ಮುಂಬೈ: ದಕ್ಷಿಣ ಆಫ್ರಿಕಾದ ಸ್ಟಾರ್ ಎಡಗೈ ಬ್ಯಾಟರ್ ಕ್ವಿಂಟನ್ ಡಿ ಕಾಕ್(Quinton de Kock) ಅವರು ಬಾಂಗ್ಲಾದೇಶ(South Africa vs Bangladesh) ವಿರುದ್ಧ ಶತಕ ಬಾರಿಸುವ ಮೂಲಕ ವಿಶ್ವಕಪ್‌ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಒಂದೇ ವಿಶ್ವಕಪ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವದ 7ನೇ ಆಟಗಾರ ಎನಿಸಿಕೊಂಡರು. ಸದ್ಯ ಡಿ ಕಾಕ್ ಮೂರು ಶತಕ ಬಾರಿಸಿದ್ದಾರೆ. ಇನ್ನೊಂದು ಪದಕ ಬಾರಿಸಿದರೆ ಕುಮಾರ ಸಂಗಕ್ಕರ(4 ಶತಕ) ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಆರಂಭಿಕ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿದ ಬಳಿಕ ಮಂಕಾಗಿದ್ದ ಅವರು ಆ ಬಳಿಕದ ಎರಡು ಪಂದ್ಯಗಳಲ್ಲಿ ಸಿಂಗಲ್ ಡಿಜಿಟ್ಗೆ ಔಟಾಗಿದ್ದರು. ಮತ್ತೆ ಬ್ಯಾಟಿಂಗ್ ಫಾರ್ಮ್ಗೆ ಮರಳಿದ ಅವರು ಶತಕವನ್ನೇ ಬಾರಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಪರ ವಿಶ್ವಕಪ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದವರ ಪಟ್ಟಿಯಲ್ಲಿ ಸದ್ಯ ಡಿ ಕಾಕ್ 2ನೇ ಸ್ಥಾನಕ್ಕೇರಿದ್ದಾರೆ. ಎಬಿಡಿ ವಿಲಿಯರ್ಸ್ ಅವರು ನಾಲ್ಕು ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಡಿ ಕಾಕ್ ಅವರು ಶತಕ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ಪರ ವಿಶ್ವಕಪ್‌ನಲ್ಲಿ ತಲಾ 2 ಶತಕ ಬಾರಿಸಿದ ಹರ್ಷಲ್ ಗಿಫ್ಸ್, ಹಾಶಿಮ್ ಆಮ್ಲಾ ಮತ್ತು ಫಾಫ್ ಡು ಪ್ಲೆಸಿಸ್ ಅವರ ದಾಖಲೆಯನ್ನು ಹಿಂದಿಕ್ಕಿದರು. ಈ ಸುದ್ದಿ ಪ್ರಕಟಗೊಳ್ಳುವಾಗ ಡಿ ಕಾಕ್ ಅವರು 136* ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಇದನ್ನೂ ಓದಿ Virat Kohli: ಹಿಮಾಚಲ ಪ್ರದೇಶ ಸಿಎಂ ಭೇಟಿಯಾದ ವಿರಾಟ್ ಕೊಹ್ಲಿ
Unstoppable Quinton de Kock hits his third #CWC23 ton to power South Africa in Mumbai 👊@mastercardindia Milestones 🏏#SAvBAN pic.twitter.com/i8yoBCNslR
— ICC Cricket World Cup (@cricketworldcup) October 24, 2023
ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಟಾಪ್ 5 ಆಟಗಾರರು
ರೋಹಿತ್ ಶರ್ಮ
