Site icon Vistara News

Raghu Dixit : ಪ್ಯಾರಿಸ್​ ಒಲಿಂಪಿಕ್ಸ್​ಗೆ ಕನ್ನಡ ಹಾಡುಗಳ ಮೆರುಗು ; ರಘು ದೀಕ್ಷಿತ್ ತಂಡದಿಂದ ವಿಶೇಷ ಕಾರ್ಯಕ್ರಮ

Raghu Dixit

ಬೆಂಗಳೂರು: ಜುಲೈ 26ರಂದು ನಡೆಯಲಿರುವ ಪ್ಯಾರಿಸ್​ ಒಲಿಂಪಿಕ್ಸ್ (Paris Olympics) ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡದ ಕಂಪು ಮೊಳಗಲಿದೆ. ಹೇಗೆಂದರೆ ಗಾಯಕ ರಘು ದೀಕ್ಷಿತ್ (Raghu Dixit) ಅವರ ಸಂಗೀತ ಬ್ಯಾಂಡ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದೆ. ಅವರ ಹಾಡುಗಳು ವಿಶೇಷವಾಗಿ ಜಾನಪದ ಹಿನ್ನೆಲೆಯವು. ಇಂಥ ಹಾಡುಗಳು ರಘು ದೀಕ್ಷಿತ್ ಪ್ರಾಜೆಕ್ಟ್ ಮೂಲಕ ಒಲಿಂಪಿಕ್ಸ್ ತಾಣದಲ್ಲಿ ಮೊಳಗಲಿದೆ. ಜುಲೈ 29 ಮತ್ತು 30 ರಂದು ಪಾರ್ಕ್ ಡಿ ಲಾ ವಿಲ್ಲೆಟ್ ನಲ್ಲಿರುವ ಒಲಿಂಪಿಕ್ ಹೌಸ್ ಆಫ್ ಇಂಡಿಯಾದಲ್ಲಿ ಬ್ಯಾಂಡ್ ಪ್ರದರ್ಶನ ನೀಡಲಿದೆ.

ಈ ಹಿಂದೆ ಅನೇಕ ಬಾರಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿರುವ ದೀಕ್ಷಿತ್, ದೇಶವನ್ನು ಪ್ರತಿನಿಧಿಸುವ ಖುಷಿ ಅದಮ್ಯ ಎಂದು ಹೇಳಿದ್ದಾರೆ. “ಭಾರತವನ್ನು ಪ್ರತಿನಿಧಿಸುವುದು ಯಾವಾಗಲೂ ಗೌರವದ ಸಂಕೇತ . ಈ ಹಿಂದೆಯೂ ಪ್ಯಾರಿಸ್​ನಲ್ಲಿ ಪ್ರದರ್ಶನ ನೀಡಿದ್ದೆವು ಎಂದು ಅವರು ಹೇಳಿದ್ದಾರೆ. ಅವರು ಸದ್ಯಕ್ಕೆ ಯುರೂಪ್​ನಲ್ಲಿದ್ದು ಹೊಸ ಆಲ್ಬಂ ಶಕ್ಕರ್​ ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಬ್ಯಾಂಡ್​ ಪ್ರದರ್ಶನದ ವಿಶೇಷ ಏನೆಂದರೆ . ಪ್ರದರ್ಶನವು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ವಿಶೇಷ ಅತಿಥಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳಿದ್ದಾರೆ.

