Site icon Vistara News

ICC Award: ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಗೆದ್ದ ರಚಿನ್​ ರವೀಂದ್ರ

Rachin Ravindra

ದುಬೈ: ಹಾಲಿ ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಬೆಂಗಳೂರು ಮೂಲಕ ನ್ಯೂಜಿಲ್ಯಾಂಡ್​ ಆಟಗಾರ ರಚಿನ್​ ರವೀಂದ್ರ ಮೊದಲ ಬಾರಿಗೆ ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ(ICC player of the month award) ಗೆದ್ದಿದ್ದಾರೆ. ಈ ರೇಸ್​ನಲ್ಲಿದ್ದ ಟೀಮ್​ ಇಂಡಿಯಾ ವೇಗಿ ಜಸ್​ಪ್ರೀತ್​ ಬುಮ್ರಾ ಮತ್ತು ದಕ್ಷಿಣ ಆಫ್ರಿಕಾದ ಬ್ಯಾಟರ್​ ಕ್ವಿಂಟನ್​ ಡಿ ಕಾಕ್ ಕಾಣಿಸಿಕೊಂಡಿದ್ದರು. ಆದರೆ ಇವರನ್ನು ಹಿಂದಿಕ್ಕಿ ರಚಿನ್​ ಈ ಪ್ರಶಸ್ತಿ ಪಡೆದಿದ್ದಾರೆ.

ಚೊಚ್ಚಲ ವಿಶ್ವಕಪ್ ಆಡುತ್ತಿರುವ ರಚಿನ್ ರವೀಂದ್ರ ಆಡಿದ ಒಂಬತ್ತು ಇನ್ನಿಂಗ್ಸ್​ನಲ್ಲಿ ಮೂರು ಶತಕ ಬಾರಿಸಿ ಮಿಂಚಿದ್ದಾರೆ. ಪ್ರಸಕ್ತ ಸಾಗುತ್ತಿರುವ ವಿಶ್ವಕಪ್​ ಪಂದ್ಯಾವಳಿಯಲ್ಲಿ ಗರಿಷ್ಠ ರನ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಚಿನ್​ ರವೀಂದ್ರ ಅಗ್ರಸ್ಥಾನದಲ್ಲಿದ್ದಾರೆ. ಅವರು 565*ರನ್​ ಬಾರಿಸಿದ್ದಾರೆ. ಕಿವೀಸ್​ ಸೆಮಿ ಮತ್ತು ಫೈನಲ್​ ತಲುಪಿದರೆ ಇವರಿಗೆ ಇನ್ನು ಎರಡು ಪಂದ್ಯಗಳು ಸಿಗಲಿದೆ.

ತುಂಬಾ ಸಂತಸವಾಗಿದೆ

“ಈ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ” ಎಂದು ರವೀಂದ್ರ ಈ ಪ್ರಶಸ್ತಿ ಪಡೆದ ಬಳಿಕ ಐಸಿಸಿಗೆ ತಿಳಿಸಿದರು. “ಇದು ವೈಯಕ್ತಿಕವಾಗಿ ಮತ್ತು ತಂಡಕ್ಕೆ ವಿಶೇಷವಾದ ತಿಂಗಳು. ಭಾರತದಲ್ಲಿ ವಿಶ್ವಕಪ್ ಆಡಲು ಸಾಧ್ಯವಾದದ್ದು ನಂಬಲಾಗದಷ್ಟು ವಿಶೇಷವಾಗಿದೆ. ತಂಡದ ಬೆಂಬಲವು ಬಹಳಷ್ಟು ಸಹಾಯ ಮಾಡಿದೆ” ಎಂದು ರವೀಂದ್ರ ಹೇಳಿದರು.

ಇದನ್ನೂ ಓದಿ ICC World Cup 2023 : ಲಂಕಾ ವಿರುದ್ದ ನ್ಯೂಜಿಲ್ಯಾಂಡ್​ ಗೆದ್ದ ಬಳಿಕ ಅಂಕಪಟ್ಟಿಯಲ್ಲಾದ ಬದಲಾವಣೆಯೇನು?

ಮಹಿಳಾ ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್​ನ ಹೀಲಿ ಮ್ಯಾಥ್ಯೂಸ್ ಅವರಿಗೆ ಈ ಪ್ರಶಸ್ತಿ ದೊರೆತಿದೆ. ಮ್ಯಥ್ಯೂಸ್ ಅವರೊಂದಿಗೆ ಬಾಂಗ್ಲಾದೇಶದ ನಹಿದಾ ಅಕ್ತರ್ ಮತ್ತು ನ್ಯೂಜಿಲ್ಯಾಂಡ್​ನ ಅಮೆಲಿಯಾ ಕೆರ್ ನಾಮಿನೇಟ್ ಆಗಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿನ ಅದ್ಭುತ ಪ್ರದರ್ಶನ ತೋರಿದ ಕಾರಣ ಹೀಲಿ ಮ್ಯಾಥ್ಯೂಸ್​ಗೆ ಈ ಪ್ರಶಸ್ತಿ ಒಲಿಯಿತು.

ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ

ರಚಿನ್​ ರವೀಂದ್ರ(Rachin Ravindra) ಅವರಿಗೆ ಯಾರ ದೃಷ್ಟಿಯೂ ಬೀಳಬಾರದೆಂದು ಅವರ ಅಜ್ಜಿ ದೃಷ್ಟಿ ತೆಗೆದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ. ಶ್ರೀಲಂಕಾ ಎದುರಿನ ಪಂದ್ಯ ಮುಗಿದ ಬಳಿಕ ರಚಿನ್​ ಅವರು ಬೆಂಗಳೂರಿನಲ್ಲೇ ಇರುವ ತಮ್ಮ ಪ್ರೀತಿಯ ಅಜ್ಜಿ ಮನೆಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಅವರು ತಮ್ಮ ಮೊಮ್ಮಗನಿಗೆ ಯಾರ ದೃಷ್ಟಿಯೂ ಬೀಳಬಾರದು ಎಂದು ದೃಷ್ಟಿ ತೆಗೆದಿದ್ದಾರೆ. ಈ ಮುದ್ದಾದ ವಿಡಿಯೊ ಎಲ್ಲಡೆ ವೈರಲ್​ ಆಗುತ್ತಿದೆ.

Exit mobile version