ಕೊಲೊಂಬೊ: ಇತ್ತೀಚಿನ ಊಹಾಪೋಹಗಳ ಪ್ರಕಾರ, ಕೊಲೊಂಬೊ ನಗರದದಲ್ಲಿ ಪೂರಕವಲ್ಲದ ಹವಾಮಾನದಿಂದಾಗಿ ಏಷ್ಯಾ ಕಪ್ ಭವಿಷ್ಯ ಡೋಲಾಯಮಾನವಾಗಿದೆ. ಹೀಗಾಗಿ ಏಷ್ಯಾ ಕಪ್ 2023 ಫೈನಲ್ ಪಂದ್ಯವನ್ನು ಕೊಲಂಬೊದಿಂದ ಹೊರಗೆ ಸ್ಥಳಾಂತರಿಸುವ ಯೋಜನೆ ರುಪುಗೊಂಡಿದೆ. ಕೊಲಂಬೊದಲ್ಲಿ ಸೆಪ್ಟೆಂಬರ್ 17ರ ಹವಾಮಾನ ಮುನ್ಸೂಚನೆ ಭರವಸೆದಾಯಕವಾಗಿಲ್ಲದ ಕಾರಣ ಪಂದ್ಯಾವಳಿಯ ಅಂತಿಮ ಪಂದ್ಯವನ್ನು ಕ್ಯಾಂಡಿಯ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಸಲು ಯೋಜಿಸಲಾಗಿದೆ. .
ಕ್ಯಾಂಡಿಯ ಪಲ್ಲೆಕೆಲೆ ಅಂತಾರರಾಷ್ಟ್ರೀಯ ಕ್ರೀಡಾಂಗಣವು ಮೂರು ಗುಂಪು ಹಂತದ ಸ್ಪರ್ಧೆಗಳ ತಾಣವಾಗಿ ಕಾರ್ಯನಿರ್ವಹಿಸಿತು. ಇದರಲ್ಲಿ ಸ್ಪರ್ಧೆಯ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೂ ಸೇರಿತ್ತು. ಆದರೆ ಆ ಪಂದ್ಯವೂ ಮಳೆಗೆ ರದ್ದಾಗಿತ್ತು. ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಪಂದ್ಯವು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಂಡರೆ, ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಭಾರತದ ಎರಡು ಪಂದ್ಯಗಳನ್ನು ಮಳೆ ಹಾಳುಮಾಡಿತ್ತು.
ಈಗ ಟೈಮ್ಸ್ ನೌ ವರದಿ ಪ್ರಕಾರ, ಕೊಲಂಬೊದಲ್ಲಿ ನಿರಂತರ ಮಳೆ ಬೀಳುತ್ತಿರುವುದರಿಂದ ಏಷ್ಯಾ ಕಪ್ 2023 ಫೈನಲ್ ಪಂದ್ಯವನ್ನು ಪಲ್ಲೆಕೆಲೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗುತ್ತದೆ.
ನೇಪಾಳ ವಿರುದ್ಧದ ಅಂತಿಮ ಗ್ರೂಪ್ ಹಂತದ ಪಂದ್ಯವೂ ಮಳೆಯ ಅಡಚಣೆ ಎದುರಿಸಿತ್ತು. ಆದರೂ ಭಾರತ ತಂಡಕ್ಕೆ ಟ10 ವಿಕೆಟ್ಗಳ ಗೆಲವು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರದ ದೊರಕಿತ್ತು. ಕೊಲಂಬೊದಲ್ಲಿ ಹವಾಮಾನವು ಕೆಟ್ಟದಾಗಿದೆ, ಅಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನಿರಂತರ ಮಳೆಯಿಂದಾಗಿ ಮುಂದೂಡಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 24.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು.
ಪಂದ್ಯವು ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ಸ್ಥಳದಲ್ಲಿಯೇ ಮುಂದುವರಿಯುತ್ತದೆ. ಇದು 50 ಓವರ್ಗಳ ಪಂದ್ಯ ನಡೆಯಬಹುದು. ಒಂದು ವೇಳೆ ಸೋಮವಾರವೂ ಮಳೆ ಬಂದರೆ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಫಲಿತಾಂಶ ಪ್ರಕಟವಾಗಬಹುದು. ಪಂದ್ಯವೇ ನಡೆದಯದೇ ಹೋದರೆ ಅಂಕಗಳ ಹಂಚಿಕೆ ಗ್ಯಾರಂಟಿ.
ಟಿಕೆಟ್ ಬೆಲೆ ಇಳಿಕೆ
ಶ್ರೀಲಂಕಾ ಕ್ರಿಕೆಟ್ ತಂಡ ಏಷ್ಯಾಕಪ್ ಟೂರ್ನಿಯ ಟಿಕೆಟ್ ದರವನ್ನು ಶೇ.95ರಷ್ಟು ಕಡಿತಗೊಳಿಸಿದೆ. ಏಷ್ಯಾ ಕಪ್ ಪಂದ್ಯದ ಟಿಕೆಟ್ ಬೆಲೆಯನ್ನು ಶೇಕಡಾ 40ರಷ್ಟು ಏರಿಕೆ ಮಾಡಿದ್ದ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಅಂತಿಮವಾಗಿ ಬೆಲೆಯನ್ನು ಇಳಿಕೆ ಮಾಡಿದೆ. ಪ್ರೇಕ್ಷಕರು ಹೆಚ್ಚು ಉತ್ಸಾಹ ತೋರದ ಕಾರಣ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಹಿಂದೆ ಶ್ರೀಲಂಕಾದಲ್ಲಿ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಟಿಕೆಟ್ ಬೆಲೆ 250 ರೂಪಾಯಿಗಳಾಗಿತ್ತು.
ಶ್ರೀಲಂಕಾದಲ್ಲಿ ಟೂರ್ನಿ ನಡೆಯುತ್ತಿದ್ದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆತಿಥ್ಯ ವಹಿಸುತ್ತಿದೆ. ಹೀಗಾಗಿ ಕೆಲವು ಟಿಕೆಟ್ಗಲ ಬೆಲೆಯನ್ನು 10,000 ರೂ.ಗೆ ಹೆಚ್ಚಿಸಲಾಗಿತ್ತು. ಆದರೆ, ಅಭಿಮಾನಿಗಳು ಉತ್ಸಾಹ ತೋರದ ಕಾರಣ ಬೆಲೆ ಇಳಿಸಲಾಗಿದೆ. ಕೊಲಂಬೊದ 35,000 ಆಸನ ಸಾಮರ್ಥ್ಯದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಂಗ್ಲಾದೇಶ ವಿರುದ್ಧದ ಶ್ರೀಲಂಕಾದ ಸೂಪರ್ ಫೋರ್ ಪಂದ್ಯಕ್ಕೆ ಕೇವಲ 7,000 ತವರಿನ ಬೆಂಬಲಿಗರು ಆಗಮಿಸಿದ್ದರು. ಆತಂಕಕ್ಕೆ ಒಳಗಾದ ಸಂಸ್ಥೆ ಬೆಲೆ ಇಳಿಸಿದೆ.