Site icon Vistara News

Rahul And Athiya | ಜನವರಿ 23ಕ್ಕೆ ವಿವಾಹವಾಗಲಿದ್ದಾರೆ ಕೆ.ಎಲ್​ ರಾಹುಲ್, ಅಥಿಯಾ ಶೆಟ್ಟಿ; ವರದಿ

kl rahul and athiya shetty

ಮುಂಬಯಿ: ಟೀಮ್​​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ.ಎಲ್. ರಾಹುಲ್(Rahul And Athiya) ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಇದೇ ತಿಂಗಳು (ಜನವರಿ) 23ರಂದು ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಶ್ರಿಲಂಕಾ ವಿರುದ್ಧದ ಏಕದಿನ ಸರಣಿಯ ಬಳಿಕ ಈ ಜೋಡಿಯ ವಿವಾಹ ನಡೆಯುವುದು ಖಚಿತ ಎಂದು ಕುಟುಂಬ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ವರದಿಗಳ ಪ್ರಕಾರ ಸುನೀಲ್ ಶೆಟ್ಟಿ ಅವರ ಮುಂಬೈಯಲ್ಲಿರುವ ಖಂಡಾಲಾ ಮನೆಯಲ್ಲಿಯೇ ಮಗಳು ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ರಾಹುಲ್ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಅಥಿಯಾ ಮತ್ತು ರಾಹುಲ್ ಅವರ ವಿವಾಹ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿದ್ದು, ವಿವಾಹ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ರಾಹುಲ್​ ಆಗಲಿ ಅಥಿಯಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆಯ ದಿನಾಂಕದ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ | Athiya Shetty | ಶೂಟಿಂಗ್‌ ವೇಳೆ ಒಟ್ಟಿಗೆ ಕಾಣಿಸಿಕೊಂಡ ನಟಿ ಅಥಿಯಾ ಶೆಟ್ಟಿ- ಕ್ರಿಕೆಟಿಗ ಕೆ ಎಲ್‌ ರಾಹುಲ್‌

Exit mobile version