Site icon Vistara News

PSL 2023: ಟಿ20 ಕ್ರಿಕೆಟ್​ನಲ್ಲಿ ನೂತನ ವಿಶ್ವ ದಾಖಲೆ ಸೃಷ್ಟಿ; ಏನದು?

PSL 2023: New world record created in T20 cricket; what is

PSL 2023: New world record created in T20 cricket; what is

ಲಾಹೋರ್​: ಪಾಕಿಸ್ತಾನ ಸೂಪರ್ ಲೀಗ್‌(Pakistan Super League) ಟಿ20 ಕ್ರಿಕೆಟ್‌ನಲ್ಲಿ ನೂತದ ದಾಖಲೆಯೊಂದು ನಿರ್ಮಾಣವಾಗಿದೆ. ಮುಲ್ತಾನ್ ಸುಲ್ತಾನ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ (Multan Sultans and Quetta Gladiators) ತಂಡಗಳ ನಡುವಿನ ಪಂದ್ಯದಲ್ಲಿ ಒಟ್ಟು 515 ರನ್ ದಾಖಲಾಗಿದೆ. ಟಿ20 ಕ್ರಿಕೆಟ್‌ ಇತಿಹಾಸದಲ್ಲೇ (T20 cricket) ಇದು ನೂತನ ವಿಶ್ವ ದಾಖಲೆಯಾಗಿದೆ.

ಶನಿವಾರ(ಮಾರ್ಚ್ 11) ರಾತ್ರಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 262 ರನ್ ಗಳಿಸಿತು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿದ ಉಸ್ಮಾನ್ ಕೇವಲ 36 ಎಸೆತಗಳಲ್ಲಿ 100 ರನ್ ಪೂರೈಸುವ ಮೂಲಕ ಪಿಎಸ್‌ಎಲ್ ಟೂರ್ನಿಯಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆ ಬರೆದರು. ಒಟ್ಟು 43 ಎಸೆತಗಳಲ್ಲಿ 120 ರನ್ ಬಾರಿಸಿದರು.

ಇದನ್ನೂ ಓದಿ WPL 2023: ಶಫಾಲಿ ವರ್ಮಾ ಬ್ಯಾಟಿಂಗ್​ ಪ್ರತಾಪಕ್ಕೆ ಬೆದರಿದ ಗುಜರಾತ್​ ಜೈಂಟ್ಸ್​; ಡೆಲ್ಲಿಗೆ 10 ವಿಕೆಟ್​ ಜಯ

ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಗ್ಲಾಡಿಯೇಟರ್ಸ್ ತಂಡ ಕೂಡ ಸ್ಫೋಟಕ ಬ್ಯಾಟಿಂಗ್​ ನಡೆಸಿತು. ಉಮರ್ ಯೂಸುಫ್ 67 ರನ್ ಮತ್ತು ಇಫ್ತಿಕರ್ ಅಹ್ಮದ್ 31 ಎಸೆತಗಳಲ್ಲಿ 53 ರನ್ ಬಾರಿಸಿದರು. ಆದರೆ ಅಂತಿಮವಾಗಿ 8 ವಿಕೆಟ್‌ಗೆ 253 ರನ್ ಗಳಿಸಿ ಕೇವಲ 9 ರನ್​ ಅಂತರದಿಂದ ಸೋಲು ಕಂಡಿತು.

Exit mobile version