ಮುಂಬೈ: ಬ್ಯಾಟಿಂಗ್ ದಂತಕತೆ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅಂಡರ್-19 ಕೂಚ್ ಬೆಹಾರ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಬೌಲಿಂಗ್ ಮಾಡಿರುವ ವಿಡಿಯೊ ವೈರಲ್ ಆಗಿದೆ. ಕರ್ನಾಟಕ ಅಂಡರ್-19 ತಂಡದ ಪರ ಆಡುತ್ತಿರುವ ಆಲ್ರೌಂಡರ್ ಫೈನಲ್ ಪಂದ್ಯದಲ್ಲಿ ತಮ್ಮ ಮಧ್ಯಮ ವೇಗದ ಬೌಲಿಂಗ್ ಮಾಡಿದ್ದಾರೆ. ಸಮಿತ್ ಬೌಲಿಂಗ್ ಮಾಡುವ ವಿಡಿಯೊವನ್ನು ಜಿಯೋ ಸಿನೆಮಾ ಹಂಚಿಕೊಂಡಿದೆ. ಆ ಕ್ಲಿಪ್ ವೈರಲ್ ಆಗಿದ್ದು, ಯುವ ಸಮಿತ್ ಅವರ ಅದ್ಭುತ ರನ್ ಅಪ್ ಮತ್ತು ಬ್ಯಾಟರ್ ಕಡೆಗೆ ಅವರ ಎಸೆತ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.
ವಿಡಿಯೊದಲ್ಲಿ ನೇರವಾಗಿ ಓಡಿದ ಜೂನಿಯರ್ ದ್ರಾವಿಡ್ ತಮ್ಮ ತಮ್ಮ ತೋಳಿನಿಂದ ಗರಿಷ್ಠ ವೇಗವನ್ನು ಪಡೆಯಲು ದೇಹವನ್ನು ಹೊಂದಿಸಿಕೊಂಡಿದ್ದಾರೆ. ಮುಂಬೈ ಅಂಡರ್ -19 ಬಲಗೈ ಬ್ಯಾಟರ್ ನೂತನ್ ವಿರುದ್ಧ ಮೊನಚಾದ ದಾಳಿಯನ್ನು ನಡೆಸಿದ್ದಾರೆ. ನೂತನ್ ವಿರುದ್ಧ ಬೌಲಿಂಗ್ ಮಾಡಲು ದೀರ್ಘ ರನ್ ಅಪ್ ಮೂಲಕ ಬಂದ ಸಮಿತ್ ಉತ್ತಮ ಲೆಂತ್ ಎಸೆತ ಮಾಡಿದ್ದಾರೆ.
Rahul Dravid’s Son Samit Dravid (Karnataka) bowling action – 2023/24 U19 Cooch Behar Trophy Final against Mumbai.
— Cricket Videos (@cricketvid123) January 12, 2024
📹: Jio Cinema/BCCI pic.twitter.com/AbaUt2pU7N
ವಿಡಿಯೊ ಕ್ಲಿಪ್ನಲ್ಲಿ ಹೆಚ್ಚಿನ ಮಾಹಿತಿ ಇರಲಿಲ್ಲ. ಆದಾಗ್ಯೂ, ಬಿಸಿಸಿಐ ವೆಬ್ಸೈಟ್ನಲ್ಲಿ ಲಭ್ಯವಿರುವ ಸ್ಕೋರ್ಡ್ಕಾರ್ಡ್ನೋಡಿದಾಗ ದ್ರಾವಿಡ್ ಜೂನಿಯರ್ ತಮ್ಮ ಮೊದಲ 10 ಓವರ್ಗಳಲ್ಲಿ ವಿಕೆಟ್ ಪಡೆಯದೇ 41 ರನ್ ನೀಡಿದ್ದರು. ಹಿರಿಯ ದ್ರಾವಿಡ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಾಲಿ ಮುಖ್ಯ ತರಬೇತುದಾರರಾಗಿ ತಮ್ಮ ಸಾಧನೆಗಳ ಮೂಲಕ ಬೆಳಕಿಗೆ ಬರುತ್ತಲೇ ಇದ್ದರೂ, ಮಾಧ್ಯಮಗಳು ಮತ್ತು ಅಭಿಮಾನಿಗಳು ಸಮಿತ್ ಅವರ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಕರ್ನಾಟಕದ ಜೂನಿಯರ್ ದೇಶೀಯ ವ್ಯವಸ್ಥೆಯಲ್ಲಿ ಕ್ರಿಕೆಟಿಗರಾಗಿ ಸಾಕಷ್ಟು ವೇಗವಾಗಿ ಬೆಳೆಯುತ್ತಿದ್ದಾರೆ.
ಇದನ್ನೂ ಓದಿ : Shaheen Afridi : ನಾಯಕನಿಗೇ ಆಘಾತ; ಒಂದೇ ಓವರ್ಗೆ 24 ರನ್ ಚಚ್ಚಿಸಿಕೊಂಡ ಅಫ್ರಿದಿ
ಕೂಚ್ ಬೆಹಾರ್ ಟ್ರೋಫಿಯ ಫೈನಲ್ ಅವರಿಗೆ ಮಿಂಚಲು ಮತ್ತು ಕಿರಿಯ ಆಯ್ಕೆದಾರರನ್ನು ಮೆಚ್ಚಿಸಲು ಸೂಕ್ತ ಅವಕಾಶವಾಗಿದೆ. ಸಮಿತ್ ಭಾರತದ ಅಂಡರ್ -19 ತಾರೆಗಳಲ್ಲಿ ಅತ್ಯಂತ ಜನಪ್ರಿಯ ಮುಖಗಳಲ್ಲಿ ಒಬ್ಬರು. ಯುವ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ.
ದ್ರಾವಿಡ್ ಅವರು ತಮ್ಮ ಪುತ್ರ ಪ್ರಯಾಣದಲ್ಲಿ ಯಾವುದೇ ಶಾರ್ಟ್ ಕಟ್ ಗಳನ್ನು ಪಡೆದುಕೊಳ್ಳದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಸಾಕಷ್ಟು ಮಾರ್ಗದರ್ಶನದೊಂದಿಗೆ ಪುತ್ರನ ಪ್ರತಿಭೆಯನ್ನು ಅನಾವರಣಗೊಳಿಸಲು ಮುಂದಾಗಿದ್ದಾರೆ.