ಬೆಂಗಳೂರು: ಭಾರತ ತಂಡದ ಹೆಡ್ ಕೋಚ್ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್(Rahul Dravid) ಅವರು ಏಕದಿನ ವಿಶ್ವ ಕಪ್(ICC World Cup) ಬಳಿಕ ಕೋಚಿಂಗ್ ಹುದ್ದೆಯಲ್ಲಿ ಮುಂದುವರಿಯುವುದು ಅನುಮಾನ ಎನ್ನಲಾಗಿದೆ. ವಿಶ್ವ ಕಪ್ ಬಳಿಕ ದ್ರಾವಿಡ್ ಅವರ ಗುತ್ತಿಗೆ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಇದಾದ ಬಳಿಕ ಅವರ ಗುತ್ತಿಗೆ ಅವಧಿ ಮುಂದುವರಿಸುವ ಸಾಧ‍್ಯತೆ ಕಡಿಮೆ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಕೋಚ್ ಆದಾಗ ಅವರ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚಿಂಗ್ ಅವಧಿಯಲ್ಲಿ ಕಂಡು ಬರಲಿಲ್ಲ. ಹೀಗಾಗಿ ಅವರ ಕೋಚಿಂಗ್ ಬಗ್ಗೆ ಹಲವು ಟೀಕೆಗಳು ಕೂಡ ವ್ಯಕ್ತವಾಗಿತ್ತು.
ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್-19 ಕ್ರಿಕೆಟ್ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್ ತಂಡದಲ್ಲಿ ಸಿಕ್ಕಿಲ್ಲ. ದ್ರಾವಿಡ್ ಮಾರ್ಗದರ್ಶನದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಾರತ ಟೆಸ್ಟ್ ಸರಣಿಯನ್ನು ಸೋತಿತ್ತು. ಇದಾದ ಬಳಿಕ ಏಷ್ಯಾಕಪ್ 2022, ಐಸಿಸಿ ಟಿ20 ವಿಶ್ವಕಪ್, ಕಳೆದ ವಾರ ಮುಕ್ತಾಯ ಕಂಡ ಐಸಿಸಿ ವಿಶ್ವಕಪ್ ಟೆಸ್ಟ್ ಪಂದ್ಯದಲ್ಲಿಯೂ ಕಪ್ ಗೆಲ್ಲಲು ತಂಡ ವಿಫಲವಾಗಿತ್ತು. ಹೀಗಾಗಿ ದ್ರಾವಿಡ್ ಅವರು ಏಕದಿನ ವಿಶ್ವ ಕಪ್ ಬಳಿಕ ಕೋಚಿಂಗ್ ಹುದ್ದೆಯಲ್ಲಿ ಮುಂದುವರಿಯುವುದು ಅನುಮಾನ.
ಇದನ್ನೂ ಓದಿ Team India : ಹೀಗಾದ್ರೆ ನಡೆಯಲ್ಲ; ದ್ರಾವಿಡ್ ಸೇರಿದಂತೆ ಕೋಚ್ಗಳಿಗೆ ಬಿಸಿಸಿಐ ವಾರ್ನಿಂಗ್!
ಅಕ್ಟೋಬರ್ನಲ್ಲಿ ಏಕದಿನ ವಿಶ್ವ ಕಪ್
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ ಮೊದಲ ವಾರದಿಂದಲೇ ಆರಂಭವಾಗುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಭಾರತ ಹಲವು ಏಕದಿನ ಸರಣಿಯನ್ನಾಡಲಿದೆ. ಈ ಮೂಲಕ ವಿಶ್ವ ಕಪ್ಗೆ ಬಲಿಷ್ಠವಾದ ತಂಡವನ್ನು ರಚಿಸುವ ಯೋಜನೆಯಲ್ಲಿದೆ. ಆದರೆ ಭಾರತ ಕಳೆದ 2013ರ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಕೊರಗನ್ನು ರೋಹಿತ್ ಪಡೆ ನೀಗಿಸಲಿದೆಯಾ ಎಂದು ಕಾದು ನೋಡಬೇಕಿದೆ. ಇದಕ್ಕೂ ಮುನ್ನ ಏಷ್ಯಾ ಕಪ್ನಲ್ಲಿ(asia cup 2023) ಭಾರತ ಉತ್ತಮ ಪ್ರದರ್ಶ ತೋರುವ ಮೂಲಕ ತನ್ನ ಸಾಮರ್ಥ್ಯ ತೋರಿಸಬೇಕಿದೆ.