ಪ್ಯಾರಿಸ್: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ(paris olympics) ಪದಕ ನಿರೀಕ್ಷೆ ಮಾಡಿದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು(PV Sindhu) ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದ್ದರು. ಈ ಸೋಲಿನ ಬಳಿಕ ಅನೇಕರು ಸಿಂಧು ಒಲಿಂಪಿಕ್ಸ್ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಿದ್ದರು. ಆದರೆ, ಈ ಬಗ್ಗೆ ಸ್ವತಃ ಸಿಂಧು ಸ್ಪಷ್ಟನೆ ನೀಡಿದ್ದಾರೆ. ವೃತ್ತಿ ಜೀವನದ ಅತೀ ಕಠಿಣ ಸೋಲು ಎದುರಿಸಿ ಬಂದಿರುವುದರಿಂದ ಸ್ವಲ್ಪ ವಿರಾಮ ಪಡೆದು ಮುಂದುವರಿಯುತ್ತೇನೆ ಎಂದಿದ್ದಾರೆ.
ಕಳೆದೊಂದು ವರ್ಷದಿಂದ ಫಿಟ್ನೆಸ್ ಸಮಸ್ಯೆ ಎದುರಿಸಿದ್ದರೂ ಸಿಂಧು ಮೇಲೆ ಈ ಬಾರಿಯೂ ಪದಕ ನಿರೀಕ್ಷೆ ಮಾಡಲಾಗಿತ್ತು. ಪ್ರೀ ಕ್ವಾರ್ಟರ್ ಫೈನಲ್ ತನಕ ಅವರು ಗೆದ್ದು ಬಂದ ಹಾದಿಯನ್ನು ನೋಡುವಾಗ ಈ ಬಾರಿಯೂ ಪದಕ ಖಚಿತ ಎಂದು ನಂಬಲಾಗಿತ್ತು. ಆದರೆ, ಗುರುವಾರ ರಾತ್ರಿ ನಡೆದಿದ್ದ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಸಿಂಧು ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ ಸೋಲು ಅನುಭವಿಸಿ ಒಲಿಂಪಿಕ್ಸ್ ಅಭಿಯಾನ ಮುಗಿಸಿದ್ದರು.
‘ನನ್ನ ಭವಿಷ್ಯದ ಕುರಿತು ನಾನು ಸ್ಪಷ್ಟವಾಗಿದ್ದೇನೆ. ನಾನು ಸ್ವಲ್ಪ ವಿರಾಮ ಪಡೆದ ಮತ್ತೆ ಬ್ಯಾಡ್ಮಿಂಟನ್ನಲ್ಲಿ ಮುಂದುವರಿಯುತ್ತೇನೆ. ನನ್ನ ದೇಹ ಮತ್ತು ಮನಸ್ಸಿಗೆ ವಿರಾಮ ಬೇಕು. ಮುಂದಿನ ಪ್ರಯಾಣವನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಲು ನಾನು ಯೋಜನೆ ರೂಪಿಸಿದ್ದೇನೆ’ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿ PV Sindhu: ನೂತನ ಕೋಚ್ ಮೊರೆ ಹೋದ ಪಿ.ವಿ. ಸಿಂಧು
ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ. 2 ವರ್ಷಗಳಿಂದೀಚೆಗೆ ಆಡಿದ ಎಲ್ಲ ಟೂರ್ನಿಯಲ್ಲಿ ಹೀನಾಯ ಸೋಲು ಕಂಡಿದ್ದರು. 2ನೇ ಸುತ್ತು ಪ್ರವೇಶಿಸಲು ಕೂಡ ಹೆಣಗಾಡುತ್ತಿದ್ದರು.
ಆಗಸ್ಟ್ 3ರ ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ
ಮಧ್ಯಾಹ್ನ 12:30: ಶೂಟಿಂಗ್ – ಮಹಿಳಾ ಸ್ಕೀಟ್ ಅರ್ಹತಾ ಸುತ್ತಿನ ದಿನ ಮೊದಲ ದಿನ, ರೈಜಾ ಧಿಲ್ಲಾನ್ ಮತ್ತು ಮಹೇಶ್ವರಿ ಚೌಹಾಣ್.
ಮಧ್ಯಾಹ್ನ 1 ಗಂಟೆ: ಶೂಟಿಂಗ್; ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್ನಲ್ಲಿ ಮನು ಭಾಕರ್ (ಪದಕದ ಸ್ಪರ್ಧೆ)
ಮಧ್ಯಾಹ್ನ 1:52: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ದೀಪಿಕಾ ಕುಮಾರಿ ಮತ್ತು ಜರ್ಮನಿಯ ಮಿಚೆಲ್ ಕ್ರೊಪೆನ್ ನಡುವೆ ಹಣಾಹಣಿ
ಇದನ್ನೂ ಓದಿ: IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ
ಮಧ್ಯಾಹ್ನ 2:05: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ಭಜನ್ ಕೌರ್ ಮತ್ತು ಡಯಾನಂದಾ ಕೊಯಿರುನ್ನಿಸಾ.
ಮಧ್ಯಾಹ್ನ 3:45 ಸೇಯ್ಲಿಂಗ್- ಪುರುಷರ ಡಿಂಗ್ಲೇ ರೇಸ್ 5 ಮತ್ತು 6ರಲ್ಲಿ ವಿಷ್ಣು ಸರವಣನ್ ಸ್ಪರ್ಧಿಸಲಿದ್ದಾರೆ.
ಸಂಜೆ 5:55: ಸೇಯ್ಲಿಂಗ್; ಮಹಿಳೆಯರ ಡಿಂಗ್ಲೇ ರೇಸ್ 5 ಮತ್ತು 6 ರಲ್ಲಿ ನೇತ್ರಾ ಕುಮನನ್ ಭಾಗಿಯಾಗಲಿದ್ದಾರೆ.
ರಾತ್ರಿ 11:05: ಶಾಟ್ ಪುಟ್ ಫೈನಲ್ ; ತಜಿಂದರ್ಪಾಲ್ ಸಿಂಗ್ ತೂರ್ (ಅರ್ಹತೆ ಪಡೆದರೆ).
ರಾತ್ರಿ 12:02 : ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ನಿಶಾಂತ್ ದೇವ್ ಮತ್ತು ಮೆಕ್ಸಿಕೊದ ಮಾರ್ಕೊ ವರ್ಡೆ.