ಮುಂಬಯಿ: ಮಾರ್ಚ್ 20 ರಿಂದ ಟ್ವಿಟರ್ ಬ್ಲೂ ಟಿಕ್ ಚಂದಾದಾರರಿಗೆ ಮಾತ್ರ ಎಸ್ಎಂಎಸ್ ಆಧಾರಿತ ಟು ಫ್ಯಾಕ್ಟರ್ ದೃಢೀಕರಣ ಸೇವೆ ಲಭ್ಯವಿರುತ್ತದೆ ಎಂಬ ಘೋಷಣೆಯಿಂದ ಗೊಂದಲಕ್ಕೊಳಗಾದ ಟೀಮ್ ಇಂಡಿಯಾ ಕ್ರಿಕೆಟಿಗ ಆರ್.ಅಶ್ವಿನ್(R Ashwin) ಅವರು ಟ್ವಿಟರ್ ಸಿಇಒ ಎಲಾನ್ ಮಸ್ಕ್ಗೆ(elon musk) ಪ್ರಶ್ನೆಯೊಂದನ್ನು ಮಾಡಿದ್ದಾರೆ.
ಟ್ವಿಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಎಲಾನ್ ಮಸ್ಕ್ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಇದೀಗ ಗೊಂದಲಕ್ಕೆ ಒಳಗಾದ ಅಶ್ವಿನ್ ಅವರು “ನಾನು ಈಗ ಮಾರ್ಚ್ 19 ರ ಮೊದಲು ನನ್ನ ಟ್ವಿಟರ್ ಖಾತೆಯನ್ನು ಸುರಕ್ಷಿತವಾಗಿ ಹೇಗೆ ಪಡೆಯುವುದು, ನಾನು ಪಾಪ್ ಅಪ್‌ಗಳನ್ನು ಪಡೆಯುತ್ತಿದ್ದೇನೆ. ಆದರೆ ಯಾವುದೇ ಲಿಂಕ್‌ಗಳು ಸ್ಪಷ್ಟತೆ ತೋರುತ್ತಿಲ್ಲ. ಎಲಾನ್ ಮಸ್ಕ್ ಅಗತ್ಯವಿರುವುದನ್ನು ಪರಿಹರಿಸಿದರೆ ಸಂತೋಷವಾಗುತ್ತದೆ. ದಯವಿಟ್ಟು ನನಗೆ ಸರಿಯಾದ ದಿಕ್ಕು ತೋರಿಸಿ,” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ IND VS AUS: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ
ಅಶ್ವಿನ್ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ನೆಟ್ಟಿಗರು ಅಶ್ವಿನ್ಗೆ ಹಲವು ಸಲಹೆಯನ್ನು ನೀಡಿದ್ದಾರೆ.