Site icon Vistara News

R Ashwin: ಧರ್ಮಶಾಲಾ ಟೆಸ್ಟ್​ನಲ್ಲಿ ಆರ್​.ಅಶ್ವಿನ್​ಗೆ ವಿಶೇಷ ಗೌರವ

r ashwin

ಧರ್ಮಶಾಲಾ: ಇಂಗ್ಲೆಂಡ್‌ ಎದುರಿನ ಅಂತಿಮ ಟೆಸ್ಟ್‌ ಪಂದ್ಯ(India vs England 5th Test) ಭಾರತ ತಂಡದ ಅನುಭವಿ ಮತ್ತು ಹಿರಿಯ ಆಟಗಾರ ಆರ್​.ಅಶ್ವಿನ್​ಗೆ(R Ashwin) ವಿಶೇಷ ಪಂದ್ಯವಾಗಲಿದೆ. ಇದು ಅವರ 100ನೇ ಟೆಸ್ಟ್‌ ಪಂದ್ಯವಾಗಿದೆ. ಈ ಸಾಧನೆ ಮಾಡಿ 13ನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರಿಗೆ ಪಂದ್ಯ ಆರಂಭಕ್ಕೂ ಮುನ್ನ ವಿಶೇಷ ಗೌರವ ಸೂಚಿಸುವ ಕಾರ್ಯಕ್ರಮವೊಂದನ್ನು ಬಿಸಿಸಿಐ ಏರ್ಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ ಮಾಜಿ ಆಟಗಾರ ಸುನಿಲ್​ ಗವಾಸ್ಕರ್ ಅವರು 100ನೇ ಟೆಸ್ಟ್​ ಹೊಸ್ತಿಲಲ್ಲಿ ನಿಂತಿರುವ ಅಶ್ವಿನ್​ಗೆ ಅಂತಿಮ ಪಂದ್ಯದಲ್ಲಿ ನಾಯಕತ್ವವನ್ನು ನೀಡಬೇಕು ಎಂದು ಹೇಳಿದ್ದರು. ಇದೀಗ ಗವಾಸ್ಕರ್​ ಅವರ ಬಯಕೆಯಂತೆ ಧರ್ಮಾಶಾಲಾ ಟೆಸ್ಟ್​ನಲ್ಲಿ ನಾಯಕ ರೋಹಿತ್‌ ಶರ್ಮ ಅವರು ಶತಕದ ಟೆಸ್ಟ್​ ಸಾಧಕ ಅಶ್ವಿ‌ನ್‌ ಅವರಿಗೆ ತಂಡವನ್ನು ಅಂಗಳಕ್ಕೆ ಮುನ್ನಡೆಸುವ ಗೌರವ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಕಳೆದ 13 ವರ್ಷಗಳಿಂದ ಭಾರತೀಯ ಟೆಸ್ಟ್‌ ತಂಡದ ಭಾಗವಾಗಿರುವ ಅಶ್ವಿ‌ನ್‌ ಸದ್ಯ 99* ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರನೇ ಟೆಸ್ಟ್​ ಪಂದ್ಯದಲ್ಲಿ ಅವರು 500 ಟೆಸ್ಟ್​ ವಿಕೆಟ್​ಗಳನ್ನು ಪೂರ್ತಿಗೊಳಿಸಿದ ಸಾಧನೆ ಕೂಡ ಮಾಡಿದ್ದರು. ಸದ್ಯ ಅವರ ಬತ್ತಳಿಕೆಯಲ್ಲಿ 507 ವಿಕೆಟ್​ಗಳಿವೆ. ಅತ್ಯಧಿಕ 35 ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದ ಭಾರತೀಯ ದಾಖಲೆ ಕೂಡ ಇವರ ಹೆಸರಿನಲ್ಲಿದೆ. 8 ಬಾರಿ 10ಕ್ಕಿಂತ ಅಧಿಕ ವಿಕೆಟ್​ ಕಿತ್ತ ದಾಖಲೆ ಕೂಡ ಇವರದ್ದಾಗಿದೆ.

ಇದನ್ನೂ ಓದಿ WPL 2024 Points Table: ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

ಬೌಲಿಂಗ್​ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಇವರು 3 ಸಾವಿರಕ್ಕೂ ಅಧಿಕ ರನ್​ ಬಾರಿಸಿದ್ದಾರೆ. ಇದರಲ್ಲಿ 5 ಶತಕಗಳು ಕೂಡ ಒಳಗೊಂಡಿದೆ. 14 ಅರ್ಧಶತಕ ಬಾರಿಸಿದ್ದಾರೆ.

ಭಾರತ ಪರ 100 ಟೆಸ್ಟ್​ ಪಂದ್ಯ ಆಡಿದ ಆಟಗಾರರು


ಸಚಿನ್‌ ತೆಂಡೂಲ್ಕರ್‌ (200)

ರಾಹುಲ್‌ ದ್ರಾವಿಡ್‌ (163)

ವಿವಿಎಸ್‌ ಲಕ್ಷ್ಮಣ್‌ (134)

ಅನಿಲ್‌ ಕುಂಬ್ಳೆ (132)

ಕಪಿಲ್‌ದೇವ್‌ (131)

ಸುನೀಲ್‌ ಗಾವಸ್ಕರ್‌ (125)

ಸೌರವ್‌ ಗಂಗೂಲಿ (113)

ವಿರಾಟ್‌ ಕೊಹ್ಲಿ (113*)

ಇಶಾಂತ್‌ ಶರ್ಮ (103*)

ಹರ್ಭಜನ್‌ ಸಿಂಗ್‌ (103)

ವೀರೇಂದ್ರ ಸೆಹವಾಗ್‌ (103)

ಚೇತೇಶ್ವರ್‌ ಪೂಜಾರ (103*)

ಅಂತಿಮ ಟೆಸ್ಟ್​ಗೆ ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್, ದೇವದತ್ ಪಡಿಕ್ಕಲ್.

Exit mobile version