ಬೆಂಗಳೂರು: ಯುಪಿ ಯೋಧಾಸ್ ತಂಡದ ಸುರೇಂದರ್ ಗಿಲ್(14) ಮತ್ತು ಪ್ರದೀಪ್ ನರ್ವಾಲ್(8) ಅವರ ರೇಡಿಂಗ್ ಆರ್ಭಟಕ್ಕೆ ಬೆಚ್ಚಿ ಬಿದ್ದ ತೆಲುಗು ಟೈಟಾನ್ಸ್(UP Yoddhas vs Telugu Titans) 15 ಅಂಕದ ಅಂತರದಿಂದ ಸೋಲು ಕಂಡಿದೆ. ಇದಕ್ಕೂ ಮುನ್ನ ನಡೆದ ದಿನದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್(bengaluru bulls) ತಂಡ ಹರ್ಯಾಣ ಸ್ಟೀಲರ್(haryana steelers) ಎದುರು 38-32 ಅಂತರದ ಸೋಲಿಗೆ ತುತ್ತಾಗಿತ್ತು.
ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನ 15ನೇ ಪಂದ್ಯದಲ್ಲಿ ಕಣಕ್ಕಿಳಿದ್ದ ಯುಪಿ ಯೋಧಾಸ್ ತಂಡ ಎದುರಾಳಿ ತೆಲುಗು ಟೈಟಾನ್ಸ್ ವಿರುದ್ಧ 48-33 ಅಂಕಗಳ ಅಂತರದಿಂದ ಅಧಿಕಾರಯುತ ಗೆಲುವು ಸಾಧಿಸಿತು. ರೇಡಿಂಗ್ ಮತ್ತು ಡಿಫೆಂಡಿಂಗ್ ವಿಭಾಗದಲ್ಲಿ ಉತ್ಕೃಷ್ಟ ಮಟ್ಟದ ಆಟ ಪ್ರದರ್ಶಿಸಿತು.
यूपी के योद्धओं ने भौकाली अंदाज में दर्ज की अपनी दूसरी जीत 💥
— ProKabaddi (@ProKabaddi) December 9, 2023
सुपर से भी ऊपर इस परफॉर्मेंस को कितने 💙 देंगे आप? 💬 #ProKabaddi #PKL #PKLSeason10 #HarSaansMeinKabaddi #UPvTT #UPYoddhas #TeluguTitans pic.twitter.com/UzEhAj4tHj
ತೆಲುಗು ತಂಡದಲ್ಲಿ ಸ್ಟಾರ್ ರೇಡರ್ ಪವನ್ ಸೆಹ್ರಾವತ್(12 ಅಂಕ) ಏಕಾಂಗಿಯಾಗಿ ಹೋರಟ ನಡೆಸಿ ಸೋಲಿನ ಅಂತರವನ್ನು ಕೊಂಚ ಕಡಿಮೆಗೊಳಿಸಿದರು. ಆದರೆ ಯೋಧಾಸ್ ಪರ ಮಿಂಚಿನ ವೇಗದ ರೇಡಿಂಗ್ ನಡೆಸಿದ ಅನುಭವಿ ಸುರೇಂದರ್ ಗಿಲ್ ಬರೋಬ್ಬರಿ 14 ಅಂಕ ಕಲೆಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹಿರಿಯ ಆಟಗಾರ, ಪ್ರೊ ಕಬಡ್ಡಿಯ ದಾಖಲೆ ವೀರ ಪ್ರದೀಪ್ ನರ್ವಾಲ್ 8 ಅಂಕ ಗಳಿಸಿ ನೆರವಾದರು. ಆಲ್ರೌಂಡರ್ ಪ್ರದರ್ಶನ ತೋರಿದ ನಿತಿನ್(4), ಗುರ್ದೀಪ್(3), ನಿತೇಶ್ ಕುಮಾರ್(5) ಮತ್ತು ಸುಮೀತ್(4) ಅಂಕ ಕಲೆಹಾಕಿ ಗೆಲುವಿನಲ್ಲಿ ಪ್ರಮುಖ ಕೊಡುಗೆ ಸಲ್ಲಿಸಿದರು.
