ಬಾರ್ಬಡೋಸ್: ಅಫಘಾನಿಸ್ತಾನ(IND vs AFG) ವಿರುದ್ಧ ಇಂದು ನಡೆಯುವ ಸೂಪರ್-8 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್(Rahul Dravid) ತಾಳ್ಮೆ ಕಳೆದುಕೊಂಡ ಘಟನೆ ನಡೆಯಿತು. ಪತ್ರಕರ್ತರೊಬ್ಬರ ಪ್ರಶ್ನೆಗೆ ತುಸು ಕೋಪದಿಂದಲೇ ಉತ್ತರಿಸಿದ್ದಾರೆ.
ಸಾದಾ ಶಾಂತ ಸ್ವಭಾವದಿಂದ ವರ್ತಿಸುವ ದ್ರಾವಿಡ್ ಅವರಿಗೆ ಪತ್ರಕರ್ತರೊಬ್ಬರು ಅಫಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ನಡೆಸಿದ ತಂಡದ ಸಿದ್ಧತೆಯ ಪ್ರಶ್ನೆಯನ್ನು ಕೇಳುವ ಬದಲು 27 ವರ್ಷಗಳ ಹಿಂದಿನ ಪಂದ್ಯವೊಂದರ ಬಗ್ಗೆ ಪ್ರಶ್ನೆ ಮಾಡಿ ದ್ರಾವಿಡ್ ಅವರನ್ನು ವ್ಯಂಗವಾಡಿದರು. ನೀವು ಆಟಗಾರರಾಗಿ ಇಲ್ಲಿ ಆಡಿದ್ದೀರಿ. 97 ನಿಮ್ಮ ಟೆಸ್ಟ್‌ನ ಅತ್ಯುತ್ತಮ ನೆನಪುಗಳು ಅಲ್ಲವೇ? ಎಂದು ಕೇಳಿದ್ದಾರೆ. ಇದಕ್ಕೆ ಖಾರವಾಗಿಯೇ ಉತ್ತರಿಸಿದ ದ್ರಾವಿಡ್, ಧನ್ಯವಾದಗಳು ಗೆಳೆಯ! ನಾನು ಇಲ್ಲಿ ಇದು ಮಾತ್ರವದಲ್ಲದೆ ಇತರ ಉತ್ತಮ ನೆನಪುಗಳನ್ನೂ ಕೂಡ ಹೊಂದಿದ್ದೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಪತ್ರಕರ್ತ ದ್ರಾವಿಡ್ ಬಳಿ ಈ ಪ್ರಶ್ನೆಯನ್ನು ಕೇಳಲು ಕೂಡ ಒಂದು ಕಾರಣವಿದೆ. ಅದೇನೆಂದರೆ, 1997ರಲ್ಲಿ ಟೆಸ್ಟ್ ಸರಣಿಯನ್ನಾಡಲು ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದ ವೇಳೆ ದ್ರಾವಿಡ್ ಕೂಡ ತಂಡದ ಭಾಗವಾಗಿದ್ದರು. ಬಾರ್ಬಡೋಸ್ನಲ್ಲಿ ನಡೆದಿದ್ದ ಟೆಸ್ಟ್ನಲ್ಲಿ ದ್ರಾವಿಡ್ 78 ರನ್ ಮತ್ತು 2 ರನ್ ಬಾರಿಸಿದ್ದರು. ಈ ಪಂದ್ಯವನ್ನು ಭಾರತ 38 ರನ್ ಅಂತರದಿಂದ ಸೋಲು ಕಂಡಿತ್ತು. ಇದೀಗ ಭಾರತ ಸೂಪರ್ 8 ಪಂದ್ಯವನ್ನು ಇದೇ ಮೈದಾನದಲ್ಲಿ ಆಡುತ್ತಿದೆ, ದ್ರಾವಿಡ್ ತಂಡದ ಕೋಚ್ ಆಗಿದ್ದಾರೆ, ಇದೇ ಕಾರಣಕ್ಕೆ ಈ ಪ್ರಶ್ನೆಯನ್ನು ಅವರಿಗೆ ಕೇಳಲಾಯಿತು. ಆದರೆ ಪತ್ರಕರ್ತ ಕೇಳಿದ ಪ್ರಶ್ನೆಯ ಧಾಟಿ ಮಾತ್ರ ಸರಿಯಿರಲಿಲ್ಲ. ಇದರಿಂದ ದ್ರಾವಿಡ್ ಕೋಪಗೊಂಡರು.