ನಮ್ಮ ತಮ್ಮ ಸಂಗೀತ ಕಚೇರಿಗಳಲ್ಲಿ ಯಾವಾಗಲೂ ಉತ್ಸಾಹ ತುಂಬಿರುತ್ತದೆ ಎಂದು ಹೇಳುತ್ತಾರೆ ರಘು ದೀಕ್ಷಿತ್​. ಸಂಗೀತ ಕಚೇರಿಗಳಲ್ಲಿ, ಎಲ್ಲರೂ ನೃತ್ಯ ಮಾಡಬೇಕು. ಅದು ನಾವು ಅನುಸರಿಸುವ ನಿಯಮ. ಪ್ರೇಕ್ಷಕರಲ್ಲಿ ಯಾರು ಇದ್ದಾರೆ ಎಂಬುದು ಮುಖ್ಯವಲ್ಲ. ಪ್ರತಿಯೊಬ್ಬರೂ ಖುಷಿ ಪಡಬೇಕು ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿ: Gautam Gambhir : ನನ್ನ ಮತ್ತು ಕೊಹ್ಲಿಯ ನಡುವೆ ಗೌರವಯುತ ಸಂಬಂಧವಿದೆ; ಗೌತಮ್ ಗಂಭೀರ್​

19 ನೇ ಶತಮಾನದ ಕವಿ ಶಿಶುನಾಳ ಶರೀಫ್ ಅವರ ತತ್ವಪದಗಳೇ ನಮ್ಮ ಹಾಡಿನ ಸಾರವಾಗಿದೆ. ಸಂತ ಕಬೀರ ಮತ್ತು ಕನ್ನಡ ಕವಿ ದ.ರಾ.ಬೇಂದ್ರೆ ಅವರ ಕೆಲವು ಕವಿತೆಗಳೂ ನಮ್ಮಲ್ಲಿವೆ. ಕಾರ್ಯಕ್ರಮದಲ್ಲಿ ನೀವು ಸಾಕಷ್ಟು ಫ್ಯೂಷನ್ ಸಂಗೀತ ನಿರೀಕ್ಷಿಸಬಹುದು ಎಂದು ದೀಕ್ಷಿತ್ ಬಹಿರಂಗಪಡಿಸಿದ್ದಾರೆ.

ಭಾರತೀಯ ತತ್ವಶಾಸ್ತ್ರವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿವುದು ಸಂಗೀತ ಶ್ರೇಣಿಯ ಹಿಂದಿನ ಆಲೋಚನೆಯಾಗಿದೆ. ಪ್ರೇಕ್ಷಕರು ಮತ್ತು ಕ್ರೀಡಾಪಟುಗಳು ತಮ್ಮ ಮಿತಿಗಳನ್ನು ಮೀರಿ ಈ ಹಾಡುಗಳನ್ನು ಅನುಭವಿಸಬಹುದು ಎಂದು ಹೇಳಿದ್ದಾರೆ.

ಕೇವಲ ಸಂಗೀತವಲ್ಲ; ತಮ್ಮ ಸಾಂಪ್ರದಾಯಿಕ ಉಡುಗೆಯ ಮೂಲಕವೂ ರಘು ದೀಕ್ಷಿತ್​ ಹೆಸರುವಾಸಿ. ಅವರು ತಮ್ಮ ಪ್ರದರ್ಶನಕ್ಕೆ ಹೊಸ ನೋಟವನ್ನು ಭರವಸೆ ನೀಡದ್ದಾರೆ. “ನಾವು ಪ್ರಸ್ತುತ ಆಲ್ಬಂನೊಂದಿಗೆ ಬ್ಯುಸಿಯಾಗಿದ್ದೇವೆ. ಈ ಬಗ್ಗೆ ಹೊಸ ನೋಟವನ್ನು ಹೊಂದಿದ್ದೇವೆ. ಬೆಂಗಳೂರಿನ ಡಿಸೈನರ್ ಗಳಾದ ಸಂಜಯ್ ಮತ್ತು ಸೀಮಾ ಅದಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಹೇಳೀದ್ದಾರೆ. ರಘು ದೀಕ್ಷಿತ್ ಯೋಜನೆಯಲ್ಲಿ ಭಾರತೀಯ ಮೂಲದ ಕಲಾವಿದರಾದ ಶಾನ್, ಪೆನ್ ಮಸಾಲಾ ಮತ್ತು ಟಾಮಿ ಖೋಸ್ಲಾ ಮತ್ತು ಜವಾರಿ ಕೂಡ ಪಾಲ್ಗೊಳ್ಳಲಿದ್ದಾರೆ.

Exit mobile version