ಇದನ್ನೂ ಓದಿ Pro Kabaddi: ಸತತ 4ನೇ ಸೋಲು ಕಂಡ ಬೆಂಗಳೂರು ಬುಲ್ಸ್
Check out the 📸 from tonight that left us in awe 🤩
— ProKabaddi (@ProKabaddi) December 9, 2023
Here are the best shots from #BLRvHS & UPvTT 👉 Visit https://t.co/cfORnVakqn or the Pro Kabaddi Official App for more!#ProKabaddi #PKLSeason10 #HarSaansMeinKabaddi pic.twitter.com/6tt2SS5wCu
4ನೇ ಸೋಲು ಕಂಡ ಬುಲ್ಸ್
ದಿನದ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ ತಂಡ ಹರ್ಯಾಣ ಸ್ಟೀಲರ್ ವಿರುದ್ಧ ಕಣಕಿಳಿದಿದ್ದು. ಆದರೆ 38-32 ಅಂತರದ ಸೋಲಿಗೆ ತುತ್ತಾಯಿತು. ಈ ಮೂಲಕ ಸತತ ನಾಲ್ಕನೇ ಸೋಲು ಕಂಡ ಸಂಕಷ್ಟಕ್ಕೆ ಸಿಲುಕಿತು. ಆರಂಭದಲ್ಲಿ ಘರ್ಜಿಸಿದ ಗೂಳಿಗಳು ಬಳಿಕ ಪಂದ್ಯ ಸಾಗುತ್ತಲೇ ಹೋದಂತೆ ತಮ್ಮ ಆರ್ಭಟವನ್ನು ಕಡಿಮೆ ಮಾಡಿದರು. 5-0 ಮುನ್ನಡೆ ಕಾಯ್ದುಕೊಂಡು ಉತ್ತಮ ಮುನ್ನಡೆ ಗಳಿಸಿದ ಬುಲ್ಸ್ ಆಟಗಾರರು ಬಳಿಕ ಹಲವು ತಪ್ಪುಗಳಿಂದ ಎದುರಾಳಿ ತಂಡಕ್ಕೆ ಸತತವಾಗಿ ಅಂಕವನ್ನು ನೀಡುತ್ತಲೇ ಹೋದರು. ಆದರೆ ಬುಲ್ಸ್ನ ಭರತ್ ಕುಮಾರ್ ಮಾತ್ರ ಶಕ್ತಿ ಮೀರಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರೂ ಅವರಿಗೆ ಉಳಿದ ಆಟಗಾರರಿಂದ ಉತ್ತಮ ಸಾಥ್ ಸಿಗದ ಪರಿಣಾಮ ತಂಡ ಸೋಲು ಕಂಡಿತು.
हरियाणा के छोरों ने मैट पर गाड़ी लठ्ठ 🔥
— ProKabaddi (@ProKabaddi) December 9, 2023
स्टीलर्स की पहली जीत पर क्या है आपकी राय? 💬
#ProKabaddi #PKL #PKLSeason10 #HarSaansMeinKabaddi #BLRvHS #BengaluruBulls #HaryanaSteelers pic.twitter.com/Rr2w7ZU6LX
ಎದುರಾಳಿ ಕೋಟೆಗೆ ನುಗ್ಗಿ ಅಂಕಗಳನ್ನು ಕದಿಯುತ್ತಲೇ ಇದ್ದರು. ಆದರೆ ಡಿಫೆಂಡಿಂಗ್ ವಿಭಾಗದಲ್ಲಿ ಉತ್ತಮ ಬೆಂಬಲ ಸಿಗದ ಕಾರಣ ಅವರು ಎಷ್ಟೇ ಅಂಕ ಗಳಿಸುತ್ತಾ ಹೋದರೂ ಇದು ಲೆಕ್ಕಕ್ಕೆ ಬರುತ್ತಿರಲಿಲ್ಲ. ಹರ್ಯಾಣ ಸ್ಟೀಲರ್ ಮುನ್ನಡೆ ಕಾಯ್ದುಕೊಂಡೇ ಸಾಗಿತು. ಸೂಪರ್ 10 ಸಾಧಿಸಿದ ಭರತ್ ಅವರು 26 ರೇಡಿಂಗ್ ನಡೆಸಿ 14 ಅಂಕ ಕಲೆ ಹಾಕಿದರು. ಇದರಲ್ಲಿ 11 ಟಚ್ ಮತ್ತು ಮೂರು ಬೋನಸ್ ಅಂಕ ಒಳಗೊಂಡಿತು.