Site icon Vistara News

Quinton de Kock : ವಿಕೆಟ್​ ಕೀಪಿಂಗ್​ನಲ್ಲೂ ಹೊಸ ಸಾಧನೆ ಮಾಡಿದ ಕ್ವಿಂಟನ್​ ಡಿ ಕಾಕ್​

quinton d cock

ಅಹಮದಾಬಾದ್​: ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಸ್ಟ್ರೇಲಿಯಾದ ಮಾಜಿ ಆ್ಯಡಂ ಗಿಲ್​ಕ್ರಿಸ್ಟ್​ ಹಾಗೂ, ಸರ್ಫರಾಜ್ ಅಹ್ಮದ್ ಅವರ ಸಾಲಿಗೆ ಸೇರಿದ್ದಾರೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಫಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಡಿ ಕಾಕ್ ಆರು ಕ್ಯಾಚ್​ಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.

ಡಿ ಕಾಕ್ ಅಫಘಾನಿಸ್ತಾನದ ಬ್ಯಾಟರ್​ಗಳಾದ ಇಬ್ರಾಹಿಂ ಜದ್ರನ್, ಹಶ್ಮತುಲ್ಲಾ ಶಾಹಿದಿ, ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರ ಕ್ಯಾಚ್​ಗಳನ್ನು ಪಡೆದು. ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ಇದಕ್ಕೂ ಮುನ್ನ 2003ರ ವಿಶ್ವಕಪ್​​ನಲ್ಲಿ ನಮೀಬಿಯಾ ವಿರುದ್ಧ ಆಡಮ್ ಗಿಲ್​ಕ್ರಿಸ್ಟ್​​ 6 ಕ್ಯಾಚ್​ ಪಡೆದಿದ್ದರು. ಮತ್ತೊಂದೆಡೆ, ಪಾಕಿಸ್ತಾನದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ 2015 ರ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮಾದರಿಯ ಸಾಧನೆ ಮಾಡಿದ್ದರು.

ಇದನ್ನೂ ಓದಿ: Babar Azam : ಮಾಜಿಗಳಿಗೆಲ್ಲ ಒಂದೇ ಮಾತಿನಿಂದ ತಿರುಗೇಟು ಕೊಟ್ಟ ಬಾಬರ್​

ಡಿ ಕಾಕ್ ಬಗ್ಗೆ ಹಾಲಿ ವಿಶ್ವ ಕಪ್​ನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಕೊನೆಯ ವಿಶ್ವಕಪ್ ಆಡುತ್ತಿರುವ ಎಡಗೈ ಬ್ಯಾಟ್ಸ್ಮನ್ ಈಗಾಗಲೇ ಕೇವಲ ಎಂಟು 9 591 ರನ್ ಗಳಿಸಿದ್ದಾರೆ. ಕ್ವಿಂಟನ್ ಡಿ ಕಾಕ್ ವಿಶ್ವಕಪ್​ನಲ್ಲಿ ಈವರೆಗೆ 68.75 ಸರಾಸರಿಯನ್ನು ಹೊಂದಿದ್ದಾರೆ . ದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಈಗ ಮೊದಲ ಸ್ಥಾನದಲ್ಲಿದ್ದಾರೆ.

ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಕೀಪಿಂಗ್ ಔಟ್

21- ಆಡಮ್ ಗಿಲ್ಕ್ರಿಸ್ಟ್ (ವಿಶ್ವಕಪ್ 2003)
21- ಟಾಮ್ ಲಾಥಮ್ (ವಿಶ್ವಕಪ್ 2019)
20- ಅಲೆಕ್ಸ್ ಕ್ಯಾರಿ (ವಿಶ್ವಕಪ್ 2019)
19- ಕ್ವಿಂಟನ್ ಡಿ ಕಾಕ್ (ವಿಶ್ವಕಪ್ 2023)
17- ಕುಮಾರ ಸಂಗಕ್ಕಾರ (ವಿಶ್ವಕಪ್ 2003)
17- ಆಡಮ್ ಗಿಲ್​ಕ್ರಿಸ್ಟ್​​ (ವಿಶ್ವಕಪ್ 2007)

ದಕ್ಷಿಣ ಆಫ್ರಿಕಾ ತಂಡ ಹಾಲಿ ವಿಶ್ವ ಕಪ್​ನ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ. ಹೀಗಾಗಿ ಕ್ವಿಂಟನ್ ಡಿ ಕಾಕ್​ಗೆ ಇನ್ನೊಂದು ಅಥವಾ ತಂಡ ಫೈನಲ್​ಗೆ ಪ್ರವೇಶ ಪಡೆದರೆ ಎರಡು ಪಂದ್ಯಗಳನ್ನು ಆಡುವ ಅವಕಾಶ ಸಿಗಲಿದೆ. ಹೀಗಾಗಿ ತಮ್ಮ ಕೊನೇ ಆವೃತ್ತಿಯ ವಿಶ್ವ ಕಪ್​ನಲ್ಲಿ ಅಸಾಧಾರಣ ಸಾಧನೆ ಮಾಡುವ ಅವಕಾಶವಿದೆ. ಗಿಲ್​ಕ್ರಿಸ್ಟ್​​ 2003ರ ವಿಶ್ವ ಕಪ್​ನಲ್ಲಿ 21 ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಈ ಸಾಧನೆ ಮೀರಲು ಡಿ ಕಾಕ್​ಗೆ ಇನ್ನು ಮೂರು ಕ್ಯಾಚ್​ಗಳು ಮಾತ್ರ ಸಾಕು. ಅದೇ ರೀತಿಯ ಬ್ಯಾಟಿಂಗ್​ನಲ್ಲೂ ಗರಿಷ್ಠ ರನ್​ ಗಳಿಕೆಯ ಅವಕಾಶ ಸಾಕಷ್ಟಿದೆ. ಆದರೆ, ಸೆಮೀಸ್​ಗೆ ಪ್ರವೇಶ ಪಡೆದಿರುವ ಭಾರತ ತಂಡದ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲ್ಯಾಂಡ್ ತಂಡದ ರಚಿನ್ ರವೀಂದ್ರ ಈ ಸ್ಥಾನಕ್ಕೆ ಪೈಪೋಟಿ ಒಡ್ಡಲಿದ್ದಾರೆ.

Exit mobile version