ನವದೆಹಲಿ: ಅವಳಿ ಒಲಿಂಪಿಕ್ ಪದಕ ವಿಜೇತೆ, ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು(PV Sindhu) ಅವರ ಕೋಚ್ ಪಾರ್ಕ್ ಟೇ ಸಾಂಗ್(Park Tae Sang) ತಮ್ಮ ಹುದ್ದೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಸಿಂಧು ಇತ್ತೀಚಿನ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದು, ಇದರ ಹೊಣೆಯನ್ನು ಕೋಚ್ ಆದ ನಾನೇ ಹೊರಬೇಕಿದೆ. ಅವರು ನೂತನ ತರಬೇತುದಾರರೊಬ್ಬರನ್ನು ಬಯಸಿದ್ದಾರೆ. ಈ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ದಕ್ಷಿಣ ಕೊರಿಯಾದ ಪಾರ್ಕ್ ಟೇ ಸಾಂಗ್ ಹೇಳಿದ್ದಾರೆ.
ಮುಂದಿನ ಒಲಿಂಪಿಕ್ಸ್ ತನಕ ನಾನು ಸಿಂಧು ಕೋಚ್ ಆಗಿ ಮುಂದುವರಿಯಲಾಗದ ಬಗ್ಗೆ ವಿಷಾದಿಸುತ್ತೇನೆ. ದೂರದಿಂದಲೇ ಅವರನ್ನು ಬೆಂಬಲಸುತ್ತೇನೆ. ಒಲಿಂಪಿಕ್ಸ್ನಲ್ಲಿ ಅವರು ಚಿನ್ನದ ಪದಕ ಗೆಲ್ಲುವಂತಾಗಲಿ ಎಂಬುದಾಗಿ ಪಾರ್ಕ್ ಟೇ ಸಾಂಗ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಂಗ್ ಮಾರ್ಗದರ್ಶನದಲ್ಲಿ ಪಿ.ವಿ. ಸಿಂಧು ಟೋಕಿಯೊ ಒಲಿಂಪಿಕ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಇದನ್ನೂ ಓದಿ PV Sindhu | ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದ ಪಿ. ವಿ ಸಿಂಧೂ, ಮಲೇಷ್ಯಾ ಓಪನ್ಗೆ ಸಜ್ಜು
ಸದ್ಯ ಸಿಂಧು ಅವರು ಯಾರನ್ನುಕೋಚ್ ಆಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುವುದು ಇನ್ನಷ್ಟೇ ಖಚಿತವಾಗಬೇಕಿದೆ.