ನವ ದೆಹಲಿ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಲ್ಲಿ (ICC World Cup 2023) ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಗೆದ್ದಿರುವುದು ಸುದ್ದಿಯಾಗಿತ್ತು. ಇದೇ ಪಂದ್ಯದಲ್ಲಿ ಆಪ್ಘನ್ ತಂಡದ ಆರಂಭಿಕ ಬ್ಯಾಟರ್ ರಹ್ಮನುಲ್ಲಾ ಗುರ್ಬಜ್ (Rahmanullah Gurbaz) ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ದಂಡನೆಗೆ ಒಳಗಾಗುವ ಸಾಧ್ಯತೆಗಳಿವೆ. ಅವರಿಗೆ ಪಂದ್ಯದ ಶುಲ್ಕ ಅಥವಾ ಅದಕ್ಕಿಂತ ಹೆಚ್ಚಿನ ದಂಡನೆ ವಿಧಿಸುವ ಸಾಧ್ಯತೆಗಳಿವೆ.
ರಹಮಾನುಲ್ಲಾ ಗುರ್ಬಾಜ್ ಅವರು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ, ಇದು “ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ಮೈದಾನದ ಉಪಕರಣಗಳು ಅಥವಾ ಫಿಟ್ಟಿಂಗ್ಗಳ ದುರುಪಯೋಗಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಲಾಗಿದೆ.
ಅಫ್ಘಾನಿಸ್ತಾನದ ಇನ್ನಿಂಗ್ಸ್ನ 19 ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ರಹಮಾನುಲ್ಲಾ ಗುರ್ಬಾಜ್ 80 ರನ್ಗಳಿಗೆ ರನ್ ಔಟ್ ಆದ ನಂತರ ಮೈದಾನದಿಂದ ಹೊರಹೋಗುವಾಗ ಬೌಂಡರಿ ರೋಪ್ ಮತ್ತು ಕುರ್ಚಿಗೆ ಬ್ಯಾಟ್ ನಿಂದ ಹೊಡೆದಿದ್ದರು.
ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರಿಗಳ ಜೆಫ್ ಕ್ರೋವ್ ಪ್ರಸ್ತಾಪಿಸಿದ ಶಿಕ್ಷೆಯನ್ನು ರಹಮಾನುಲ್ಲಾ ಗುರ್ಬಾಜ್ ಒಪ್ಪಿಕೊಂಡಿದ್ದಾರೆ. ಆರಂಭಿಕ ಆಟಗಾರನ ಶಿಸ್ತು ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಅವರ ಮೊದಲ ಅಪರಾಧವಾಗಿದೆ.
24 ತಿಂಗಳ ಅವಧಿಯಲ್ಲಿ ಆಟಗಾರನು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಅಂಕಗಳನ್ನು ತಲುಪಿದಾಗ, ಅವುಗಳನ್ನು ಅಮಾನತು ಅಂಕಗಳಾಗಿ ಪರಿವರ್ತಿಸಲಾಗುತ್ತದೆ ಮತ್ತು ಆಟಗಾರನನ್ನು ನಿಷೇಧಿಸಲಾಗುತ್ತದೆ. ಲೆವೆಲ್ 1 ಉಲ್ಲಂಘನೆಗೆ ಕನಿಷ್ಠ ದಂಡ ವಿಧಿಸಲಾಗುತ್ತದೆ. ಆಟಗಾರನ ಪಂದ್ಯದ ಶುಲ್ಕದ ಗರಿಷ್ಠ 50 ಪ್ರತಿಶತದಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ವಿಧಿಸಲಾಗುತ್ತದೆ.
ಇಂಗ್ಲೆಂಡ್ ವಿರುದ್ಧದ ಗೆಲುವು ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನದ ಮೊದಲ ವಿಜಯವಾಗಿದೆ. ಮುಂದಿನ ಪಂದ್ಯ ಬುಧವಾರ ಚೆನ್ನೈನಲ್ಲಿ ಅಜೇಯ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.
ವಿವಾದಕ್ಕೆ ಒಳಗಾದ ಅಂಪೈರ್ ತೀರ್ಪು
ಲಕ್ನೋ: ಎಷ್ಟೇ ತಂತ್ರಜ್ಞಾನ ಬಂದರೂ ಕ್ರಿಕೆಟ್ನಲ್ಲಿ ಅಂಪೈರ್ಗಳ ಕೆಲ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ಅಲ್ಲದೆ ಇದನ್ನು ಮಾನ್ಯ ಮಾಡುವ ರೀತಿಯೂ ಕೆಲವು ಬಾರಿ ವಿವಾದಕ್ಕೆ ಕಾರಣವಾಗುತ್ತದೆ. ಆಟಗಾರರು ಅಂಪೈರ್ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ ಹಲವು ನಿದರ್ಶನವೂ ಇದೆ. ಲಂಕಾ ವಿರುದ್ಧದ ಪಂದ್ಯದ ವೇಳೆ ಡೇವಿಡ್ ವಾರ್ನರ್ ಅವರಿಗೆ ಔಟ್ ನೀಡಿದ್ದು ಈಗ ಕ್ರಿಕೆಟ್ ವಲಯದಲ್ಲಿ ಚರ್ಚಿತ ವಿಷಯವಾಗಿದೆ.
