Site icon Vistara News

ICC World Cup 2023 : ದ. ಆಫ್ರಿಕಾ ಪರ ವಿಶೇಷ ದಾಖಲೆ ಬರೆದ ಕ್ವಿಂಟನ್ ಡಿ ಕಾಕ್​

Quinton D Kock

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ಬಾಂಗ್ಲಾದೇಶ ತಂಡದ ವಿರುದ್ಧದ ದಕ್ಷಿಣ ಆಫ್ರಿಕಾದ ಗ್ರೂಪ್ ಹಂತದ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ (ICC World Cup 2023) ಶತಕ ಬಾರಿಸಿದ್ದಾರೆ. ಇದು ಹಾಲಿ ವಿಶ್ವ ಕಪ್​ನಲ್ಲಿ ಅವರ ಮೂರನೇ ಶತಕವಾಗಿದೆ. ಡಿ ಕಾಕ್ ಆಕ್ರಮಣಶೀಲತೆ ಹಾಗೂ ಎಚ್ಚರಿಕೆಯ ಆಟದೊಂದಿಗೆ ತಮ್ಮ 20 ನೇ ಏಕದಿನ ಶತಕವನ್ನು ತಂದರು.

ವಿಶ್ವ ಕಪ್ ಬಳಿಕ 50 ಓವರ್​ಗಳ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಕ್ವಿಂಟನ್ ಡಿ ಕಾಕ್ ಅಗ್ರ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅತ್ಯುತ್ತಮ ಕೊಡುಗೆ ಕೊಡುತ್ತಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಮತ್ತೊಂದು ದೊಡ್ಡ ಬಾರಿಸುವಲ್ಲಿ ಸಹಾಯ ಮಾಡಿದ ಡಿ ಕಾಕ್ ಕೇವಲ 101 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಕ್ವಿಂಟನ್ ಡಿ ಕಾಕ್ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಕನಿಷ್ಠ 3 ಶತಕಗಳನ್ನು ಗಳಿಸಿದ 7 ನೇ ಬ್ಯಾಟ್ಸ್ಮನ್ ಮತ್ತು ಭಾರತದಲ್ಲಿ ಈ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆ ಮಾಡಿದ ರೋಹಿತ್ ಶರ್ಮಾ, ಕುಮಾರ ಸಂಗಕ್ಕಾರ ಮತ್ತು ಸೌರವ್ ಗಂಗೂಲಿ ಸೇರಿದಂತೆ ಎಲೈಟ್ ಬ್ಯಾಟರ್​​ಗಳ ಪಟ್ಟಿಗೆ ಡಿ ಕಾಕ್ ಸೇರಿದ್ದಾರೆ.

2015 ಮತ್ತು 2019ರ ವಿಶ್ವ ಕಪ್​ನಲ್ಲಿ ಒಂದೇ ಒಂದು ಶತಕ ಗಳಿಸದ ಡಿ ಕಾಕ್, ದಿಲ್ಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 84 ಎಸೆತಗಳಲ್ಲಿ 100 ರನ್ ಬಾರಿಸಿದ್ದರು. ನಂತರ ಅವರು ಕಠಿಣ ಲಕ್ನೋ ಪಿಚ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 110 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್​​ನ 35 ನೇ ಓವರ್​ನಲ್ಲಿ ಡಿ ಕಾಕ್ 4 ಸಿಕ್ಸರ್ ಮತ್ತು 6 ಫೋರ್​ ಸೇಮತ ಮೂರಂಕಿ ಮೊತ್ತ ದಾಟಿದ್ದರು.

ದಕ್ಷಿಣ ಆಫ್ರಿಕಾ 30 ನೇ ಓವರ್​ನಲ್ಲಿ 200 ರನ್​ಗಳನ್ನು ದಾಟಿತು. ಈ ಮೂಲಕ ವಿಶ್ವ ಕಪ್​ನ 5 ಇನಿಂಗ್ಸ್​ಗಳಲ್ಲಿ 4 ನೇ ಬಾರಿಗೆ 300 ಕ್ಕೂ ಹೆಚ್ಚು ಮೊತ್ತವನ್ನು ದಾಖಲಿಸಿಕೊಂಡಿತ್ತು.

ವಿಲಿಯರ್ಸ್ ದಾಖಲೆ ಮುರಿದ ಡಿ ಕಾಕ್​

2015 ರ ವಿಶ್ವ ಕಪ್​ನಲ್ಲಿ ಎಬಿ ಡಿವಿಲಿಯರ್ಸ್ 2 ಶತಕಗಳನ್ನು ಬಾರಿಸಿದ್ದರು. ಇದು ದಕ್ಷಿಣ ಆಫ್ರಿಕಾ ಪರ ಆಟಗಾರನೊಬ್ಬ ಬಾರಿಸಿದ ಗರಿಷ್ಠ ಶತಕಗಳ ದಾಖಲೆಯಾಗಿತ್ತು. ಅದರನ್ನು ಕ್ವಿಂಟನ್​ ಡಿ ಕಾರ್ ಮುರಿದಿದ್ದಾರೆ.

ಕ್ವಿಂಟನ್ ಡಿ ಕಾಕ್ ಮಂಗಳವಾರ ಪರಿಸ್ಥಿತಿಗಳನ್ನು ಪರಿಪೂರ್ಣವಾಗಿ ಬಳಸಿಕೊಂಡರು. ದಕ್ಷಿಣ ಆಫ್ರಿಕಾವು ರಾಸ್ಸಿ ವಾನ್ ಡೆರ್ ಡುಸೆನ್ ಮತ್ತು ರೀಜಾ ಹೆಂಡ್ರಿಕ್ಸ್ ಅವರನ್ನು ಬೇಗನೆ ಕಳೆದುಕೊಂಡಿತು. ಆದರೂ ಉತ್ತಮ ಎಸೆತಗಳನ್ನು ಬಳಿಸಿಕೊಂಡು ಡಿ ಕಾಕ್ ಆಡಿದರು. ಏಡೆನ್ ಮಾರ್ಕ್ರಮ್ ಅವರೊಂದಿಗೆ 131 ರನ್​ಗಳ ಜೊತೆಯಾಟವನ್ನು ನೀಡಿದರು. ಡಿ ಕಾಕ್ ಅವರು ನಿಯಮಿತವಾಗಿ ಮೆಹಿದಿ ಹಸನ್ ಮಿರಾಜ್ ಮತ್ತು ಶಕೀಬ್ ಅಲ್ ಹಸನ್ ಇಬ್ಬರ ಬೌಲಿಂಗ್​ ದಾಳಿಯನ್ನೂ ನಾಶ ಮಾಡಿದರು.

Exit mobile version