ಪದೇ ಪದೇ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, ಸ್ಪೇನ್‌ನ ರಾಫೆಲ್ ನಡಾಲ್(Rafael Nadal) ಅವರು ಮತ್ತೆ ಟೆನಿಸ್ ಕೋಟ್ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಪ್ರತಿಷ್ಠಿತ ಫ್ರೆಂಚ್ ಓಪನ್(French Open) ಮತ್ತು ಪ್ಯಾರಿಸ್ ಒಲಿಂಪಿಕ್ಸ್(Paris Olympics) ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದೇನೆ ಎಂದು ಹೇಳಿದ್ದಾರೆ.
‘ಫೆಬ್ರವರಿ 19 ರಂದು ದೋಹಾದಲ್ಲಿ ನಡೆಯಲಿರುವ ಎಟಿಪಿ (ATP) 250 ಪಂದ್ಯಾವಳಿಯಾದ ಕತಾರ್ ಓಪನ್ ಟೂರ್ನಿಯಿಂದ ಹಿಂದೆಸರಿಯಲು ನಿರ್ಧರಿಸಿದ್ದೇನೆ. ಆದರೆ, ಫ್ರೆಂಚ್ ಓಪನ್ ಮತ್ತು ಒಲಿಂಪಿಕ್ಸ್ ಟೂರ್ನಿಯಲ್ಲಿ ಆಡುವ ವಿಶ್ವಾಸದಲ್ಲಿದ್ದೇನೆ’ ಎಂದು ನಡಾಲ್ ಗುರುವಾರ ಖಚಿತಪಡಿಸಿದ್ದಾರೆ.
ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷ ಟೆನಿಸ್ನಿಂದ ದೂರ ಉಳಿದಿದ್ದ ನಡಾಲ್ ಇದೇ ವರ್ಷಾರಂಭದಲ್ಲಿ ನಡೆದಿದ್ದ ಬ್ರಿಸ್ಬೇನ್ ಇಂಟರ್‌ನ್ಶಾಶನಲ್ ಕಣಕ್ಕಿಳಿದಿದ್ದರು. ಆದರೆ ಮತ್ತೆ ಗಾಯಕ್ಕೆ ತುತ್ತಾಗಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಕೂಟದಿಂದ ಹಿಂದೆ ಸರಿದಿದ್ದರು. ಇದೀಗ ಫ್ರೆಂಚ್ ಓಪನ್ ಆಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ Rafael Nadal | ರಾಫೆಲ್ ನಡಾಲ್ ಗ್ರ್ಯಾನ್ ಸ್ಲಾಮ್ ಸಾಧನೆ
ನಿವೃತ್ತಿ ಘೋಷಿಸಲು ಬಯಸುವುದಿಲ್ಲ
37 ವರ್ಷದ ನಡಾಲ್ ನಾನು ಈಗಲೇ ನಿವೃತ್ತಿ ಘೋಷಿಸಲು ಬಯಸುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ‘ಮುಂದೆ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ. ಹಿಂದೆಯೂ ಅನೇಕ ಸಲ ಗಾಯದಿಂದ ತೇಚರಿಸಿ ಟೆನಿಸ್ ಅಂಗಳಕ್ಕೆ ಮರಳಿ ಟ್ರೋಫಿ ಗೆದ್ದಿದ್ದೇನೆ. ದೈಹಿಕವಾಗಿ ನಾನು ಗಟ್ಟಿಯಾಗಿದ್ದು ಆಡುವ ಮನಸ್ಸು ಇದ್ದಾಗ ನಾನೇಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು. ಆದರೆ ಅವರನ್ನು ಗಾಯ ಬೆನ್ನು ಬಿಡುವಂತೆ ತೋರುತ್ತಿಲ್ಲ ಹೀಗಾಗಿ ಅವರು ಮುಂದಿನ ದಿನಗಳಲ್ಲಿ ವಿದಾಯ ಘೋಷಿಸಿದರೂ ಅಚ್ಚರಿಯಿಲ್ಲ.
ಇನ್ಫೋಸಿಸ್ಗೆ ರಾಯಭಾರಿ
ಕಳೆದ ವರ್ಷ ಟೆನಿಸ್ ದಿಗ್ಗಜ ರಫೆಲ್ ನಡಾಲ್ ಅವರನ್ನು ಐಟಿ ಸಂಸ್ಥೆ ಇನ್ಫೋಸಿಸ್(Infosys) ಬ್ರ್ಯಾಂಡ್ ಅಂಬಾಸಿಡರ್(global ambassador) ಆಗಿ ನೇಮಿಸಿತ್ತು. ಮುಂದಿನ ಮೂರು ವರ್ಷಗಳ ಕಾಲ ನಡಾಲ್ ಅವರು ಇನ್ಫೋಸಿಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿದ್ದಾರೆ.
Hello everyone. Very excited to join Team @Infosys as their global brand ambassador. Infosys has brought its digital expertise to the global tennis ecosystem and love impact that Infosys is making to communities beyond the court. I am looking forward to this partnership to do… pic.twitter.com/vf8wcV5ixp
— Rafa Nadal (@RafaelNadal) August 24, 2023
“ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಗೌರವಾನ್ವಿತ ಟೆನಿಸ್ ಚಾಂಪಿಯನ್ ಆಗಿರುವ ರಫೆಲ್ ನಡಾಲ್ ಅವರನ್ನು ಇನ್ಫೋಸಿಸ್‌ನ ರಾಯಭಾರಿಯಾಗಿ ಸ್ವಾಗತಿಸಲು ಹೆಮ್ಮೆಯಾಗುತ್ತಿದೆ” ಎಂದು ಇನ್ಫೋಸಿಸ್‌ನ ಸಿಇಒ ಮತ್ತು ಎಂಡಿ ಆಗಿರುವ ಸಲೀಲ್ ಪರೇಖ್ ಹೇಳಿದ್ದರು. ಎಟಿಪಿ ಟೂರ್, ರೋಲ್ಯಾಂಡ್-ಗ್ಯಾರೋಸ್, ಆಸ್ಟ್ರೇಲಿಯನ್ ಓಪನ್ ಮತ್ತು ಸೇರಿ ಟೆನಿಸ್ ಹಾಲ್ ಆಫ್ ಫೇಮ್‌ಗೆ ಡಿಜಿಟಲ್ ಇನ್ನೋವೇಶನ್ ಪಾಲುದಾರರಾಗಿ, ಬ್ರಾಂಡ್ ಇನ್ಫೋಸಿಸ್ ಜಾಗತಿಕವಾಗಿ ಎಐ, ಕ್ಲೌಡ್, ಡೇಟಾವನ್ನು ಬಳಸಿಕೊಂಡು ಒಂದು ಬಿಲಿಯನ್ ಅಭಿಮಾನಿಗಳಿಗೆ ಟೆನಿಸ್ ಕುರಿತ ಮಾಹಿತಿಯನ್ನು ನೀಡಲು ಸದಾ ಸಿದ್ಧ ಎಂದು ಇನ್ಫೋಸಿಸ್ ತನ್ನ ಹೇಳಿಕೆಯಲ್ಲಿ ಪ್ರಕಟಿಸಿತ್ತು.