Site icon Vistara News

Puja Tomar: ಯುಎಫ್​ಸಿ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪೂಜಾ ತೋಮರ್

Puja Tomar

Puja Tomar: Puja Tomar creates history, becomes first Indian to win in UFC

ಲೂಯಿಸ್ವಿಲ್ಲೆ: ಪ್ರತಿಷ್ಠಿತ ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್​ಶಿಪ್​ನಲ್ಲಿ(UFC) ಭಾರತದ 28 ವರ್ಷದ ಪೂಜಾ ತೋಮರ್(Puja Tomar) ಚೊಚ್ಚಲ ಬಾರಿಗೆ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ(Puja Tomar creates history). ಯುಎಫ್​ಸಿ ಪಂದ್ಯ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.

ಉತ್ತರ ಪ್ರದೇಶದ ಮೂಲದವರಾದ ತೋಮರ್, ಕಳೆದ ವರ್ಷ ಯುಎಫ್‌ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಮಾಜಿ ರಾಷ್ಟ್ರೀಯ ವುಶು ಚಾಂಪಿಯನ್, ಒನ್ ಚಾಂಪಿಯನ್‌ಶಿಪ್ ಸೇರಿದಂತೆ ಹಲವು ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಖ್ಯಾತ ಭಾರತೀಯ ಮಹಿಳಾ ಫೈಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಭಾನುವಾರ ನಡೆದ ಪಂದ್ಯದಲ್ಲಿ ತೋಮರ್ ಅವರು 30-27, 27-30, 29-28 ರ ಸ್ಪ್ಲಿಟ್ ನಿರ್ಧಾರದಿಂದ ರಾಯನ್ನೆ ಅಮಂಡಾ ಡಾಸ್ ಸ್ಯಾಂಟೋಸ್ ಅವರನ್ನು ಮಣಿಸಿ ಪ್ರಾಬಲ್ಯ ಮೆರೆದರು. ಗೆಲುವಿನ ಬಳಿಕ ಮಾತನಾಡಿದ ತೋಮರ್​, “ಈ ಗೆಲುವನ್ನು ಎಲ್ಲಾ ಭಾರತೀಯ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ರಾಷ್ಟ್ರಗೀತೆ ಮತ್ತು ತ್ರಿವರ್ಣ ಧ್ವಜದೊಂದಿಗೆ ಹೊರ ನಡೆಯುವುದು ನನಗೆ ರೋಮಾಂಚನ ನೀಡಿತು” ಎಂದು ಅವರು ಹೇಳಿದರು.

ಇದನ್ನೂ ಓದಿ French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

ಮೂರು ಸುತ್ತಿನ ಈ ಜಿದ್ದಾಜಿದ್ದಿನ ಪಂದ್ಯದಲ್ಲಿ ಉಭಯ ಆಟಗಾರ್ತಿಯರು ಕೂಡ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿದರು. ಮೊದಲ ಸುತ್ತಿನಲ್ಲಿ ಗೆದ್ದ ತೋಮರ್​, ದ್ವಿತೀಯ ಸುತ್ತಿನಲ್ಲಿ ಸೋಲು ಕಂಡರು. ಅಂತಿಮ ಸುತ್ತಿನಲ್ಲಿ ಮತ್ತೆ ಹಿಡಿತ ಸಾಧಿಸಿ ಪಂದ್ಯವನ್ನು ಗೆದ್ದು ಬೀಗಿದರು.

4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌


ಪ್ಯಾರಿಸ್‌: ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌(Iga Swiatek) ಅವರು ಫ್ರೆಂಚ್‌ ಓಪನ್‌(French Open Final 2024) ಟೂರ್ನಿಯಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು(ಶನಿವಾರ) ನಡೆದ ಮಹಿಳಾ ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯದಲ್ಲಿ ಜಾಸ್ಮಿನ್​ ಪಾವೊಲಿನಿ(Jasmine Paolini) ವಿರುದ್ಧ ಅಧಿಕಾರಯು ಗೆಲುವು ಸಾಧಿಸಿ ಮತ್ತೊಮ್ಮೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಆವೇ ಅಂಗಣದ ಕೂಟದಲ್ಲಿ 4ನೇ ಹಾಗೂ ಹ್ಯಾಟ್ರಿಕ್​ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಒಟ್ಟಾರೆಯಾಗಿ ಇದು ಸ್ವಿಯಾಟೆಕ್​ಗೆ 5ನೇ ಗ್ರ್ಯಾನ್‌ ಸ್ಲಾಮ್‌ ಕಿರೀಟ. ಒಂದು ಟ್ರೋಫಿ ಯುಎಸ್​ ಓಪನ್​ನಲ್ಲಿ ಒಲಿದಿತ್ತು.

ಶನಿವಾರ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಸ್ವಿಯಾಟೆಕ್​ ಅವರ ಆಕ್ರಮಣಕಾರಿ ಆಟದ ಮುಂದೆ ಪಾವೊಲಿನಿ ಸಂಪೂರ್ಣವಾಗಿ ಮಂಕಾದರು. ಯಾವ ಹಂತದಲ್ಲಿಯೂ ಕೂಡ ಪೈಪೋಟಿ ನೀಡಲು ಇವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ 6-2, 6-1 ನೇರ ಸೆಟ್​ಗಳ ಹೀನಾಯ ಸೋಲು ಕಂಡರು. ಕೇವಲ 68 ನಿಮಿಷದಲ್ಲಿ ಈ ಪಂದ್ಯ ಮುಕ್ತಾಯ ಕಂಡಿತ್ತು.

Exit mobile version