Site icon Vistara News

World Cup 2023 : ಏಕ ದಿನ ವಿಶ್ವ ಕಪ್​ ಯೋಜನೆ ಬಹಿರಂಗಪಡಿಸಿದ ರಾಹುಲ್​ ದ್ರಾವಿಡ್​

Rahul Dravid revealed the plan for ODI World Cup

IND VS AUS: All pitches are challenging for players; Rahul Dravid

ಮುಂಬಯಿ: ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಕೊನೇ ಪಂದ್ಯ ಬುಧವಾರ ನಡೆಯಲಿದೆ. ಸರಣಿಯಲ್ಲಿ ಈಗ ಇತ್ತಂಡಗಳು ಒಂದೊಂದು ಜಯ ದಾಖಲಿಸಿರುವ ಕಾರಣ ಕೊನೇ ಪಂದ್ಯ ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಕೋಚ್​ ರಾಹುಲ್​ ದ್ರಾವಿಡ್​ ಭಾರತ ತಂಡದ ವಿಶ್ವ ಕಪ್ (World Cup 2023 )​ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಅದೇ ರೀತಿ ಅವರ ತಂಡದ ಪ್ರಮುಖ ಆಟಗಾರರ ಸಾಮರ್ಥ್ಯವನ್ನೂ ವಿಶ್ಲೇಷಣೆ ಮಾಡಿದ್ದಾರೆ.

ನಾಳೆ ಏನು ನಡೆಯುತ್ತದೆ ಎಂಬುದ ಬಗ್ಗೆ ಗೊತ್ತಿಲ್ಲದ ಹೊರತಾಗಿಯೂ ಕಳೆ ಒಂಬತ್ತು ಪಂದ್ಯಗಳಿಂದ ನಮಗೆ ಕೆಲವೊಂದು ಸಂಗತಿಗಳು ಅರ್ಥವಾಗಿವೆ. ತಂಡದ ರಚನೆಯ ಬಗ್ಗೆ ಸ್ಪಷ್ಟತೆ ಸಿಕ್ಕಿದೆ ಎಂದು ದ್ರಾವಿಡ್​ ವರದಿಗಾರರಿಗೆ ತಿಳಿಸಿದ್ದಾರೆ.

ನಾವು ಬೇರೆ ಬೇರೆ ಪ್ಲೇಯಿಂಗ್​ ಇಲೆವೆನ್​ ಸಂಯೋಜಿಸುತ್ತಿದ್ದೇವೆ. ವಿಭಿನ್ನ ಪರಿಸ್ಥಿತಿಗೆ ಪೂರಕವಾಗಿ ತಂಡವನ್ನು ಸಂಯೋಜಿಸುವುದನ್ನು ತಿಳಿದುಕೊಂಡಿದ್ದೇವೆ. ಹೀಗಾಗಿ ವಿಶ್ವ ಕಪ್​ನಲ್ಲಿ ಅಚ್ಚರಿ ಮೂಡಿಸುವಂಥ ಯಾವುದೇ ಬೆಳವಣಿಗೆಗಳು ಇರುವುದಿಲ್ಲ. ಬದಲಾಗಿ ಸೂಕ್ತ ಸಂದರ್ಭದಲ್ಲಿ ಆಡಲಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ದ್ರಾವಿಡ್​ ಗಾಯದ ಸಮಸ್ಯೆಗೆ ಒಳಗಾಗಿರುವ ಶ್ರೇಯಸ್​ ಅಯ್ಯರ್​ ಕುರಿತೂ ಮಾತನಾಡಿದರು. ಅವರು ನಮಗೆ ನಾಲ್ಕನೇ ಕ್ರಮಾಂಕದಲ್ಲಿ ಉತ್ತಮ ಅಟಗಾರ ಎನಿಸಿಕೊಂಡಿದ್ದಾರೆ. ಆದರೆ, ದುರದೃಷ್ಟವಶಾತ್​ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಹೇಳಿದರು.

ಸೂರ್ಯ ಬೆಳಗಲು ಕಾಯಿರಿ

ಏಕ ದಿನ ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ ಯಶಸ್ಸು ಸಾಧಿಸದ ಹಿನ್ನೆಲೆಯನ್ನೂ ದ್ರಾವಿಡ್​ ವಿಶ್ಲೇಷಿಸಿದರು. ಸೂರ್ಯಕುಮಾರ್​ ಕಳೆದ 10 ವರ್ಷಗಳಿಂದ ಟಿ20 ಮಾದರಿಯಲ್ಲಿ ಆಡಿದ್ದಾರೆ. ಅವರಿಗೆ ಆ ಮಾದರಿಯಲ್ಲಿ ಉತ್ತಮ ಅನುಭವವಿದೆ. ಆದರೆ, ಏಕ ದಿನ ಕ್ರಿಕೆಟ್​ ವಿಭಿನ್ನವಾಗಿದೆ. ಹೀಗಾಗಿ ಅವರಿಗೆ ಈ ಮಾದರಿಯಲ್ಲಿ ಹೆಚ್ಚು ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಭವಿಷ್ಯದಲ್ಲಿ ಉತ್ತಮ ಆಟವಾಡುವ ಸಾಧ್ಯತೆಗಳಿವೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಲವೊಬ್ಬರು ಆಟಗಾರರು ಗಾಯಗೊಂಡಿದ್ದಾರೆ. ಗಾಯದ ಸಮಸ್ಯೆಯಿಂದ ಸುಧಾರಿಸಿಕೊಂಡ ಬಳಿಕ ಅವರು ತಂಡಕ್ಕೆ ವಾಪಸಾಗಲಿದ್ದಾರೆ. ಹೀಗಾಗಿ ಅವರ ಲಭ್ಯತೆಯೇ ಮೇಲೆ ತಂಡವನ್ನು ರಚಿಸಲಿದ್ದೇವೆ. ಜತೆಗೆ ನಮ್ಮ ಒಟ್ಟು ಸಾಮರ್ಥ್ಯವನ್ನು 17ರಿಂದ 18 ಆಟಗಾರರಿಗೆ ಕೊನೆಗೊಳಿಸಲಿದ್ದೇವೆ ಎಂದು ದ್ರಾವಿಡ್​ ಹೇಳಿದ್ದಾರೆ.

Exit mobile version