ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ (WTC Final 2023) ಫೈನಲ್ ಪಂದ್ಯದಲ್ಲಿ ಭಾರತ ತಂಡ ಹಿನ್ನಡೆಯಲ್ಲಿದೆ. ಬ್ಯಾಟಿಂಗ್ನಲ್ಲಿ ಟೀಮ್ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಟೀಮ್ ಇಂಡಿಯಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಮೊದಲ ಇನಿಂಗ್ಸ್ನ ಬೌಲಿಂಗ್ ಕಳಪೆಯಾಗಿತ್ತು. ಬ್ಯಾಟಿಂಗ್ನಲ್ಲೂ ಅಗ್ರಮ ಕ್ರಮಾಂಕ ಮತ್ತೊಮ್ಮೆ ವಿಫಲವಾಯಿತು ಎಂದು ಹೇಳಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ ಭಾರತ ತಂಡದ ಪರವಾಗಿ ಅಜಿಂಕ್ಯ ರಹಾನೆ ಮತ್ತು ರವೀಂದ್ರ ಜಡೇಜಾ ಅವರನ್ನು ಹೊರತುಪಡಿಸಿ, ಇತರ ಎಲ್ಲಾ ಭಾರತೀಯ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈ ವಿಚಾರದ ಬಗ್ಗೆ ಮಾತನಾಡಿದ ಬಾಸಿತ್ ಅಲಿ, ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡುವ ತೀರ್ಮಾನ ಕೈಗೊಂಡ ರೋಹಿತ್ ಶರ್ಮಾ ಅವರ ನಿರ್ಧಾರವನ್ನು ಟೀಕಿಸಿದರು. ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಭಾರತ ಸೋಲಲಿದೆ, ಗೆಲ್ಲಬೇಕಾದರೆ ಪವಾಡ ನಡೆಯಬೇಕು ಎಂದು ಹೇಳಿದ್ದಾರೆ.
ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿದ ಕ್ಷಣವೇ ಪಂದ್ಯವನ್ನು ಕಳೆದುಕೊಂಡಿತು. ಭಾರತ ತಂಡ ಬೌಲಿಂಗ್ ಐಪಿಎಲ್ನಂತೆಯೇ ಇತ್ತು. ಊಟದ ಹೊತ್ತಿಗೆ, ಭಾರತೀಯ ಬೌಲರ್ಗಳು ಯಶಸ್ಸು ಸಾಧಿಸಿತು. ಬ್ಯಾಟಿಂಗ್ ವೇಳೆಯೂ ಭಾರತ ತಂಡದ ಆಟಗಾರರು ಫೀಟ್ ಆಗಿದ್ದ ಲಕ್ಷಣಗಳು ತೋರಲಿಲ್ಲ. ರಹಾನೆ, ವಿರಾಟ್. ಜಡೇಜಾ ಬಿಟ್ಟರೆ ಉಳಿದವರೆಲ್ಲರೂ ದಣಿದಿದ್ದರು. ಅಲ್ಲರೂ ಐಪಿಎಲ್ ಎಫೆಕ್ಟ್ ಎಂದು ಮಾಜಿ ಬ್ಯಾಟರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ದ್ರಾವಿಡ್ ಬಗ್ಗೆ ಟೀಕೆ
ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನೂ ಬಿಡದೆ ಪಾಕ್ನ ಮಾಜಿ ಆಟಗಾರ ಟೀಕೆ ವ್ಯಕ್ತಪಡಿಸಿದರು. ಅದರಲ್ಲೂ ದ್ರಾವಿಡ್ ಬಗ್ಗೆ ಕನಿಕರವೂ ತೋರದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ದ್ರಾವಿಡ್ ಅವರು ತರಬೇತುದಾರರಾಗಿ ಅತ್ಯಂತ ಕಳಪೆ ಎಂಬುದಾಗಿ ಅವರು ಹೇಳಿದರು. ಇತ್ತೀಚೆಗೆ ತವರಿನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಯಾವ ರೀತಿಯ ಪಿಚ್ ನಿರ್ಮಿಸಿತ್ತು ಎಂಬುದು ಕೂಡ ಇಲ್ಲಿ ಉಲ್ಲೇಖನೀಯ ಎಂಬುದಾಗಿ ಅವರು ಹೇಳಿದರು.
ಇದನ್ನೂ ಓದಿ : WTC Final 2023: ದ್ರಾವಿಡ್ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ಪೂಜಾರ; ಏನದು?
ನಾನು ರಾಹುಲ್ ದ್ರಾವಿಡ್ ಅವರ ದೊಡ್ಡ ಅಭಿಮಾನಿ, ನಾನು ಯಾವಾಗಲೂ ಈ ವಿಚಾರದಲ್ಲಿ ಬದ್ಧನಾಗಿದ್ದೇನೆ. ಅವರು ಕ್ಲಾಸ್ ಆಟಗಾರ ಹಾಗೂ ದಿಗ್ಗಜ ಬ್ಯಾಟರ್ . ಆದರೆ ತರಬೇತುದಾರನಾಗಿ ಅವರಿಗೆ ನಾನು ಸಂಪೂರ್ಣವಾಗಿ ಶೂನ್ಯ ರೇಟಿಂಗ್ ನೀಡುವೆ. ನೀವು ಭಾರತದಲ್ಲಿ ತಿರುಗುವ ಪಿಚ್ಗಳನ್ನು ಸಿದ್ಧಪಡಿಸಿದ್ದೀರಿ. ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ, ಇದೇ ರೀತಿಯ ವಿಕೆಟ್ಗಳು ಇದ್ದವೆ.? ಅವರು ಬೌನ್ಸಿ ಪಿಚ್ಗಳನ್ನು ಹೊಂದಿದ್ದರು. ದ್ರಾವಿಡ್ ಅವರು ತಮ್ಮ ಮೆದುಳನ್ನು ಬಳಸದೇ ತಂಡವನ್ನು ಕಟ್ಟುತ್ತಿದ್ದಾರೆ . ಅದರು ಪರಿಣಾಮಕಾರಿಯಾಗಿ ಕೆಲಸ ಮಾಡದು ಎಂಬುದಾಗಿ ಅವರು ಹೇಳಿದ್ದಾರೆ.