Site icon Vistara News

INDvsAUS : ಮಾಜಿ ಸ್ಪಿನ್​ ಬೌಲರ್​ ಅನಿಲ್​ ಕುಂಬ್ಳೆ ದಾಖಲೆ ಮುರಿದ ಆರ್​ ಅಶ್ವಿನ್​

R Ashwin broke former spin bowler Anil Kumble's record

#image_title

ಅಹಮದಾಬಾದ್​: ಭಾರತದ ಸ್ಪಿನ್ ಬೌಲರ್ ಆರ್​. ಅಶ್ವಿನ್​ ಬಾರ್ಡರ್​- ಗವಾಸ್ಕರ್ ಟ್ರೋಫಿಯಲ್ಲಿ (INDvsAUS) ಗರಿಷ್ಠ ವಿಕೆಟ್​ ಪಡೆದ ಭಾರತದ ಬೌಲರ್​ ಎಂಬ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಆಸೀಸ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್​ ಪಡೆದು ದಾಖಲೆ ಮಾಡಿದ್ದ ಮಾಜಿ ಸ್ಪಿನ್ನರ್ ಅನಿಲ್​ ಕುಂಬ್ಳೆ ಹಿಂದಿಕ್ಕಿದ್ದಾರೆ. ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಟೆಸ್ಟ್​ ಸರಣಿಯ ನಾಲ್ಕನೇ ಹಾಗೂ ಕೊನೇ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ ಒಟ್ಟು 6 ವಿಕೆಟ್​ ಕಬಳಿಸುವುದರೊಂದಿಗೆ ಅವರು ಈ ಸಾಧನೆ ಮಾಡಿದ್ದಾರೆ.

ಅನಿಲ್​ ಕುಂಬ್ಳೆ ಅವರು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಸರಣಿಯಲ್ಲಿ ಒಟ್ಟು 111 ವಿಕೆಟ್​ ಉರುಳಿಸಿ ಗರಿಷ್ಠ ಗಳಿಕೆದಾರ ಎಂಬ ಸಾಧನೆ ಮಾಡಿದ್ದರು. ಆಸೀಸ್​ ವಿರುದ್ಧದ ಸರಣಿಯಲ್ಲಿ ಟಾಡ್​ ಮರ್ಫಿ ವಿಕೆಟ್​ಪಡೆದ ತಕ್ಷಣ ಕುಂಬ್ಳೆ ದಾಖಲೆ ಸರಿಗಟ್ಟಿದ ಅಶ್ವಿನ್​, ಆಸೀಸ್​ ಬ್ಯಾಟರ್​ ನೇಥನ್​ ಲಿಯಾನ್ ಅವರನ್ನೂ ಔಟ್​ ಮಾಡುವ ಮೂಲಕ 113 ವಿಕೆಟ್​ ಪಡೆದರು. ಇದರೊಂದಿಗೆ ಅವರು ಅನಿಲ್​ ಕುಂಬ್ಳೆ ಅವರನ್ನು ಹಿಂದಿಕ್ಕಿದರು.

ಇದನ್ನೂ ಓದಿ : INDvsAUS : ಅನಿಲ್​ ಕುಂಬ್ಳೆ ದಾಖಲೆ ಮುರಿದ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್​ ನಥಾನ್​ ಲಿಯಾನ್​, ಏನದು ಸಾಧನೆ?

ಆರ್​ ಅಶ್ವಿನ್ ಅವರು ಇದೇ ವೇಳೆ ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಸಾಧನೆ ಮಾಡಿದ್ದ ನೇಥನ್​ ಲಿಯಾನ್ ಅವರನ್ನು ಸರಿಗಟ್ಟಿದರು. ಲಿಯಾನ್​ 113 ವಿಕೆಟ್​ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ, ಆಸ್ಟ್ರೇಲಿಯಾ ತಂಡ ಈಗ ಬೌಲಿಂಗ್​ ಮಾಡಲು ಆರಂಭಿಸಿದ್ದು ಲಿಯಾನ್​ ವಿಕೆಟ್​ ಗಳಿಕೆ ಮುಂದಕ್ಕೆ ಹೋಗಲಿದೆ.

Exit mobile version