ಬೆಂಗಳೂರು: ನರೇಂದರ್(10) ಅವರ ರೇಡಿಂಗ್ ಮತ್ತು ಸಾಹಿಲ್ ಗುಲಿಯಾ(7) ಡಿಫೆಂಡಿಂಗ್ ಆಟಕ್ಕೆ ತೆಡೆಯೊಡ್ಡುವಲ್ಲಿ ವಿಫಲವಾದ ತೆಲುಗು ಟೈಟಾನ್ಸ್(Telugu Titans) ತಂಡ ತಮಿಳ್ ತಲೈವಾಸ್(Tamil Thalaivas) ವಿರುದ್ಧ 38-36 ಅಂಕಗಳಿಂದ ಸೋಲು ಕಂಡಿದೆ. ಈ ಮೂಲಕ ಗೆಲುವಿನ ಖಾತೆ ತರೆಯುವ ಇರಾದೆಯೊಂದಿಗೆ ಆಡಿಲಿಳಿದ ತೆಲುಗು ತಂಡಕ್ಕೆ ಮತ್ತೆ ನಿರಾಸೆಯಾಗಿದೆ.
ஜெயிச்சிட்டோம் மாறா 🔥
— ProKabaddi (@ProKabaddi) December 13, 2023
இரண்டாவது வெற்றியை கைப்பற்றியது தமிழ் தலைவாஸ் 😍
தொடர்ந்து பாருங்க #PKLSeason10 #Prokabaddi நேரலை#ProKabaddiLeague #PKL #HarSaansMeinKabaddi #CHEvTT #TamilThalaivas #TeluguTitans pic.twitter.com/LINJbbEZHd
ಸ್ಟಾರ್ ಆಟಗಾರ ಪವನ್ ಸೆಹ್ರಾವತ್ ಅವರು ತೆಲುಗು ಟೈಟಾನ್ಸ್ ತಂಡದಲ್ಲಿದ್ದರೂ ಅವರು ಈ ಹಿಂದೆ ಬುಲ್ಸ್ ತಂಡದಲ್ಲಿ ಮಾಡುತ್ತಿದ್ದ ರೇಡಿಂಗ್ ಕಮಾಲ್ ತೋರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ಪಂದ್ಯದಲ್ಲಿ 17 ರೇಡ್ ಮಾಡಿ ಗಳಿಸಿದ್ದು ಕೇವಲ 7 ಅಂಕ ಉಳಿದ 10 ರೇಡ್ಗಳು ಅಂಕ ರಹಿತವಾಗಿತ್ತು.
Supe𝐑𝐑𝐑 tackle ft. Milad Jabbari 😍🤯#ProKabaddiLeague #ProKabaddi #PKL #PKLSeason10 #HarSaansMeinKabaddi #CHEvTT #TamilThalaivas #TeluguTitans pic.twitter.com/vVIyXOkXPS
— ProKabaddi (@ProKabaddi) December 13, 2023
ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಆರಂಭದಿಂದಲೇ ಹಿಡಿತ ಸಾಧಿಸಿದ ತಲೈವಾಸ್ ಮೊದಲಾರ್ಧದ ಆಟ ಮುಕ್ತಾಯಕ್ಕೆ 20-17 ಅಂಕದ ಮುನ್ನಡೆ ಸಾಧಿಸಿತು. ಇದೇ ಲಯವನ್ನು ಪಂದ್ಯದುದ್ದಕ್ಕೂ ತೋರ್ಪಡಿಸಿ ಮೇಲುಗೈ ಸಾಧಿಸಿತು. ತಂಡದ ಎಲ್ಲ ಪ್ರಮುಖ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರುವ ಮೂಲಕ ಗೆಲುವು ತಮ್ಮದಾಗಿಸಿಕೊಂಡರು. ಅಂತಿಮ 4 ನಿಮಿಷದ ಆಟದಲ್ಲಿ ಅತ್ಯಂತ ಜಿದ್ದಾಜಿದ್ದಿ ಏರ್ಪಟ್ಟರೂ ಕೂಡ ತಲೈವಾಸ್ ಅಂಕದ ಹಿನ್ನಡೆಯಾಗದಂತೆ ಎಚ್ಚರಿಕೆಯ ಆಟವಾಡಿತು.
ಇದನ್ನೂ ಓದಿ Pro Kabaddi: ಬೆಂಗಾಲ್ ವಾರಿಯರ್ಸ್ ಆರ್ಭಟಕ್ಕೆ ಪಲ್ಟಿಯಾದ ಪಾಟ್ನಾ ಪೈರೆಟ್ಸ್
Name: Amirhossein Bastami 💥
— ProKabaddi (@ProKabaddi) December 13, 2023
Fame: 𝐓𝐚𝐜𝐤𝐥𝐞 𝐆𝐚𝐥𝐨𝐫𝐞 💯#ProKabaddiLeague #ProKabaddi #PKL #PKLSeason10 #HarSaansMeinKabaddi #CHEvTT #TamilThalaivas #TeluguTitans pic.twitter.com/FoO7hwGkn7
ತಮಿಳ್ ಪರ ನರೇಂದರ್ ಒಟ್ಟು 16 ಬಾರಿ ಎದುರಾಳಿ ಕೋಟೆಗೆ ನುಗ್ಗಿ 10 ಅಂಕ ಕದಿಯುವಲ್ಲಿ ಯಶಸ್ಸು ಕಂಡರು. ಸಹ ಆಟಗಾರ ಸಾಹಿಲ್ ಗುಲಿಯಾ ಅಭಿಮನ್ಯುವಿಗೆ ರಚಿಸಿದ ಚಕ್ರವ್ಯೂಹದಂತೆ ಕೋಟೆಯನ್ನು ನಿರ್ಮಿಸಿ ಎದುರಾಳಿ ರೇಡರ್ಗಳನ್ನು ಕಟ್ಟಿ ಹಾಕಿದರು. ಇವರ ಈ ಕೋಟೆಯನ್ನು ಕೆಡವಲು ಟೈಟಾನ್ಸ್ಗೆ ಸಾಧ್ಯವಾಗಲೇ ಇಲ್ಲ. ಗುಲಿಯಾ 7 ಅಂಕ ಗಳಿಸಿದರು. ಉಳಿದಂತೆ ರೇಡರ್ ಅಜಿಂಕ್ಯ ಪವಾರ್, ಜತಿನ್ ಮತ್ತು ನಿತಿನ್ ಸಿಂಗ್ ತಲಾ 4 ಅಂಕ ಕಲೆಹಾಕಿದರು. ತೆಲುಗು ಪರ ಪವನ್ ಸೆಹ್ರಾವತ್(7), ಮಿಲಾದ್(4), ಅಜಿತ್(4), ರಾಬಿನ್ ಚೌಧರಿ(7), ಸಂಜೀವ್(6) ಅಂಕ ಗಳಿಸಿದರು.
Always 𝐑𝐀𝐈𝐃 like this Titan 💪
— ProKabaddi (@ProKabaddi) December 13, 2023
🔥 Sanjeevi S 🔥#ProKabaddiLeague #ProKabaddi #PKL #PKLSeason10 #HarSaansMeinKabaddi #CHEvTT #TamilThalaivas #TeluguTitans pic.twitter.com/t7KB1fkKVl