ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ 2-3 ಅಂತರದಿಂದ ಸೋತ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ವೆಸ್ಟ್ ಇಂಡೀಸ್ ಪ್ರವಾಸದ ಬಗ್ಗೆ ಪ್ರಾಮಾಣಿಕ ಮೌಲ್ಯಮಾಪನ ಮಾಡಿದ್ದಾರೆ. ಭಾನುವಾರ ನಡೆದ ಐದನೇ ಟಿ20 ಪಂದ್ಯದಲ್ಲಿ ಭಾರತವನ್ನು ಎಂಟು ವಿಕೆಟ್ ಗಳಿಂದ ಸೋಲಿಸುವ ಮೂಲಕ ವೆಸ್ಟ್ ಇಂಡೀಸ್ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿತು. ಈ ಬಗ್ಗೆ ದ್ರಾವಿಡ್ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಕೆರಿಬಿಯನ್ ನಾಡಲ್ಲಿ ನಡೆದ ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತ ಭಾರತ ಆರಂಭಿಕ ಹಿನ್ನಡೆ ಹೊಂದಿತ್ತು. ನಂತರದ ಎರಡು ಪಂದ್ಯಗಳನ್ನು ಗೆದ್ದುಕೊಂಡಿತು. ಅಂತೆಯೇ ಸೆಂಟ್ರಲ್ ಬ್ರೋವರ್ಡ್ ಕ್ರೀಡಾಂಗಣದಲ್ಲಿ ನಡೆದ ಐದನೇ ಟಿ 20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ 12 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಂಡಿತು.
ಪಂದ್ಯದ ಬಳಿಕ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾಧ್ಯಮಗಳಿಗೆ ಪ್ರವಾಸದಲ್ಲಿ ತಂಡದ ಪ್ರದರ್ಶನವನ್ನು ಮೌಲ್ಯಮಾಪನವನ್ನು ಮಾಡಿದಿರು. ಕೆಲವೊಮ್ಮೆ ನಾನಾ ಸ್ವರೂಪಗಳ ಆಟಕ್ಕೆ ಒಗ್ಗಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ ಎಂದು ಹೇಳಿದರು. ಟೆಸ್ಟ್ ಮತ್ತು ಏಕದಿನ ಸರಣಿಗಳು ನಮ್ಮ ನಿರೀಕ್ಷೆಗಳನ್ನು ಪೂರೈಸಿವೆ. ಆದರೆ, ಟಿ20 ಸರಣಿಯ 0-2 ಅಂತರದ ಆರಂಭಿಕ ಹಿನ್ನಡೆಯಿಂದ ಹೊರಬರಲು ನಾವು ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ದ್ರಾವಿಡ್ ಹೇಳಿದರು.
ಕೆಲವೊಂದು ತಪ್ಪುಗಳು
ರಾಹುಲ್ ದ್ರಾವಿಡ್ ಕೂಡ ತಮ್ಮ ತಂಡದ ತಪ್ಪುಗಳಿಂದಾಗಿ ಸರಣಿಯನ್ನು ಕಳೆದುಕೊಂಡಿವೆ ಎಂದು ಒಪ್ಪಿಕೊಳ್ಳಲು ಹಿಂಜರಿಯಲಿಲ್ಲ. ಮೊದಲ ಎರಡು ಪಂದ್ಯಗಳು ಮತ್ತು ಐದನೇ ಟಿ20 ಪಂದ್ಯಗಳಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆ. ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಆದರೆ ಇದು ಯುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ತಂಡ ಎಂಬುದನ್ನು ಹೇಳಬೇಕಾಗಿದೆ ಎಂದು ಅವರು ಹೇಳಿದರು.
