Site icon Vistara News

IPL 2023: ಮಹತ್ವದ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಪಂಜಾಬ್​

Punjab Kings vs Delhi Capitals 1

ಧರ್ಮಶಾಲಾ: ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಳ್ಳುವ ಇರಾದೆಯೊಂದಿಗೆ ಆಡಲಿಳಿದ ಪಂಜಾಬ್​ ಕಿಂಗ್ಸ್​ ತಂಡ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ವಾರ್ನರ್​ ಪಡೆ ಬ್ಯಾಟಿಂಗ್​ ಆಹ್ವಾನ ಪಡೆದಿದೆ.

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ದಶಕದ ಬಳಿಕ ನಡೆಯುತ್ತಿರುವ ಐಪಿಎಲ್‌ ಪಂದ್ಯ ಇದಾಗಿದೆ. 2013ರಲ್ಲಿ ಇಲ್ಲಿ ಕೊನೆಯ ಬಾರಿಗೆ ಐಪಿಎಲ್​ ಪಂದ್ಯ ನಡೆದಿತ್ತು. ಸಾರಸ್ಯವೆಂದರೆ ಅಂದು ಕೂಡ ಡೆಲ್ಲಿ ವಿರುದ್ದವೇ ಪಂಜಾಬ್​ ಕಿಂಗ್ಸ್​ ಆಡಿತ್ತು. ಆ ಪಂದ್ಯದಲ್ಲಿ ಪಂಜಾಬ್​ 7 ವಿಕೆಟ್​ಗಳ ಅಂತರದಿಂದ ಪಂದ್ಯವನ್ನು ಗೆದ್ದಿತ್ತು. ಇದೀಗ ಸರಿಯಾಗಿ 10 ವರ್ಷಗಳ ಬಳಿಕ ಉಭಯ ತಂಡಗಳ ಮಧ್ಯೆ ಮತ್ತೆ ಹೊರಾಟ ನಡೆಯಲಿದೆ.

ದುರ್ಬಲ ​ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ, ವಾರ್ನರ್​ ಪಡೆಯ ಸವಾಲನ್ನು ಪಂಜಾಬ್​ ಕಡೆಗಣಿಸಬಾರದು. ಏಕೆಂದರೆ ದೀಪ ಆರುವ ಮೊದಲು ಜೋರಾಗಿ ಉರಿಯುವಂತೆ ಡೆಲ್ಲಿ ಆಟಗಾರರು ಈ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಆದ್ದರಿಂದ ದವನ್​ ಪಡೆ ಪ್ರತಿ ಹೆಜ್ಜೆಯೂ ಎಚ್ಚರಿಕೆಯಿಂದ ಇಡಬೇಕಿದೆ. ಒಂದೊಮ್ಮೆ ಈ ಪಂದ್ಯ ಸೋತರೆ ಪಂಜಾಬ್​ ಟೂರ್ನಿಯಿಂದ ಹೊರಬೀಳಲಿದೆ.

ಇದನ್ನೂ ಓದಿ IPL 2023: ವಧೇರಾಗೆ ವಿಚಿತ್ರ ಶಿಕ್ಷೆ ನೀಡಿದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

ಡೆಲ್ಲಿ ವಿರುದ್ಧ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಪ್ರಭ್​ಶಿಮ್ರಾನ್​ ಸಿಂಗ್​ ಮೇಲೆ ತಂಡ ಈ ಪಂದ್ಯದಲ್ಲಿಯೂ ಬರವಸೆ ಇರಿಸಿದೆ. ಕಳೆದ ಮುಖಾಮುಖಿಯಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಶಿಖರ್​ ಧವನ್​, ಲಿಯಾಮ್​ ಲಿವಿಂಗ್​ಸ್ಟೋನ್​, ಜಿತೇಶ್​ ಶರ್ಮ ಅವರೆಲ್ಲ ಈ ಪಂದ್ಯದಲ್ಲಿ ತಂಡವನ್ನು ಆಧರಿಸಬೇಕಿದೆ.

ಸಂಭಾವ್ಯ ತಂಡಗಳು

ಪಂಜಾಬ್​ ಕಿಂಗ್ಸ್​ : ಶಿಖರ್ ಧವನ್ (ನಾಯಕ), ಪ್ರಭ್​ಸಿಮ್ರಾನ್​ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್​ಸ್ಟನ್​, ಜಿತೇಶ್ ಶರ್ಮಾ, ಸ್ಯಾಮ್ ಕರನ್​, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹರ್, ಅರ್ಶ್​​ದೀಪ್​ ಸಿಂಗ್​.

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೀ ರೊಸೌ, ಅಕ್ಷರ್ ಪಟೇಲ್, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

Exit mobile version