ಈ ಸುದ್ದಿಗಳನ್ನೂ ಓದಿ
Shardul Thakur : ಕುಚಿಕು ದೋಸ್ತ್ ಶ್ರೇಯಸ್ ಮತ್ತು ಪತ್ನಿಯ ಜತೆ ಬರ್ತ್ಡೇ ಆಚರಿಸಿಕೊಂಡ ಶಾರ್ದೂಲ್
SL vs AUS: ಅಂಪೈರ್ ವಿವಾದಾತ್ಮಕ ತೀರ್ಪಿಗೆ ವಿಕೆಟ್ ಕೈಚೆಲ್ಲಿದ ಡೇವಿಡ್ ವಾರ್ನರ್
David Warner: ಮಳೆಯ ಮಧ್ಯೆಯೂ ಮೈದಾನ ಸಿಬ್ಬಂದಿಗೆ ನೆರವು ನೀಡಿದ ವಾರ್ನರ್
ಶ್ರೀಲಂಕಾ ನೀಡಿದ 210 ರನ್ಗಳ ಚೇಸಿಂಗ್ ಸಮಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಡೇವಿಡ್ ವಾರ್ನರ್ ಅವರು ವೇಗಿ ದಿಲ್ಶನ್ ಮಧುಶಂಕ ಅವರ ನಾಲ್ಕನೇ ಓವರ್‌ನಲ್ಲಿ ಎಲ್ಬಿಡಬ್ಲ್ಯುವಿಗೆ ಸಿಲುಕಿದರು. ಲಂಕಾ ಆಟಗಾರರ ಔಟ್ ಮನವಿಯನ್ನು ಪುಸ್ಕರಿಸಿದ ಅಂಪೈರ್ ಜೋಯಲ್ ವಿಲ್ಸನ್ ಔಟ್ ಎಂದು ತೀರ್ಪು ನೀಡಿದರು. ಆದರೆ ರಿವ್ಯೂನಲ್ಲಿ ನೋಡುವಾಗ ಇದು ಪಿಚಿಂಗ್ ಇನ್ ಸೈಡ್ ಇದ್ದರೂ ವಿಕೆಟ್ ಮಿಸಿಂಗ್ ಇದ್ದು ತೆಂಡು ಹೊರಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತು. ಆದರೆ ಅಂಪೈರ್ಸ್ ಕಾಲ್ ಪ್ರಕಾರ ಇದನ್ನು ಔಟ್ ಎಂದು ಮಾನ್ಯ ಮಾಡಲಾಯಿತು. ಇದು ವಾರ್ನರ್ ಅವರಿಗೆ ಬೇಸರ ಮತ್ತು ಅಚ್ಚರಿ ತಂದಿದೆ.
ವಿಕೆಟ್ ಮಿಸಿಂಗ್ ಇದ್ದರೂ ಅಂಪೈರ್ ಇದನ್ನು ಔಟ್ ಎಂದು ತೀರ್ಮಾನಿಸಿದ್ದು ಕಂಡು ಡೇವಿಡ್ ವಾರ್ನರ್ ಬೇಸರ ವ್ಯಕ್ತಪಡಿಸಿ ಮೈದಾನದಿಂದ ಹೊರನಡೆದರು. ಅಲ್ಲದೆ ಆಸೀಸ್ ಆಟಗಾರರು ಕೂಡ ಇದು ಹೇಗೆ ಔಟ್ ಎಂದು ಚಿಂತಿಸುತ್ತಿದ್ದರು. ಅಂಪೈರ್ ನಿರ್ಧಾರವೇ ಅಂತಿಮವಾದ ಕಾರಣ ಡೇವಿಡ್ ವಾರ್ನರ್ ಅನಾವಶ್ಯಕವಾಗಿ ವಿಕೆಟ್ ಕಳೆದುಕೊಳ್ಳುವಂತಾಯಿತು. ಈ ತೀರ್ಪು ನೀಡಿದ ಜೋಯಲ್ ವಿಲ್ಸನ್ ವಿರುದ್ಧ ಮತ್ತು ಐಸಿಸಿ ಕ್ರಿಕೆಟ್ ನಿಯಮದ ಬಗ್ಗೆ ಹಲವು ಕ್ರಿಕೆಟ್ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.