Site icon Vistara News

R Praggnanandhaa: ವಿಶ್ವ ಚಾಂಪಿಯನ್​ ಮಣಿಸಿ ನಂ.1 ಸ್ಥಾನಕ್ಕೇರಿದ ಭಾರತದ ಪ್ರಗ್ನಾನಂದ

Praggnanandhaa Beats World Champion Ding Liren

ಬೆಂಗಳೂರು: ಭಾರತದ ಉದಯೋನ್ಮುಖ ಚೆಸ್ ತಾರೆ ಆರ್ ಪ್ರಗ್ನಾನಂದ(R Praggnanandhaa) ಅವರು ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್​ನಲ್ಲಿ(Tata Steel Masters tournament) ವಿಶ್ವ ಚಾಂಪಿಯನ್ ಡಿಂಗ್ ಲಿರೆನ್(World Champion Ding Liren) ಅವರನ್ನು ಮಣಿಸುವ ಮೂಲಕ ನಂಬರ್ 1 ಸ್ಥಾನಕ್ಕೇರಿದ್ದಾರೆ. ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಭಾರತದ ಅಗ್ರ ಶ್ರೇಯಾಂಕದ ಚೆಸ್ ಆಟಗಾರನಾಗುವ ಮೂಲಕ ಅನುಭವಿ ವಿಶ್ವನಾಥನ್ ಆನಂದ್(Viswanathan Anand) ಅವರನ್ನು ಹಿಂದಿಕ್ಕಿದ್ದಾರೆ.

ಮೊದಲ ಬಾರಿಗೆ ನಂ.1 ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ ಪ್ರಗ್ನಾನಂದ ಅವರಿಗೆ ಅದಾನಿ ಗ್ರೂಪ್‌ನ ಅಧ್ಯಕ್ಷರಾದ ಗೌತಮ್ ಅದಾನಿ(Gautam Adani) ಟ್ವಿಟರ್​ ಎಕ್ಸ್​ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

“ನಿಮ್ಮ ಸಾಧನೆಯ ಬಗ್ಗೆ ಅಪಾರ ಹೆಮ್ಮೆ ಇದೆ. ಎಂತಹ ವಿಸ್ಮಯಕಾರಿ ಕ್ಷಣ, ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ ನಿಮ್ಮ ಪರಾಕ್ರಮ ಮಚ್ಚಲೇ ಬೇಕು. ನಿಮ್ಮ ಈ ಗೆಲುವು ನಮ್ಮ ದೇಶಕ್ಕೆ ನಿಜಕ್ಕೂ ಹೆಮ್ಮೆಯ ಕ್ಷಣ” ಎಂದು ಗೌತಮ್ ಅದಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ನನ್ನ ದೇಶವು ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಾನು ಆಡಿದಾಗಲೆಲ್ಲಾ, ರಾಷ್ಟ್ರಕ್ಕಾಗಿ ಹೆಚ್ಚಿನ ಪ್ರಶಸ್ತಿಗಳನ್ನು ಗೆಲ್ಲುವುದು ನನ್ನ ಏಕೈಕ ಗುರಿಯಾಗಿದೆ. ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಅದಾನಿ ಗ್ರೂಪ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ.” ಎಂದು ಪ್ರಗ್ನಾನಂದ ಹೇಳಿದರು.

ಇದನ್ನೂ ಓದಿ ರಾಜ ಮಾರ್ಗ ಅಂಕಣ : ಪ್ರಜ್ಞಾನಂದ ವಿಶ್ವವಿಜಯಕ್ಕೆ ಇನ್ನೊಂದೇ ಮೆಟ್ಟಿಲು; ಅಮ್ಮನೇ ಅವನ ಪಾಲಿಗೆ ದೇವರು

ಗೆಲುವಿನ ಕುರಿತು ಮಾತನಾಡಿರುವ ಪ್ರಗ್ನಾನಂದ, ಅತ್ಯಂತ ಪ್ರಬಲ ಆಟಗಾರನನ್ನು ಸೋಲಿಸಿದರೆ, ಅದು ಯಾವಾಗಲೂ ವಿಶೇಷವಾಗಿರುತ್ತದೆ. ಏಕೆಂದರೆ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಚೆಸ್​ನಲ್ಲಿ ವಿಶ್ವ ಚಾಂಪಿಯನ್ ವಿರುದ್ಧ ಮೊದಲ ಬಾರಿಗೆ ಗೆದ್ದಿರುವುದು ಖುಷಿ ಕೊಟ್ಟಿದೆ. ಇದೇ ಪ್ರದರ್ಶನವನ್ನು ಮುಂದುವರಿಸುವ ನಂಬಿಕೆ ಇದೆ ಎಂದು ಅವರು ಹೇಳಿದರು.

2023ರಲ್ಲಿ ನಡೆದಿದ್ದ ಚೆಸ್​ ವಿಶ್ವಕಪ್ ಫೈನಲ್ ತಲುಪಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಆಟಗಾರ ಎಂಬ ಹಿರಿಮೆಗೆ ಪ್ರಗ್ನಾನಂದ ಪಾತ್ರರಾಗಿದ್ದರು. ಅಲ್ಲದೆ ವಿಶ್ವನಾಥನ್ ಆನಂದ್ ನಂತರ ವಿಶ್ವಕಪ್ ಫೈನಲ್ ತಲುಪಿದ ಎರಡನೇ ಭಾರತೀಯ ಎನಿಸಿಕೊಂಡಿದ್ದರು. ಫೈನಲ್​ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ಎದುರು ತೀವ್ರ ಪೈಪೋಟಿ ನಡೆಸಿ ಸೋಲು ಕಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇವರ ಈ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿತ್ತು. 2023ರಲ್ಲಿ ಚೀನದ ಹ್ಯಾಂಗ್‌ಝೌನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಪ್ರಗ್ನಾನಂದ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು.

Exit mobile version