ನವ ದೆಹಲಿ : ಗೋಲ್ಡನ್ ಗರ್ಲ್ ಹಾಗೂ ಪಯ್ಯೊಳಿ ಎಕ್ಸ್‌ಪ್ರೆಸ್ ಎಂಬ ಖ್ಯಾತಿ ಪಡೆದಿರುವ ಭಾರತ ಕ್ರೀಡಾ ಕ್ಷೇತ್ರದ ಸಾಧಕಿ ಪಿ. ಟಿ ಉಷಾ (P T Usha) ಅವರು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷರಾಗುವುದು ಬಹುತೇಕ ಖಚಿತಗೊಂಡಿದೆ. ಈ ಮೂಲಕ ಅವರು ಈ ಸ್ಥಾನ ಅಲಂಕರಿಸಿದ ಮೊದಲ ಮಹಿಳೆ ಎಂಬ ದಾಖಲೆ ಬರೆಯಲಿದ್ದಾರೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗೆ ಡಿಸೆಂಬರ್ ೧೦ರಂದು ಚುನಾವಣೆ ನಡೆಯಲಿದೆ. ಕಾರ್ಯಕಾರಿ ಹುದ್ದೆಗಳಿಗೆ ನಾಮಪತ್ರ ಸಲ್ಲಿಕೆ ಮಾಡಲು ಭಾನುವಾರ ಕೊನೇ ದಿನವಾಗಿತ್ತು. ಅಂತೆಯೇ ಅಧ್ಯಕ್ಷ ಸ್ಥಾನಕ್ಕೆ ವೇಗದ ಓಟಗಾರ್ತಿ ಪಿ.ಟಿ ಉಷಾ ಒಬ್ಬರೇ ಉಮೇದುವಾರಿಕೆ ಸಲ್ಲಿಸಿರುವ ಕಾರಣ ಅವರ ಆಯ್ಕೆ ಬಹುತೇಕ ಖಚಿತಗೊಂಡಿದೆ. ಇದರೊಂದಿಗೆ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಶಕೆ ಆರಂಭವಾಗಲಿದೆ. ಉಷಾ ಅವರ ಜತೆ ೨೪ ಸದಸ್ಯರು ಭಾನುವಾರ ನಾನಾ ಹುದ್ದೆಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಒಬ್ಬ ಅಧ್ಯಕ್ಷರು, ಒಬ್ಬರು ಹಿರಿಯ ಉಪಾಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು (ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ), ಒಬ್ಬ ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು (ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ), ಆರು ಇತರ ಕಾರ್ಯಕಾರಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲು IOA ಚುನಾವಣೆ ನಡೆಯಲಿದೆ.
58 ವರ್ಷದ ಉಷಾ ಅವರು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರು ಮತ್ತು 1984ರ ಒಲಂಪಿಕ್ಸ್ 400 ಮೀ ಹರ್ಡಲ್ಸ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು, ಭಾನುವಾರ ಇತರ 14 ಮಂದಿಯೊಂದಿಗೆ ವಿವಿಧ ಹುದ್ದೆಗಳಿಗೆ ತನ್ನ ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸಿದರು. .
ಇದನ್ನೂ ಓದಿ | ಆತ್ಮೀಯ ನಗು: ಪಿ ಟಿ ಉಷಾ ಜತೆಗಿನ ಫೋಟೋ ಶೇರ್ ಮಾಡಿಕೊಂಡ ಪ್ರಧಾನಿ ಮೋದಿ