Site icon Vistara News

Rahul Charity Auction: ಕ್ರಿಕೆಟಿಗ ರಾಹುಲ್ ಹರಾಜಿಗಿಟ್ಟ ವಸ್ತುಗಳಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ವಸ್ತು ಯಾವುದು?

Rahul Charity Auction

Rahul Charity Auction: Virat Kohli's jersey sold for INR 40 lakh

ಮುಂಬಯಿ: ಟೀಮ್​ ಇಂಡಿಯಾ(Team India) ಕ್ರಿಕೆಟಿಗ ಕೆ.ಎಲ್​ ರಾಹುಲ್(KL Rahul) ಮತ್ತು ಅವರ ಪತ್ನಿ ಅಥಿಯಾ ಶೆಟ್ಟಿ (Athiya Shetty) ಜತೆಗೂಡಿ ವಿಶೇಷ ಮಕ್ಕಳ ಶಾಲೆಯ (Rahul Charity Auction) ನೆರವಿಗಾಗಿ ಮುಂಬೈನ BKCಯಲ್ಲಿನ ವಿಶೇಷ ಮಕ್ಕಳ ಶಾಲೆಗೆ ಅಗತ್ಯವಿರುವ ಬೆಂಬಲ ನೀಡುವ ಸಲುವಾಗಿ ವಿಪ್ಲಾ ಫೌಂಡೇಶನ್‌ಗೆ (Vipla Foundation) ನಿಧಿ ಸಂಗ್ರಹಿಸಲು ಮುಂದಾಗಿದ್ದರು. ಈ ಬಗ್ಗೆ ರಾಹುಲ್​ ಮತ್ತು ಅಥಿಯಾ ಸಾಮಾಜಿಕ ಜಾಲತಾಣದಲ್ಲಿಯೂ ಘೋಷಣೆ ಮಾಡಿದ್ದರು.

ಕ್ರಿಕೆಟ್​ ಪರಿಕರಗಳನ್ನು ನೀಡುವ ಮೂಲಕ ಭಾರತ ತಂಡದ ವಿರಾಟ್​ ಕೊಹ್ಲಿ, ಎಂ.ಎಸ್​ ಧೋನಿ, ರೋಹಿತ್​ ಶರ್ಮ, ರಾಹುಲ್​ ದ್ರಾವಿಡ್​. ಆರ್​ ಅಶ್ವಿನ್​ ಸೇರಿ ಹಲವು ಮಾಜಿ ಆಟಗಾರರು ರಾಹುಲ್​ ಅವರ ಈ ಸಮಾಜಮುಖಿ ಕಾರ್ಯಕ್ಕೆ ಜೈಜೋಡಿಸಿದ್ದರು. ಇದೀಗ ರಾಹುಲ್​ ಈ ಪರಿಕರಗಳನ್ನು ಹರಾಜಿಗಿಟ್ಟು 1.96 ಕೋಟಿ ರೂ. ಸಂಗ್ರಹ ಮಾಡಿದ್ದಾರೆ. ಈ ಹಣವನ್ನು ಬಡ ಮಕ್ಕಳ ನೆರವಿಗೆ ನೀಡಿದ್ದಾರೆ. ರಾಹುಲ್​ ಹರಾಜಿಗಿಟ್ಟ ವಸ್ತುಗಳಲ್ಲಿ ಅತ್ಯಂತ ಹೆಚ್ಚಿನ ಮೊತ್ತಕ್ಕೆ ಸೇಲ್​ ಆದ ವಸ್ತು ಯಾವುದು? ಎಂಬ ಕುತೂಹಲ ಅಭಿಮಾನಿಗಳದ್ದು.