ಇದನ್ನೂ ಓದಿ IND vs AFG: ಇಂದು ಭಾರತ-ಆಫ್ಘಾನ್ ಸೂಪರ್-8 ಪಂದ್ಯ; ಹವಾಮಾನ ವರದಿ ಹೇಗಿದೆ?
ಕೋಪದಲ್ಲೇ ಉತ್ತರಿಸಿದ ದ್ರಾವಿಡ್, ಧನ್ಯವಾದಗಳು ಗೆಳೆಯ!.., ನಾನು ಯಾವುದೇ ವಿಷಯವನ್ನಾದರೂ ಬೇಗನೆ ಮರೆತುಬಿಡುತ್ತೇನೆ. ನಡೆದು ಹೋಗಿರುವ ಘಟನೆ ಬಗ್ಗೆ ಮತ್ತೆ ಮತ್ತೆ ಚಿಂತಿಸಿ ಪ್ರಯೋಜನವಿಲ್ಲ. ಇಂತಹ ಘಟನೆಯಿಂದ ನಾನು ಬೇಗನೇ ಹೊರಬರುತ್ತೇನೆ. ಅದು ನನ್ನ ವೈಶಿಷ್ಟ್ಯ. 1997ರಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ನಾನು ಈಗ ಚಿಂತೆ ಮಾಡುವುದಿಲ್ಲ” ಎಂದು ಹೇಳುವ ಮೂಲಕ ಕೊಂಕು ಪ್ರಶ್ನೆ ಮಾಡಿದ ಪತ್ರಕರ್ತನಿಗೆ ಸರಿಯಾಗಿತೇ ತಿರುಗೇಟು ನೀಡಿದ್ದಾರೆ.
ಅಫಘಾನಿಸ್ತಾನ ವಿರುದ್ಧ ಇಂದು(ಗುರುವಾರ) ನಡೆಯುವ ಟಿ20 ವಿಶ್ವಕಪ್(T20 World Cup 2024) ಸೂಪರ್-8 ಪಂದ್ಯದಲ್ಲಿ(IND vs AFG Super 8 match) ಭಾರತ(IND vs AFG) ತನ್ನ ಆಡುವ ಬಳಗದಲ್ಲಿ ಇಂದು ಬದಲಾವಣೆ ಮಾಡುವ ನಿರೀಕ್ಷೆ ಇದೆ. ವಿಂಡೀಸ್ ಸ್ಪಿನ್ ಸ್ನೇಹಿ ಮತ್ತು ನಿಧಾನ ಗತಿಯ ಪಿಚ್ ಆಗಿರುವ ಕಾರಣ ಭಾರತ ಹೆಚ್ಚುವರಿ ಸ್ಪಿನ್ನರ್ ಆಯ್ಕೆ ಮಾಡಿಕೊಳ್ಳಬಹುದು. ಶಿವಂ ದುಬೆ ಅವರನ್ನು ಕೈಬಿಟ್ಟು ಈ ಸ್ಥಾನದಲ್ಲಿ ಕುಲ್ದೀಪ್ ಯಾದವ್ ಅಥವಾ ಯಜುವೇಂದ್ರ ಚಹಲ್ ಅವರನ್ನು ಆಡಿಸಬಹುದು. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸುವುದು ಅನುಮಾನ. ರೋಹಿತ್ ಮತ್ತು ಕೊಹ್ಲಿಯೇ ಭಾರತದ ಇನಿಂಗ್ಸ್ ಆರಂಭಿಸಬಹುದು.