Site icon Vistara News

Ashes 2023 : ಇಂಗ್ಲೆಂಡ್​ ತಂಡದ ಗೆಲುವಿಗೆ ಮಳೆಯ ಅಡ್ಡಿ; ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯ

Ashes

ಮ್ಯಾಂಚೆಸ್ಟರ್​​: ಆ್ಯಶಸ್​ ಸರಣಿಯ ನಾಲ್ಕನೇ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಪಂದ್ಯದ ಕೊನೇ ದಿನ ಸತತವಾಗಿ ಮಳೆ ಸುರಿದ ಕಾರಣ ಪಂದ್ಯವನ್ನು ಡ್ರಾಗೊಳಿಸಲು ತೀರ್ಮಾನಿಸಲಾಯಿತು. ಪಂದ್ಯದಲ್ಲಿ ಭರ್ಜರಿ ಮುನ್ನಡೆ ಹೊಂದಿದ್ದ ಆತಿಥೇಯ ಇಂಗ್ಲೆಂಡ್​ ತಂಡಕ್ಕೆ ಈ ಸೋಲಿನಿಂದ ನಿರಾಸೆ ಉಂಟಾಯಿತು. ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸುವ ಅವಕಾಶ ನಷ್ಟವಾದ ಕಾರಣ ಇಂಗ್ಲೆಂಡ್​ ತಂಡದ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಸರಣಿಯ ಕೊನೇ ಪಂದ್ಯ ಲಂಡನ್​ನ ಕೆನಿಂಗ್ಟನ್​ ಓವಲ್​ನಲ್ಲಿ ಜುಲೈ 27ರಂದು ಆರಂಭವಾಗಲಿದ್ದು ಆ ಪಂದ್ಯ ಸರಣಿಯ ಭವಿಷ್ಯ ನಿರ್ಧಾರ ಮಾಡಲಿದೆ. ಸರಣಿಯ ಮೊದಲೆಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ವಿಜಯ ಸಾಧಿಸಿದ್ದರೆ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವಿಜಯ ಕಂಡಿತ್ತು. ಹೀಗಾಗಿ ಸರಣಿ 2-1 ಅಂತರದಲ್ಲಿ ಆಸ್ಟ್ರೇಲಿಯಾ ಮುನ್ನಡೆ ಕಾಯ್ದುಕೊಂಡಿದೆ.

ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡ 317 ರನ್​ಗಳಿಗೆ ಆಲ್​ಔಟ್​ ಆಗಿತ್ತು. ಬಳಿಕ ಬ್ಯಾಟ್ ಮಾಡಿದ್ದ ಇಂಗ್ಲೆಂಡ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 592 ರನ್ ಬಾರಿಸಿತ್ತು. ಮೂರನೇ ದಿನ ಅಂತ್ಯಕ್ಕೆ ಮತ್ತೆ ಆಸ್ಟ್ರೇಲಿಯಾ ತಂಡದ ನಾಲ್ಕು ವಿಕೆಟ್​ ಉರುಳಿಸಿತ್ತು. ಹೀಗಾಗಿ ಇಂಗ್ಲೆಂಡ್​ಗೆ ಜಯ ನಿಶ್ಚಿತ ಎಂದ ಭಾವಿಸಲಾಗಿತ್ತು. ಆದರೆ, ನಾಲ್ಕನೇ ದಿನ ಮಳೆ ಸುರಿದ ಕಾರಣ ಕೇವಲ 30 ಓವರ್​ಗಳ ಆಟ ಮಾತ್ರ ನಡೆದಿತ್ತು. ಐದನೇ ದಿನದ ಪಂದ್ಯ ಸಂಪೂರ್ಣವಾಗಿ ಕೊಚ್ಚಿ ಹೋಯಿತು. ಹೀಗಾಗಿ ಇಂಗ್ಲೆಂಡ್​ ಪಾಲಿಗೆ ಅದೃಷ್ಟ ಕೈಕೊಟ್ಟಿತು.

