Site icon Vistara News

Rahul Dravid: ಡ್ರಾವಿಡ್​ ಮಾರ್ಗದರ್ಶನದಲ್ಲಿ ಭಾರತ ವಿಶ್ವ ಕಪ್​ ಗೆಲ್ಲಲ್ಲ; ನೆಟ್ಟಿಗರ ಆಕ್ರೋಶ

Rahul Dravid: India won't win World Cup under Dravid's guidance; Outrage of netizens

Rahul Dravid: India won't win World Cup under Dravid's guidance; Outrage of netizens

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ತವರಿನಲ್ಲಿ ಸರಣಿ ಸೋಲು ಕಂಡ ಬೆನ್ನಲ್ಲೇ ಏಕದಿನ ವಿಶ್ವ ಕಪ್(icc odi world cup)​ ಟೂರ್ನಿಯಲ್ಲಿ ಭಾರತದ ಭವಿಷ್ಯವೇನು ಎಂಬ ಚರ್ಚೆ ಆರಂಭವಾಗಿದೆ. ಇದೇ ವಿಚಾರವಾಗಿ ರಾಹುಲ್ ದ್ರಾವಿಡ್‌(Rahul Dravid) ಅವರ ಕೋಚಿಂಗ್ ಶೈಲಿಯ ಬಗ್ಗೆ ನೆಟ್ಟಿಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಭಾರತದ ಪ್ರದರ್ಶನವನ್ನು ಗಮನಿಸುವಾಗ ಈ ಬಾರಿ ತವರಿನಲ್ಲಿಯೇ ವಿಶ್ವ ಕಪ್​ ಟೂರ್ನಿ ನಡೆದರೂ ಟೀಮ್​ ಇಂಡಿಯಾ ವಿಶ್ವ ಕಪ್​ ಗೆಲ್ಲುವುದು ಅನುಮಾನ ಎಂದು ನೆಟ್ಟಿಗರು ಭವಿಷ್ಯ ನುಡಿಯಲು ಆರಂಭಿಸಿದ್ದಾರೆ.

“ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್​-19 ಕ್ರಿಕೆಟ್​ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್‌ ತಂಡದಲ್ಲಿ ಸಿಕ್ಕಿಲ್ಲ. ದ್ರಾವಿಡ್ ಮಾರ್ಗದರ್ಶನದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಾರತ ಟೆಸ್ಟ್ ಸರಣಿಯನ್ನು ಸೋತಿತ್ತು. ಇದಾದ ಬಳಿಕ ಏಷ್ಯಾಕಪ್ 2022 ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಕಪ್ ಗೆಲ್ಲಲು ತಂಡ ವಿಫಲವಾಗಿತ್ತು. ಹೀಗಾಗಿ ದ್ರಾವಿಡ್​ ಅವರ ಮಾರ್ಗದರ್ಶನದಲ್ಲಿ ಶೇ.200 ಪ್ರತಿಶತ ಭಾರತ ತಂಡ ವಿಶ್ವ ಕಪ್ ಗೆಲ್ಲುವುದಿಲ್ಲ” ಎಂದು ನೆಟ್ಟಿಗರು ಟ್ವೀಟ್​ ಮೂಲಕ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ Team India : ಹಿರಿಯ ಸ್ಪಿನ್ನರ್​ ಸೇವೆ ನಿರಾಕರಿಸಿದ ರಾಹುಲ್​ ದ್ರಾವಿಡ್​, ಪರಿಣಾಮ ಏನಾಯಿತು?

‘ರಾಹುಲ್ ಡ್ರಾವಿಡ್​ ಓರ್ವ ಕಳಪೆ ನಾಯಕ ಮತ್ತು ಕೆಟ್ಟ ಕೋಚ್ ಎಂದು ನೆಟ್ಟಗರೊಬ್ಬರು ಟ್ವೀಟ್​ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹೀಗೆ ಹಲವು ನೆಟ್ಟಿಗರು ದ್ರಾವಿಡ್​ ಮಾರ್ಗದರ್ಶನದ ಬಗ್ಗೆ ಕಿಡಿಕಾರಿದ್ದಾರೆ.

ಅಕ್ಟೋಬರ್​ನಲ್ಲಿ ಏಕದಿನ ವಿಶ್ವ ಕಪ್​ ಆರಂಭ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ ಮೊದಲ ವಾರದಿಂದಲೇ ಆರಂಭವಾಗುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಭಾರತ ಹಲವು ಏಕದಿನ ಸರಣಿಯನ್ನಾಡಲಿದೆ. ಈ ಮೂಲಕ ವಿಶ್ವ ಕಪ್​ಗೆ ಬಲಿಷ್ಠವಾದ ತಂಡವನ್ನು ರಚಿಸುವ ಯೋಜನೆಯಲ್ಲಿದೆ. ಆದರೆ ಭಾರತ ಕಳೆದ 2013ರ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಕೊರಗನ್ನು ರೋಹಿತ್​ ಪಡೆ ಏಕದಿನ ವಿಶ್ವ ಕಪ್​ ಗೆಲ್ಲುವ ಮೂಲಕ ಹೋಗಲಾಡಿಸಲಿದೆಯಾ ಎಂದು ಕಾದು ನೋಡಬೇಕಿದೆ.

Exit mobile version