Site icon Vistara News

R. Ashwin: ವಿಂಡೀಸ್​ ಸರಣಿಯಲ್ಲಿ 3 ವಿಕೆಟ್​ ಪಡೆದರೆ ನೂತನ ದಾಖಲೆ ಬರೆಯಲಿದ್ದಾರೆ ಆರ್​. ಅಶ್ವಿನ್​

IND vs ENG, Ravichandran Ashwin Withdraws From India Squad

ಮುಂಬಯಿ: ವೆಸ್ಟ್​ ಇಂಡೀಸ್​ ವಿರುದ್ಧದ ಕ್ರಿಕೆಟ್​ ಸರಣಿಗಾಗಿ ಭಾರತ ತಂಡ ಈಗಾಗಲೇ ಕೆರಿಬಿನ್​ ದ್ವೀಪಕ್ಕೆ ತಲುಪಿದ್ದು ಅಭ್ಯಾಸದಲ್ಲಿ ತೊಡಗಿದೆ. ಇತ್ತಂಡಗಳ ನಡುವೆ ಜುಲೈ 12 ರಿಂದ ನಡೆಯಲಿರುವ ಟೆಸ್ಟ್ ಪಂದ್ಯದೊಂದಿಗೆ ಈ ಸರಣಿ ಪ್ರಾರಂಭವಾಗಲಿದೆ. ಇದೇ ಸರಣಿಯಲ್ಲಿ ಆರ್​. ಅಶ್ವಿನ್(Ravichandran Ashwin)​ ಅವರು ಮೂರು ವಿಕೆಟ್(wicket records)​ ಕಬಳಿಸಿದರೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ಗಳ ಸಾಲಿಗೆ ಸೇರುವುದರ ಜತೆಗೆ, 700 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದ ಮೂರನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಎಲ್ಲ ಮೂರು ಸ್ವರೂಪಗಳಲ್ಲಿ 270 ಪಂದ್ಯಗಳನ್ನು ಆಡಿಡುವ ಅವರು 700 ವಿಕೆಟ್‌ಗಳ ಮೈಲಿಗಲ್ಲು ತಲುಪಲು 3 ವಿಕೆಟ್‌ಗಳ ಅಗತ್ಯವಿದೆ. ಅನಿಲ್ ಕುಂಬ್ಳೆ (953) ಮತ್ತು ಹರ್ಭಜನ್ ಸಿಂಗ್ (707) ಮಾತ್ರ 700ಕ್ಕೂ ಹೆಚ್ಚು ವಿಕೆಟ್​ ಕಬಳಿಸಿದ್ದಾರೆ.

2010 ರಲ್ಲಿ ಕ್ರಿಕೆಟ್​ ವೃತ್ತಿಜೀವನ ಆರಂಭಿಸಿದ ಅಶ್ವಿನ್ ಸದ್ಯ​ 25.93 ರ ಸರಾಸರಿಯಲ್ಲಿ ಮತ್ತು 3.37 ರ ಎಕಾನಮಿ ರೇಟ್‌ನಲ್ಲಿ ಒಟ್ಟು 697 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್​​ ಬೌಲಿಂಗ್​ ಶ್ರೇಯಾಂಕದಲ್ಲಿ ನಂ.1 ಬೌಲರ್​ ಆಗಿರುವ ಅವರು ಇದೀಗ ವಿಂಡೀಸ್​ ವಿರುದ್ಧದ ಸರಣಿಯಲ್ಲಿ ಹೊಸ ಇತಿಹಾಸ ಬರೆಯಲು ಕಾತರದಿಂದ ಕಾಯುತ್ತಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿತ್ತು. ಆದರೆ ವಿಂಡೀಸ್​ ವಿರುದ್ಧ ಅವರು ಆಡುವ ಎಲ್ಲ ಸಾಧ್ಯತೆ ಇದೆ.

ಅಶ್ವಿನ್ ಇದುವರೆಗೆ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 21.85 ಸರಾಸರಿಯಲ್ಲಿ 60 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರಿಗೆ ಆರನೇ ಸ್ಥಾನ. ಶ್ರೀನಿವಾಸ್​ ವೆಂಕಟರಾಘವನ್ (68), ಚಂದ್ರಶೇಖರ್ (65) ಮತ್ತು ಬಿಷನ್ ಸಿಂಗ್ ಬೇಡಿ (62) ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಕೆರಿಬಿಯನ್​ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್‌, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ಮೊದಲು 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜುಲೈ 12-16) ಮತ್ತು ಪೋರ್ಟ್‌ ಆಫ್ ಸ್ಪೇನ್‌ (ಜುಲೈ. 20-24). ಪೋರ್ಟ್‌ ಆಫ್ ಸ್ಪೇನ್‌ನ ಕ್ವೀನ್ಸ್‌ಪಾರ್ಕ್‌ ಓವಲ್‌ನಲ್ಲಿ ನಡೆಯುವ 100ನೇ ಟೆಸ್ಟ್‌ ಪಂದ್ಯ ಇದೆಂಬುದು ವಿಂಡೀಸ್‌ ಕ್ರಿಕೆಟ್‌ ಪಾಲಿಗೆ ಸಂಭ್ರಮದ ಸಂಗತಿ. ಇದು ಭಾರತದ ಪಾಲಿಗೆ 3ನೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಆವೃತ್ತದ ಮೊದಲ ಸರಣಿಯಾಗಲಿದೆ.

ಇದನ್ನೂ ಓದಿ IND VS AUS: ಪೂಜಾರ ಬೌಲಿಂಗ್​ ಕಂಡು ಕೆಲಸ ಬಿಡಬೇಕೆ ಎಂದ ಆರ್​. ಅಶ್ವಿನ್; ಪೂಜಾರ ನೀಡಿದ ಪ್ರತಿಕ್ರಿಯೆ ಏನು?

ಭಾರತ ಟೆಸ್ಟ್ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉ.ನಾ), ಕೆಎಸ್ ಭರತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.

Exit mobile version