Site icon Vistara News

Rahul Gandhi: ಕ್ರಿಕೆಟ್​ vs ಫುಟ್ಬಾಲ್​; ರಾಹುಲ್ ಗಾಂಧಿಗೆ ಯಾವುದು ಅಚ್ಚುಮೆಚ್ಚು

Rahul Gandhi

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಮೆಸ್ಸಿ(Lionel Messi) ಮತ್ತು ರೊನಾಲ್ಡೊ(Cristiano Ronaldo) ನಡುವೆ ಯಾರು ಶ್ರೇಷ್ಠರು ಎಂಬ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ್ದಾರೆ. ಜತೆಗೆ ಕ್ರಿಕೆಟ್​ ಬಗೆಗಿನ ಪ್ರಶ್ನೆಗೂ ಇದೇ ಜಾಣ್ಮೆಯನ್ನು ಬಳಸಿದ್ದಾರೆ.

ರಸಪ್ರಶ್ನೆಯ ಮಾಧ್ಯಮ ಸಮಾವೇಶದಲ್ಲಿ ಪಾಲ್ಗೊಂಡ ರಾಹುಲ್​ ಗಾಂಧಿ “ನಾನು ಫುಟ್ಬಾಲ್ ತಂಡವನ್ನು ನಡೆಸುತ್ತಿದ್ದರೆ ಮತ್ತು ನಾನು ಯಾರಿಗೆ ಆದ್ಯತೆ ನೀಡುತ್ತೇನೆ ಎಂದು ನನ್ನನ್ನು ಕೇಳಿದರೆ, ನಾನು ಬಹುಶಃ ಮೆಸ್ಸಿಗೆ ಆದ್ಯತೆ ನೀಡುತ್ತೇನೆ. ಆದರೆ ಓರ್ವ ವ್ಯಕ್ತಿಯ ಆಯ್ಕೆಯಾದರೆ ನಾನು ರೊನಾಲ್ಡೊ ಅವರನ್ನು ಆಯ್ಕೆ ಮಾಡುತ್ತೇನೆ” ಎಂದು ಹೇಳಿದರು.

ಕ್ರಿಕೆಟ್​ ವಿಚಾರದಲ್ಲಿ ಎದುರಾದ ಪ್ರಶ್ನೆಯಲ್ಲಿ ರಾಹುಲ್​ ಗಾಂಧಿ ಅವರು ತಾನು ಕ್ರಿಕೆಟ್‌ಗಿಂತ ಫುಟ್‌ಬಾಲ್‌ಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಏಕೆಂದರೆ ನಾನು ಕ್ರಿಕೆಟ್​ ಅಭಿಮಾನಿಯಲ್ಲ ಹೀಗಾಗಿ ಇದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು. ಇದೇ ಕಾರಣಕ್ಕೆ ಅವರು ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮಾ(Rohit Sharma) ನಡುವೆ ಯಾರು ಶ್ರೇಷ್ಠರು ಎಂಬ ಪ್ರಶ್ನಗೆ ಉತ್ತರಿಸದೆ ಈ ಪ್ರಶ್ನೆಯನ್ನು ತಳ್ಳಿ ಹಾಕಿದರು. ಜತೆಗೆ ಭಾರತ ಮತ್ತು ಇಂಡಿಯಾ ಹೆಸರಿನ ಬ್ಗ್ಎಯೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಜೀವನ ಶೈಲಿಯ ಬಗ್ಗೆ ಮಾತನಾಡಿದ ಅವರು, ನಾನು ನನ್ನ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಉದಾಹರಣೆಗೆ ನಾನು ಗಡ್ಡ ಇದ್ದರೂ ಇಲ್ಲದಿದ್ದರೂ ಚಿಂತಿಸುವುದಿಲ್ಲ ಎಂದರು.