ಪ್ರಸ್ತುತ ಟೀಮ್ ಇಂಡಿಯಾದ ನಾಯಕನಾಗಿರುವ ರೋಹಿತ್ ಶರ್ಮ ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರನಾಗಿದ್ದಾರೆ. ಅವರು 2019ರಲ್ಲಿ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 5 ಶತಕ ಬಾರಿಸಿದ್ದರು. ಈ ಮೂಲಕ ಲಂಕಾದ ಕುಮಾರ ಸಂಗಕ್ಕರ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದರು. ಈ ಆವೃತ್ತಿಯಲ್ಲಿ ರೋಹಿತ್ 9 ಪಂದ್ಯಗಳನ್ನು ಆಡಿ ಒಟ್ಟು 648 ರನ್ ಗಳಿಸಿದ್ದರು. ವಿಶ್ವಕಪ್‌ನಲ್ಲಿ ಒಟ್ಟು ರೋಹಿತ್ 7 ಶತಕ ಬಾರಿಸಿದ್ದಾರೆ. 2015 ರಲ್ಲಿ ಮತ್ತು ಹಾಲಿ ಆವೃತ್ತಿಯ ವಿಶ್ವಕಪ್‌ನಲ್ಲಿ ಒಂದು ಶತಕ ಬಾರಿಸಿದ್ದಾರೆ. ಈ ಮೂಲಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹಿರಿಮೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ ನಿತ್ಯ 8 ಕೆಜಿ ಮಟನ್ ತಿನ್ನೋದು ಬಿಟ್ಟು ದೇಶದ ಬಗ್ಗೆ ಚಿಂತಿಸಿ; ಪಾಕ್ ಮಾಜಿ ಆಟಗಾರನ ಆಕ್ರೋಶ
ಕುಮಾರ ಸಂಗಕ್ಕರ
ಶ್ರೀಲಂಕಾದ ಮಾಜಿ ನಾಯಕ ಮತ್ತು ಬ್ಯಾಟರ್ ಕುಮಾರ ಸಂಗಕ್ಕರ ಒಂದೇ ವಿಶ್ವಕಪ್‌ನಲ್ಲಿ ಸತತ 4 ಶತಕಗಳನ್ನು ಸಿಡಿಸಿದ ದಾಖಲೆ ಹೊಂದಿದ್ದಾರೆ. ಸಂಗಕ್ಕಾರ 2015ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ರೋಹಿತ್ಗೂ ಮುನ್ನ ಅವರು ಈ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಒಟ್ಟಾರೆ ವಿಶ್ವಕಪ್‌ನಲ್ಲಿ ಸಂಗಕ್ಕರ 5 ವಿಶ್ವಕಪ್ ಶತಕ ಬಾರಿಸಿದ್ದಾರೆ.
ಮಾರ್ಕ್ ವಾ
ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮಾರ್ಕ್ ವಾ ಅವರು ಒಂದೇ ವಿಶ್ವಕಪ್‌ನಲ್ಲಿ ಮೂರು ಶತಕ ಬಾರಿಸಿದ್ದಾರೆ. ಇದು 1996 ವಿಶ್ವಕಪ್‌ನಲ್ಲಿ ದಾಖಲಾಗಿತ್ತು. ಒಟ್ಟಾರೆಯಾಗಿ ಅವರು 4 ವಿಶ್ವಕಪ್ ಶತಕ ಬಾರಿಸಿದ್ದಾರೆ. 1999ರ ವಿಶ್ವಕಪ್ ವಿಜೇತ ತಂಡದಲ್ಲಿ ಮಾರ್ಕ್ ವಾ ಉತ್ತಮ ಪ್ರದರ್ಶನ ತೋರಿದ್ದರು.
ಇದನ್ನೂ ಓದಿ AFG vs PAK: ಪಾಕ್ ಪರಾಭವ; ಗುಂಡಿನ ಸುರಿಮಳೆಗೈದು ಸಂಭ್ರಮಿಸಿದ ಕಾಬೂಲ್ ಜನತೆ
ಸೌರವ್ ಗಂಗೂಲಿ
ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಸೌರವ್ ಗಂಗೂಲಿ ಅವರು 2003ರ ವಿಶ್ವಕಪ್‌ನಲ್ಲಿ ಮೂರು ಶತಕ ಬಾರಿಸಿದ್ದರು. ಅಲ್ಲದೆ ಭಾರತವನ್ನು ಫೈನಲ್ ತಲುಪಿಸಿದ ಸಾಧನೆಯನ್ನು ಮಾಡಿದ್ದರು. ಆದರೆ ಫೈನಲ್ನಲ್ಲಿ ಆಸೀಸ್ ವಿರುದ್ಧ ಭಾರತ ಸೋಲು ಕಂಡು ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಬಳಿಕ ಅವರು ಏಕದಿನ ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ವಿಶ್ವಕಪ್ ಗೆಲ್ಲದಿದ್ದರೂ ಭಾರತ ಕ್ರಿಕೆಟ್ ತಂಡದ ದಿಸೆಯನ್ನು ಬದಲಿಸಿದ ಕೀರ್ತಿ ಗಂಗೂಲಿಗೆ ಸಲ್ಲುತ್ತದೆ.
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಮ್ಯಾಥ್ಯೂ ಹೇಡನ್ ಮತ್ತು ಕ್ವಿಂಟನ್ ಡಿ ಕಾಕ್ ಕೂಡ ತಲಾ ಮೂರು ಶತಕ ಬಾರಿಸಿ ಆ ನಂತರದ ಸ್ಥಾನದಲ್ಲಿದ್ದಾರೆ. ಪ್ರಸ್ತುತ ವಿಶ್ವಕಪ್ ಆಡುತ್ತಿರುವ ಡಿ ಕಾಕ್ ಮತ್ತು ವಾರ್ನರ್ಗೆ ಸಂಗಕ್ಕರ ದಾಖಲೆಯನ್ನು ಮುರಿಯಲು 2 ಮತ್ತು ಸರಿಗಟ್ಟಲು 1 ಶತಕ ಅವಶ್ಯವಿದೆ.