Site icon Vistara News

Shubman Gill : ಪಂಜಾಬ್​​ನ ಚುನಾವಣಾ ಆಯೋಗದಿಂದ ವಿಶೇಷ ಗೌರವ ಪಡೆದ ಶುಬ್ಮನ್​ ಗಿಲ್​

Shubhman GIll

ಬೆಂಗಳೂರು: ಅಧಿಕೃತ ವರದಿಗಳ ಪ್ರಕಾರ, ಭಾರತೀಯ ಕ್ರಿಕೆಟ್​​ನ “ಪ್ರಿನ್ಸ್’​ ‘ (ರಾಜಕುಮಾರ) ಶುಬ್ಮನ್ ಗಿಲ್ (Shubman Gill) ಅವರನ್ನು ಮುಂಬರುವ ಲೋಕಸಭಾ ಚುನಾವಣೆಗೆ ಪಂಜಾಬ್​​ನ ರಾಯಭಾರಿಯಾಗಿ ನೇಮಿಸಲಾಗಿದೆ. ಪ್ರತಿಭಾನ್ವಿತ ಬಲಗೈ ಬ್ಯಾಟರ್​ ಪಂಜಾಬ್ ರಾಜ್ಯಕ್ಕೆ “ರಾಜ್ಯ ಐಕಾನ್” ಆಗಿ ಕಾರ್ಯನಿರ್ವಹಿಸಲಿದ್ದಾರೆ. ಪಂಜಾಬ್​​ನ ಮುಖ್ಯ ಚುನಾವಣಾ ಅಧಿಕಾರಿ ಸಿಬಿನ್ ಸಿ ಈ ಗೌರವವನ್ನು ಯುವ ಆಟಗಾರನಿಗೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪಂಜಾಬ್​ನ ಮುಖ್ಯ ಚುನಾವಣಾ ಅಧಿಕಾರಿ, ಶುಬ್ಮನ್ ಗಿಲ್ ರಾಜ್ಯದ ಅತ್ಯಂತ ಜನಪ್ರಿಯ ಯುವ ಐಕಾನ್​​ಗಳಲ್ಲಿ ಒಬ್ಬರು ಎಂದು ಹೇಳಿದರು. ಅವರನ್ನು ಲೋಕಸಭಾ ಚುನಾವಣೆಗೆ ರಾಯಭಾರಿಯಾಗಿ ನೇಮಿಸುವ ನಿರ್ಧಾರದ ಹಿಂದೆ ಗುರಿಯದೆ. ಕಡಿಮೆ ಮತದಾರರ ಭಾಗವಹಿಸುವಿಕೆಗೆ ಸಾಕ್ಷಿಯಾದ ಪಂಜಾಬ್​​ನಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ ಎಂದ ಹೇಳಿದರು.

ಇದನ್ನೂ ಓದಿ : Yashasvi Jaiswal : ಒಟ್ಟು ರನ್​ಗಳ ಪಟ್ಟಿಯಲ್ಲಿ ಆಸೀಸ್​ ಆಟಗಾರನನ್ನು ಹಿಂದಿಕ್ಕಿದ ಯಶಸ್ವಿ ಜೈಸ್ವಾಲ್​

ಶುಬ್ಮನ್ ಗಿಲ್ ಅವರಂತಹ ಪ್ರಭಾವಿ ವ್ಯಕ್ತಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಮುಂಬರುವ 2024 ರ ಚುನಾವಣೆಯಲ್ಲಿ 70% ಕ್ಕಿಂತ ಹೆಚ್ಚು ಮತದಾನವನ್ನು ಸಾಧಿಸುವ ಭರವಸೆಯನ್ನು ಚುನಾವಣಾ ಆಯೋಗ ಹೊಂದಿದೆ.

ಶುಬ್ಮನ್ ಗಿಲ್ ಅವರನ್ನು “ಸ್ಟೇಟ್ ಐಕಾನ್” ಆಗಿ ನೇಮಕ ಮಾಡುವ ಮೊದಲು, ಪಂಜಾಬಿ ಗಾಯಕ ತರ್ಸೆಮ್ ಜಸ್ಸರ್ ಅವರನ್ನು ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ “ಸ್ಟೇಟ್ ಐಕಾನ್” ಎಂದು ಹೆಸರಿಸಲಾಗಿತ್ತು. ಮುಂಬರುವ ಚುನಾವಣೆಯಲ್ಲಿ ಶೇ.70ರಷ್ಟು ಮತದಾನದ ಪ್ರಮಾಣವನ್ನು ಮೀರುವ ಗುರಿಯೊಂದಿದೆ ಚುನಾವಣಾ ಆಯೋಗದ ಕಚೇರಿ “ಈಸ್ ವಾರ್ 70 ಪಾರ್” ಎಂಬ ಅಭಿಯಾನದ ಮಾಡುತ್ತಿದೆ.

Exit mobile version