ಇದನ್ನೂ ಓದಿ Book release: ನೋವಿನ ನಡುವೆಯೂ ಪ್ರೀತಿ ಹಂಚಿದ ರಾಹುಲ್‌ ಗಾಂಧಿ: ಜಿ.ಎನ್‌ ದೇವಿ; ಸುಗತ ಶ್ರೀನಿವಾಸರಾಜು ಕೃತಿ ʼಸ್ಟ್ರೇಂಜ್‌ ಬರ್ಡನ್ಸ್‌ʼ ಬಿಡುಗಡೆ

ಟ್ರೋಲ್​ಗೆ ಒಳಗಾಗಿದ್ದ ರಾಹುಲ್​

ಕೆಲ ದಿನಗಳ ಹಿಂದೆ ದೆಹಲಿಯ ಆನಂದ್‌ ವಿಹಾರ ರೈಲು ನಿಲ್ದಾಣಕ್ಕೆ ತೆರಳಿದ್ದ ರಾಹುಲ್‌ ಗಾಂಧಿ, ಬ್ಯಾಗ್‌ ಸೇರಿ ಹಲವು ಲಗೇಜ್‌ ಹೊರುವವರ (ಕೂಲಿಗಳು) ಜತೆ ಮಾತುಕತೆ ನಡೆಸಿದ್ದಾರೆ. ಆದರೆ, ಇದೇ ವೇಳೆ ರಾಹುಲ್‌ ಗಾಂಧಿ ಅವರು ಕೂಲಿಯವರ ಡ್ರೆಸ್‌, ಬ್ಯಾಡ್ಜ್‌ ಹಾಕಿಕೊಂಡು ವ್ಹೀಲ್‌ ಇರುವ ಟ್ರಾಲಿ ಬ್ಯಾಗ್‌ ಹೊತ್ತುಕೊಂಡು ತಿರುಗಾಡಿರುವ ವಿಡಿಯೊ (Viral Video) ವೈರಲ್‌ ಆಗಿತ್ತು.

ರಾಹುಲ್‌ ಗಾಂಧಿ ಅವರು ವ್ಹೀಲ್‌ ಇರುವ ಬ್ಯಾಗ್‌ ತಲೆಮೇಲೆ ಹೊತ್ತುಕೊಂಡು ತಿರುಗಾಡಿರುವುದು ಭಾರಿ ಟ್ರೋಲ್‌ ಆಗಿತ್ತು. ಬಿಜೆಪಿಯವರು ಕೂಡ ರಾಹುಲ್‌ ಗಾಂಧಿ ಅವರನ್ನು ಛೇಡಿಸಿದ್ದರು. ಜಗತ್ತಿನಲ್ಲಿ ವ್ಹೀಲ್‌ ಇರುವ ಬ್ಯಾಗ್‌ಅನ್ನು ಹೊರುವವರು ರಾಹುಲ್‌ ಗಾಂಧಿ ಮಾತ್ರ ಎಂದು ವ್ಯಂಗ್ಯ ಮಾಡಿದ್ದರು. ಆದರೆ, ಕೂಲಿಗಳಿಗೆ ಬೆಂಬಲ ಸೂಚಿಸುವ ದಿಸೆಯಲ್ಲಿ ರಾಹುಲ್‌ ಗಾಂಧಿ ಅವರು ಅವರ ಡ್ರೆಸ್‌ ಹಾಗೂ ಬ್ಯಾಡ್ಜ್‌ ಧರಿಸಿ, ಬ್ಯಾಗ್‌ ಹೊತ್ತು ತಿರುಗಾಡಿದ್ದರು. ಭಾರತ್‌ ಜೋಡೋ ಯಾತ್ರೆ (Bharat Jodo Yatra) ವೇಳೆ ಜನ ಹೆಚ್ಚು ಪ್ರೀತಿ ತೋರಿಸಿದ ಬಳಿಕ ಹೆಚ್ಚು ಹೆಚ್ಚು ಜನರ ಜತೆ ಬೆರೆಯುತ್ತಿದ್ದಾರೆ. ರೈತರ ಜತೆಗೂಡಿ ಭತ್ತ ನಾಟಿ ಮಾಡುವುದು, ಬೈಕ್‌ ರಿಪೇರಿ ಅಂಗಡಿಗಳಿಗೆ ತೆರಳುವುದು ಸೇರಿ ಹಲವು ರೀತಿಯಲ್ಲಿ ಜನರ ಜತೆ ಕಾಲ ಕಳೆಯಲು ಇಷ್ಟಪಡುತ್ತಿದ್ದಾರೆ.

Exit mobile version