ಈ ಸರಣಿಯಲ್ಲಿ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ನೀಡಿದ್ದೇವೆ. ನಾವು ಕೆಲವು ಸಂಯೋಜನೆಗಳನ್ನು ಸಹ ಪ್ರಯತ್ನಿಸಿದ್ದೇವೆ. ಈ ವಿಚಾರದಲ್ಲಿ ಕೆಲವು ಸಕಾರಾತ್ಮಕ ಅಂಶಗಳಿವೆ ಎಂದು ರಾಹುಲ್ ದ್ರಾವಿಡ್ ಹೇಳಿದರು. ಏಕದಿನ ವಿಶ್ವಕಪ್ ಸಮೀಪಿಸುತ್ತಿರುವ ಕಾರಣ ಮೆನ್ ಇನ್ ಬ್ಲ್ಯೂ ಸದಸ್ಯರು ಕಂಡುಕೊಳ್ಳಬೇಕಾದ ಸುಧಾರಣೆಯನ್ನು ಹೇಳಿಕೊಂಡರು.
ಇದನ್ನೂ ಓದಿ : NADA Test: ಐದು ತಿಂಗಳಲ್ಲಿ ಮೂರು ಬಾರಿ ಉದ್ದೀಪನ ಟೆಸ್ಟ್ಗೆ ಒಳಗಾದ ಟೀಮ್ ಇಂಡಿಯಾ ಆಟಗಾರ
“ಕೆರಿಬಿಯನ್ ನಾಡಲ್ಲಿ ನಾವು ತಂಡದಲ್ಲಿ ಬದಲಾವಣೆ ಮಾಡಲು ಹಾಗೂ ಸಂಯೋಜನೆ ರಚಿಸಲು ಅನುಕೂಲತೆಗಳು ಕಡಿಮೆ ಇದ್ದವು. ಭವಿಷ್ಯದಲ್ಲಿ ತಂಡವನ್ನು ಬಲಿಷ್ಠಗೊಳಿಸಲು ನಿರ್ದಿಷ್ಟ ವಿಭಾಗವನ್ನು ಬಲಿಷ್ಠಗೊಳೀಸಬೇಕಾಗುತ್ತದೆ. ಬ್ಯಾಟಿಂಗ್ನಲ್ಲಿ ನಾವು ಆಳವಾದ ಚಿಂತನೆ ಮಾಡಬೇಕಾಗಿದೆ. ಬೌಲಿಂಗ್ ದಾಳಿಯಲ್ಲೂ ಕೆಲವೊಂದು ದೌರ್ಬಲ್ಯಗಳು ಇದ್ದವು ಎಂಬುದಾಗಿ ದ್ರಾವಿಡ್ ಹೇಳಿದರು. ಈ ವೇಳೆ ಪದಾರ್ಪಣೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ದ್ರಾವಿಡ್ ಅಭಿನಂದನೆ ಸಲ್ಲಿಸಿದರು.
ನಾಲ್ಕನೇ ಪಂದ್ಯದಲ್ಲಿ ಜೈಸ್ವಾಲ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ತಿಲಕ್ ವರ್ಮಾ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶಿಸಿದ್ದಾರೆ. ಅವರಿಬ್ಬರು ಸೂಕ್ತ ಗುರಿಯೊಂದಿಗೆ ಆಡಿದ್ದಾರೆ. ಅಲ್ಲದೆ ಬೌಲಿಂಗ್ ಸಾಮರ್ಥ್ಯವನ್ನು ಸಹ ಪ್ರದರ್ಶಿಸಿದರು. ಎಲ್ಲಾ ಸ್ವರೂಪಗಳಲ್ಲಿ, ಮುಖೇಶ್ ಪಾದಾರ್ಪಣೆ ಮಾಡಿದರು. ಸ್ಲಾಗ್ ಓವರ್ಗಳಲ್ಲಿ ಅವರ ಬೌಲಿಂಗ್ ಸಾಮರ್ಥ್ಯವು ಪ್ರದರ್ಶನಗೊಂಡಿತು ಎಂದು ದ್ರಾವಿಡ್ ಹೇಳಿದ್ದಾರೆ.