಣೇರಿ ಪಲ್ಟನ್ ಆಕ್ರಮಣಕಾರಿ ಆಟವಾಡುವ ಮೂಲಕ ಬುಲ್ಸ್​ ತಂಡಕ್ಕೆ ಸೋಲಿನ ಏಟು ನೀಡಿತು. ಇದು ಕೂಡ ದೊಡ್ಡ ಅಂತರದ ಮೂಲಕ. ಮೊದಲಾರ್ಧದ ಮುಕ್ತಾಯಕ್ಕೆ ಬೆಂಗಳೂರು ತಂಡದ ಸೋಲು ಖಚಿತವಾಗಿತ್ತು. ಏಕೆಂದರೆ ಪುಣೆ 28 ಅಂಕ ಗಳಿಸಿತ್ತು. ಬುಲ್ಸ್​ ಕೇವಲ 8 ಅಂಕಗಳಿಸಿತ್ತು.

ದ್ವಿತೀಯಾರ್ಧದಲ್ಲಿಯೂ ಬುಲ್ಸ್​ ಅಂಕಗಳಿಸಲು ಸಂಪೂರ್ಣ ವಿಫಲವಾಯಿತು. ತಂಡದ ಸ್ಟಾರ್​ ರೇಡರ್​ಗಳಾದ ಭರತ್​ ಕುಮಾರ್​ ಈ ಪಂದ್ಯದಲ್ಲಿ ಸಂಪೂರ್ಣ ವಿಫಲರಾಗಿ ಕೇವಲ ಒಂದಂಕಿಗೆ ಸೀಮಿತರಾದರು. ವಿಕಾಸ್​ ಖಂಡೋಲಾ 5 ಅಂಕ ಪಡೆದರು. ಇವರದ್ದೇ ತಂಡದ ಅತ್ಯಧಿದ ಅಂಕವಾಯಿತು. ದ್ವಿತೀಯು ಅವಧಿಯಲ್ಲಿ ಬುಲ್ಸ್​ಗೆ ಒಲಿದದ್ದು ಕೇವಲ 10 ಅಂಕ. ಒಟ್ಟಾರೆ ಗಳಿಕೆ 18.

ಇದನ್ನೂ ಓದಿ Pro Kabaddi: ಯೋಧಾಸ್​ ವಿರುದ್ಧ ಬೃಹತ್​ ಮೊತ್ತದ ಗೆಲುವು ಕಂಡ ಜೈಪುರ

ಪುಣೆ ತಂಡದಲ್ಲಿ ಬಹುತೇಕ ಎಲ್ಲ ಆಟಗಾರರು ಕೂಡ ಅಂಕಗಳಿಸುವಲ್ಲಿ ಯಶಸ್ವಿಯಾದರು. ಪಂದ್ಯದ ಹೈಲೆಟ್​ ಎಂದರೆ ಅಭಿನೇಶ್ ನಾಡರಾಜನ್ ಅವರ ಟ್ಯಾಕಲ್​ಗಳು. ಏಕಾಂಗಿಯಾಗಿ ಬಂದು ಎದುರಾಳಿಗಳನ್ನು ಹಿಡುದು ನಿಲ್ಲಿಸಿ ತಂಡಕ್ಕೆ ಅಂಕ ತಂದುಕೊಡುತ್ತಿದ್ದರು. ಇವರಿಗೆ ಪೈಪೋಟಿ ನೀಡಿದ್ದು ಸಹ ಆಟಗಾರ ಗೌರವ್​. ತಾನು ಕೂಡ ಕಡಿಮೆ ಇಲ್ಲ ಎನ್ನುವಂತೆ ಡಿಫೆಂಡಿಂಗ್​ನಲ್ಲಿ 4 ಅಂಕ ಗಳಿಸಿದರು. ರೇಡಿಂಗ್​ನಲ್ಲಿ ಅಸ್ಲಾಂ ಮುಸ್ತಾಫ(6), ಪಂಕಜ್​(5), ಮೋಹಿತ್​(8), ಮೊಹಮ್ಮದ್ರೇಜಾ(7) ಅಂಕ ಕಲೆಹಾಕಿದರು.

ಯೋಧಾಸ್​ ಸೋಲುಣಿಸಿದ ಜೈಪುರ

ಹಾಲಿ ಚಾಂಪಿಯನ್​ ಜೈಪುರ ಪಿಂಕ್​ ಪ್ಯಾಂಥರ್ಸ್(Jaipur Pink Panthers)​ ತಂಡ ತನ್ನ ಖ್ಯಾತಿಗೆ ತಕ್ಕಂತೆ ಆಡುವ ಮೂಲಕ ಯುಪಿ ಯೋಧಾಸ್(UP Yoddhas)​ ವಿರುದ್ಧ 41-24 ಅಂತರದ ಬೃಹತ್​ ಮೊತ್ತದ ಗೆಲುವು ಸಾಧಿಸಿದೆ. ಗೆಲುವಿನ ಅಂತರ 17 ಅಂಕ. ಯುಪಿ ಆಟಗಾರರು ಎಲ್ಲ ವಿಭಾಗದಲ್ಲಿಯೂ ವಿಫಲರಾದರು. 13 ರೇಡಿಂಗ್​ ಅಂಕ ಗಳಿಸಿದ ಅರ್ಜುನ್​ ಜೈಪುರ ತಂಡದ ಗೆಲುವಿನ ರೂವಾರಿ ಎನಿಸಿದರು.

ಮಿಂಚಿದ ಅರ್ಜುನ್​

ಪ್ರತಿ ಪಂದ್ಯದಲ್ಲಿಯೂ ಉತ್ತಮ ರೇಡಿಂಗ್​ ಪ್ರದರ್ಶನ ತೋರುವ ಮೂಲಕ ಗಮನ ಸೆಳೆಯುವ ಜೈಪುರ ತಂಡದ ಅರ್ಜುನ್​ ದೇಸ್ವಾಲ್​ ಈ ಪಂದ್ಯದಲ್ಲಿಯೂ ಸೂಪರ್​ 10 ರೇಡಿಂಗ್​ ಅಂಕ ಗಳಿಸುವ ಮೂಲಕ ಮಿಂಚಿದರು. ಇವರಿಗೆ ತಂಡದ ಸಹ ಆಟಗಾರರಾದ ನಾಯಕ ಸುನೀಲ್​(3), ಕನ್ನಡಿಗ ಅಭಿಷೇಕ್​ ಗೌಡ(3), ವಿ ಅಜಿತ್​(4) ಮತ್ತು ರೆಜಾ ಮಿರಬಗೇರಿ(4) ಅಂಕ ಗಳಿಸಿ ಉತ್ತಮ ಸಾಥ್​ ನೀಡಿದರು.

Exit mobile version