Site icon Vistara News

Pro Kabaddi | ರೋಚಕ ಪಂದ್ಯದಲ್ಲಿ ಗೆದ್ದ ಪುಣೇರಿ ಪಲ್ಟನ್‌

pkl

ಬೆಂಗಳೂರು: ಅತ್ಯಂತ ರೋಚಕವಾಗಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಮಂಗಳವಾರದ ದ್ವಿತೀಯ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡ ತೆಲುಗು ಟೈಟನ್ಸ್‌ ವಿರುದ್ಧ ಒಂದು ಅಂಕದ ಅಂತರದ ರೋಚಕ ಗೆಲುವು ದಾಖಲಿಸಿದೆ. ಶ್ರಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪುಣೇರಿ ತಂಡವು ತೆಲುಗು ಟೈಟಾನ್ಸ್‌ ವಿರುದ್ಧ 26-25 ಅಂತರದಲ್ಲಿ ಜಯ ಗಳಿಸಿ ಸಂಭ್ರಮಿಸಿತು.

ಪ್ರಥಮಾರ್ಧದ ಆಟದಲ್ಲಿ ಪುಣೇರಿ ಪಲ್ಟನ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 11-9ರಲ್ಲಿ ಮುನ್ನಡೆ ಕಂಡಿತ್ತು. ಮೋಹಿತ್‌ ಗೋಯತ್‌ ರೈಡಿಂಗ್‌ನಲ್ಲಿ 4 ಅಂಕ ಗಳಿಸಿ ತಂಡದ ಮುನ್ನಡೆಗೆ ನೆರವಾದರು. ಮೊಹಮ್ಮದ್‌ ನಬೀಬಕ್ಷ್‌ ರೇಡಿಂಗ್‌ನಲ್ಲಿ 3 ಅಂಕಗಳನ್ನು ಗಳಿಸಿದರು. ತೆಲುಗು ಟೈಟಾನ್ಸ್‌ ಪರ ಸಿದ್ಧಾರ್ಥ್‌ ದೇಸಾಯಿ 8, ವಿನಯ್​ 6 ಅಂಕಗಳನ್ನು ಕಲೆಹಾಕಿದರು. ಎರಡು ಅಂಕಗಳನ್ನು ಪುಣೇರಿ ಪಲ್ಟನ್‌ ಪ್ರಮಾದದ ಅಂಕವಾಗಿ ಟೈಟಾನ್ಸ್‌ಗೆ ನೀಡಿತ್ತು.

ಪುಣೇರಿ ಪರ ಮೋಹಿತ್‌ ಗೋಯತ್‌ ಸೂಪರ್‌ 10 ಅಂಕ ಗಳಿಸಿ ಮಿಂಚಿದರು. ಅವರ ಈ ರೇಡಿಂಗ್​ ಸಾಹಸದಿಂದ ಪುಣೇರಿ ಪಲ್ಟನ್‌ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಇದನ್ನೂ ಓದಿ | Pro Kabaddi | ಬೆಂಗಾಲ್​ ವಾರಿಯರ್ಸ್​ ವಿರುದ್ಧ ಗೆದ್ದು ಬೀಗಿದ ಪಿಂಕ್‌ ಪ್ಯಾಂಥರ್ಸ್‌

Exit mobile version