ನಾಲ್ಕನೇ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂಬು ತೀರ್ಮಾನಕ್ಕೆ ಬಂದಿದ್ದ ಇಂಗ್ಲೆಂಡ್ ತಂಡ ಬಜ್​ಬಾಲ್​ ಪಂದ್ಯದ ಮಾದರಿಯಲ್ಲೇ ಬ್ಯಾಟಿಂಗ್ ಮಾಡಿತ್ತು. ಅಬ್ಬರದ ಬ್ಯಾಟಿಂಗ್ ಮಾಡಿ ಮೂರನೇ ದಿನ ಮುಕ್ತಾಯಗೊಳ್ಳುವಾಗಲೇ ಭರ್ಜರಿ 257 ರನ್​ಗಳ ಮುನ್ನಡೆ ಪಡೆದುಕೊಂಡಿತು. ಪರಿಸ್ಥಿತಿಯ ಲಾಭ ಹಾಗೂ ಪ್ರವಾಸಿ ತಂಡದ ಮೇಲೆ ಒತ್ತಡ ಹೇರಿ ವಿಕೆಟ್​ ಉರುಳಿಸಿ ಗೆಲ್ಲುವುದು ತಂಡದ ಯೋಜನೆಯೂ ಆಗಿತ್ತು. ಆದರೆ, ಮಳೆಯಿಂದಾಗಿ ಇಂಗ್ಲೆಂಡ್​ ತಂಡಕ್ಕೆ ತಮ್ಮ ಯೋಜನೆಗಳನ್ನು ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ : Emerging Asia Cup 2023 : ಪಾಕಿಸ್ತಾನ ವಿರುದ್ಧ ಭಾರತ 128 ರನ್​ ಸೋಲು, ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿ

ಇದು ಸ್ವೀಕರಿಸಲಾಗದ ಫಲಿತಾಂಶ. ಮೊದಲ ಮೂರು ದಿನಗಳಲ್ಲಿ ನಾವು ಆಡಿದ ಕ್ರಿಕೆಟ್ ನಮ್ಮ ಗೆಲುವಿಗೆ ಪೂರಕವಾಗಿತ್ತು. ಆದರೆ ಹವಾಮಾನ ನಮಗೆ ಬೆಂಬಲಿಸಲಿಲ್ಲ. ಆದರೆ ಇದು ಕ್ರಿಕೆಟ್​ ಪ್ರಯಾಣದ ಒಂದು ಭಾಗವಾಗಿದೆ. ಈ ಆಟಕ್ಕೆ ಬಂದಾಗ ನಮಗೆ ಮಾಡು ಅಥವಾ ಮಡಿ ಆಟ ಎಂದೇ ನಾನು ಭಾವಿಸುತ್ತೇವೆ. ಅದಕ್ಕೆ ತಕ್ಕ ಹಾಗೆ ಆಡಿದ್ದೇವೆ. ಮುಂದಿನ ಪಂದ್ಯದಲ್ಲಿ ಆಡಲು ಖುಷಿ ಇದೆ. ಅಲ್ಲಿ ಗೆಲ್ಲುತ್ತೇವೆ ಎಂದು ಪಂದ್ಯ ಡ್ರಾಗೊಂಡ ಬಳಿಕ ಇಂಗ್ಲೆಂಡ್​ ತಂಡದ ನಾಯಕ ಬೆನ್​ಸ್ಟೋಕ್ಸ್ ಹೇಳಿದ್ದಾರೆ.

ಇಂಗ್ಲೆಂಡ್​ಗೆ ಬಂದು ಆ್ಯಶಸ್ ಗೆಲ್ಲುವುದು ನಮ್ಮ ಆದ್ಯತೆಯಾಗಿದೆ. ಇಂದು ಏನಾಯಿತು ಎಂಬುದು ಮುಂದಿನ ಪಂದ್ಯವನ್ನು ನಾವು ಹೇಗೆ ನೋಡುತ್ತೇವೆ ಎಂಬುದನ್ನು ಅವಲಂಬಿಸುವುದಿಲ್ಲ. ಇದು ಅದ್ಭುತ ಗುಂಪು, ನಾವೆಲ್ಲರೂ ತುಂಬಾ ಉತ್ಸಾಹದಿಂದ ಇಲ್ಲಿ ಆಡಿದ್ದೇವೆ. ಇಂಗ್ಲೆಂಡ್ ತಂಡ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿತು, ನಾವು ಒಂದೆರಡು ಯೋಜನೆಗಳನ್ನು ಪ್ರಯತ್ನಿಸಿದೆವು. ಆದರೆ ಅದು ಕೆಲಸ ಮಾಡಲಿಲ್ಲ. ನಾವು ನಮ್ಮ ಅತ್ಯುತ್ತಮ ಸ್ಥಿತಿಯಲ್ಲಿರಲಿಲ್ಲ ಆದ್ದರಿಂದ ನಾವು ಅದನ್ನು ಪರಿಶೀಲಿಸುತ್ತೇವೆ. ನಾವೆಲ್ಲರೂ ಸರಣಿಯನ್ನು ಗೆಲ್ಲಲು ಇಲ್ಲಿಗೆ ಬಂದಿದ್ದೇವೆ. ಅದರತ್ತ ಗಮನ ಹರಿಸಿದ್ದೇವೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್​ ಕಮಿನ್ಸ್ ಹೇಳಿದ್ದಾರೆ.

Exit mobile version