ಮೊನ್ನೆಯಷ್ಟೇ ಕೆಎಲ್ ರಾಹುಲ್ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ, ನಾನೊಂದು ಮಹತ್ವದ ಘೋಷಣೆ ಮಾಡಲಿದ್ದೇನೆ, ಕಾಯುತ್ತಿರಿ ಎಂದು ಎಲ್ಲರನ್ನೂ ಕುತೂಹಲಕ್ಕೆ ದೂಡಿದ್ದರು. ಅವರ ಈ ಪೋಸ್ಟ್ ನೋಡಿದ ಕೆಲವರು ಅವರು ನಿವೃತ್ತಿಯಾಗುತ್ತಿದ್ದಾರೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಅಂದು ರಾಹುಲ್​ ಪೋಸ್ಟ್ ಮಾಡಿದ್ದು ಹರಾಜಿನಲ್ಲಿ ಸಿಕ್ಕ ಮೊತ್ತವೆಷ್ಟು ಎಂದು ರಿವಿಲ್​ ಮಾಡುವುದಾಗಿತ್ತು.​

ರಾಹುಲ್ ಹರಾಜಿಗಿಟ್ಟ ಕ್ರಿಕೆಟ್ ಪರಿಕರಗಳಲ್ಲಿ ವಿರಾಟ್ ಕೊಹ್ಲಿ ಜೆರ್ಸಿ ಮತ್ತು ಗ್ಲೌಸ್, ರೋಹಿತ್ ಶರ್ಮಾ ಬ್ಯಾಟ್​, ಧೋನಿಯ ಬ್ಯಾಟ್, ದ್ರಾವಿಡ್ ಅವರ ಬ್ಯಾಟ್, ಆರ್​.ಅಶ್ವಿನ್​ ಜೆರ್ಸಿ ಸೇರಿ ಹಲವು ಕ್ರಿಕೆಟಿಗರ ಪರಿಕರಗಳು ಸೇರಿದ್ದವು. ಈ ಪೈಕಿ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದು ಕಿಂಗ್​ ಖ್ಯಾತಿಯ ವಿರಾಟ್ ಕೊಹ್ಲಿ ಅವರ ಜೆರ್ಸಿ ಮತ್ತು ಗ್ಲೌಸ್. ಕೊಹ್ಲಿಯ ಜೆರ್ಸಿ 40 ಲಕ್ಷ ರೂ.ಗಳಿಗೆ ಬಿಕರಿಯಾದರೆ, ಗ್ಲೌಸ್ 28 ಲಕ್ಷ ರೂ.ಗೆ ಮಾರಾಟವಾಗಿದೆ. ರಾಹುಲ್​ ಕೂಡ ತಮ್ಮ ಬ್ಯಾಟ್​, ಜೆರ್ಸಿ ಮತ್ತು ಕ್ಯಾಪ್​ ಹರಾಜಿಗಿಟ್ಟಿದ್ದರು.

ಇದನ್ನೂ ಓದಿ KL Rahul Retirement: ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ ಕೆ.ಎಲ್​ ರಾಹುಲ್?; ಇನ್​ಸ್ಟಾಗ್ರಾಮ್​ ಪೋಸ್ಟ್​ ವೈರಲ್​​

ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ಅವರ ಬ್ಯಾಟ್​ 24 ಲಕ್ಷ ರೂ., ಮಹೇಂದ್ರ ಸಿಂಗ್​ ಧೋನಿಯ ಬ್ಯಾಟ್ 13 ಲಕ್ಷ, ರಾಹುಲ್ ದ್ರಾವಿಡ್ ಅವರ ಬ್ಯಾಟ್ 11 ಲಕ್ಷ ರೂ.ಗೆ ಬಿಕರಿಯಾಗಿದೆ ಎಂದು ತಿಳಿದುಬಂದಿದೆ. ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಕೂಡ ಎನ್​ಜಿಒ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುವ ಕಾರ್ಯ ಮಾಡುತ್ತಿದ್ದಾರೆ. ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ‘ಸೇವಾ’ ಎಂಬ ಹೆಸರಿನ ಟ್ರಸ್ಟ್​ ಮೂಲಕ ಅದೆಷ್ಟೋ ಬಡ ಜನರಿಗೆ ಆರೋಗ್ಯ ಸಂಬಂಧಿಸಿ ಹಣಕಾಸಿನ ನೆರವು ಒದಗಿಸಿದ್ದಾರೆ.

Exit mobile version