ನವದೆಹಲಿ : ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಎರಡನೇ ಪಂದ್ಯ ಶುಕ್ರವಾರ (ಫೆಬ್ರವರಿ 17ರದು) ಅರಂಭವಾಗಲಿದೆ. ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಅವರಿಗೆ ಅದು 100ನೇ ಪಂದ್ಯ. ಹೀಗಾಗಿ ಸ್ಮರಣೀಯ ಇನಿಂಗ್ಸ್ನಲ್ಲಿ ಪಾಲ್ಗೊಳ್ಳುವ ಉದ್ದೇಶದಲ್ಲಿದ್ದಾರೆ ಅವರು. ಇದೇ ವೇಳೆ ಅವರ ವಿದಾಯದ ಕುರಿತೂ ಚರ್ಚೆಗಳು ನಡಯುತ್ತಿವೆ. ಆದರೆ, ತಮಗಿನ್ನೂ ಆಡುವ ಉಮೇದು ಇದೆ ಎಂಬುದಾಗಿ ಚೇತೇಶ್ವರ್ ಪೂಜಾರ ಅವರು ಹೇಳಿದ್ದಾರೆ.
ಇಎಸ್ಪಿಎನ್ ಕ್ರಿಕ್ ಇನ್ಫೋ ಜತೆ ಮಾತನಾಡಿದ ಅವರು, ನನ್ನ ಬದುಕಿನಲ್ಲಿ ಇಂಥದ್ದೇ ಒಂದು ಗುರಿಯನ್ನು ಇಟ್ಟುಕೊಂಡಿಲ್ಲ. ಹೀಗಾಗಿ ನಾನು ಟೆಸ್ಟ್ ಕ್ರಿಕೆಟ್ನಲ್ಲಿ ಇಂತಿಷ್ಟೆ ದಿನ ಇರಬೇಕು ಎಂದು ಅಂದುಕೊಂಡಿಲ್ಲ. ಅಲ್ಲದೆ, ನನಗಿನ್ನೂ 35 ವರ್ಷ. ಇನ್ನಷ್ಟು ದಿನಗಳ ಕಾಲ ಆಡುವ ಯೋಜನೆಯಿದೆ ಎಂಬುದಾಗಿ ಅವರು ಹೇಳಿದ್ದಾರೆ.
ನನ್ನ ಪಾಲಿಗೆ ಇದು ನೂರನೇ ಟೆಸ್ಟ್ ಸರಿ. ಆದರೆ, ಆಸ್ಡ್ರೇಲಿಯಾ ವಿರುದ್ಧದ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳಿವೆ. ಅವುಗಳು ನನಗೆ ಪ್ರಮುಖ ಎನಿಸಿಕೊಂಡಿವೆ. ಚೇತೇಶ್ವರ್ ಪೂಜಾರ ಅವರ 100ನೇ ಪಂದ್ಯವನ್ನು ವೀಕ್ಷಿಸಲು ಅವರ ಕುಟುಂಬದ ಸದಸ್ಯರು ನವ ದೆಹಲಿಗೆ ಬಂದಿದ್ದಾರೆ. ಕುಟುಂಬ ಸದಸ್ಯರ ಜತೆಗೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿದ್ದಾರೆ.
ಇದನ್ನೂ ಓದಿ : Cheteshwar Pujara: 35ನೇ ವಸಂತಕ್ಕೆ ಕಾಲಿಟ್ಟ ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ ಇದುವರೆಗೆ ಆಡಿರುವ 99 ಪಂದ್ಯಗಳಲ್ಲಿ 7021 ರನ್ ಬಾರಿಸಿದ್ದು, ಅದರಲ್ಲಿ 19 ಶತಕಗಳು ಹಾಗೂ 34 ಅರ್ಧ ಶತಕಗಳು ಸೇರಿಕೊಂಡಿವೆ.