ಬೆಂಗಳೂರು: ಅಫಘಾನಿಸ್ತಾನ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್(Rahul Dravid) ಇದೇ ವರ್ಷ ನಡೆಯುವ ಟಿ20 ವಿಶ್ವಕಪ್ ಟೂರ್ನಿಯ(icc t20 world cup) ಬಗ್ಗೆ ಬೇಸರ ವ್ಯಕ್ತಪಡಸಿದ್ದಾರೆ. ದುರಾದೃಷ್ಟವಶಾತ್ ನಮ್ಮ ತಮಡಕ್ಕೆ ಇನ್ನು ಯಾವುದೇ ಟಿ20 ಸರಣಿ ಇಲ್ಲ ಎಂದು ಹೇಳಿದ್ದಾರೆ.
“ಟಿ20 ವಿಶ್ವಕಪ್ಗೂ ಮುನ್ನ ನಮ್ಮ ತಂಡಕ್ಕೆ ಯಾವುದೇ ಸರಣಿಗಳಿಲ್ಲ,. ಹೀಗಾಗಿ ತಂಡದ ಸಂಯೋಜನೆಗೆ ಭಾರೀ ಹಿನ್ನಡೆಯಾಗಲಿದೆ. ತಂಡವಾಗಿ ಯಾವ ಆಟಗಾರ ಯಾವ ಸ್ಥಾನದಲ್ಲಿ ಆಡಬೇಕು ಎನ್ನುವುದನ್ನು ತಿಳಿಯಲು ನಮಗೆ ಅವಕಾಶವಿಲ್ಲ. ಐಪಿಎಲ್ ಪ್ರದರ್ಶನದ ಆಧಾರದಲ್ಲಿ ಆಟಗಾರರನ್ನು ಆಯ್ಕೆ ಮಾಡುವ ಸವಾಲು ನಮ್ಮ ಮುಂದಿದೆ” ಎಂದು ದ್ರಾವಿಡ್ ಹೇಳಿದರು.
“2021 ಟಿ20 ವಿಶ್ವಕಪ್ ನೆನಪಿರಬೇಕು. ಈ ವಿಶ್ವಕಪ್ನಲ್ಲಿ ಭಾರತ ತಂಡ ನಿರಾಸ ಪ್ರದರ್ಶನ ನೀಡಿತ್ತು. ಕೊರೊನಾದಿಂದಾಗಿ ಟಿ20 ಟೂರ್ನಿಗಳು ನಡೆಯದೇ ಇದ್ದ ಕಾರಣ ಐಪಿಎಲ್ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಸಮಿತಿ ತಂಡ ಪ್ರಕಟಿಸಿತ್ತು. ಇದೇ ಕಾರಣದಿಂದ ಭಾರತ ಲೀಗ್ನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಇಂತಹದ್ದೇ ಸಂಕಟ ಮತ್ತೆ ಎದುರಾಗಿದೆ” ಎಂದು ದ್ರಾವಿಡ್ ಹೇಳಿದ್ದಾರೆ.
ಇದನ್ನೂ ಓದಿ T20 World Cup : ಟಿ20 ವಿಶ್ವಕಪ್ ನಲ್ಲಿ ಭಾರತದ ವಿಕೆಟ್ ಕೀಪರ್ ಯಾರಾಗಬಹುದು?
ಟಿ20 ವಿಶ್ವಕಪ್ನಲ್ಲಿ ವಿಕೆಟ್ ಕೀಪಿಂಗ್ಗೆ ಭಾರತಕ್ಕೆ ಹಲವು ಆಯ್ಕೆಗಳಿವೆ. ತಂಡದಲ್ಲಿ ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರಂತಹ ಆಟಗಾರರಿದ್ದಾರೆ. ಆದರೆ ಮುಂದಿನ ಕೆಲವು ತಿಂಗಳುಗಳಲ್ಲಿ ಪರಿಸ್ಥಿತಿಗಳು ಏನಾಗುತ್ತವೆ ಎಂಬುದನ್ನು ಕಾದು ನೋಡ ನೋಡಬೇಕು. ಫಿಟ್ನೆಸ್ ಕೂಡ ಅತ್ಯಗತ್ಯ ಎಂದು ದ್ರಾವಿಡ್ ಹೇಳಿದರು.
ತಂಡ ಪ್ರಕಟಕ್ಕೆ ಗಡುವು ನೀಡಿದ ಐಸಿಸಿ
ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಆದರೆ, ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.
ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.