Site icon Vistara News

Rajat Patidar: ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆರ್​ಸಿಬಿಯ ರಜತ್‌ ಪಾಟೀದಾರ್‌

rajat patidar

ಪಾರ್ಲ್: ದಕ್ಷಿಣ ಆಫ್ರಿಕಾ(South Africa vs India, 3rd ODI) ವಿರುದ್ಧದ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರಜತ್‌ ಪಾಟೀದಾರ್‌(Rajat Patidar) ಅವರು ಭಾರತ ಕ್ರಿಕೆಟ್​ ತಂಡಕ್ಕೆ ಪದಾರ್ಪಣೆ ಮಾಡಿದರು. ಆರಂಭಿಕ ಆಟಗಾರ ಋತುರಾಜ್​ ಗಾಯಕ್ವಾಡ್(Ruturaj Gaikwad)​ ಗಾಯಕ್ಕೀಡಾದ ಕಾರಣ ಅವರ ಸ್ಥಾನದಲ್ಲಿ ಅವಕಾಶ ಪಡೆದರು.

ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರನಾಗಿರುವ ರಜತ್‌ ಪಾಟೀದಾರ್‌ ಇದುವರೆಗೆ 12 ಐಪಿಎಲ್​ ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಮತ್ತು 2 ಅರ್ಧಶತಕ ಒಳಗೊಂಡಂತೆ 404 ರನ್​ ಬಾರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಗಾಯಗೊಂಡ ಕಾರಣ ಅವರು ಸಂಪೂರ್ಣವಾಗಿ ಟೂರ್ನಿಯಿಂದ ಹೊರಗುಳಿದಿದ್ದರು. ಇದೀಗ ಟೀಮ್​ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದಾರೆ.

ಭಾರತ ತಂಡ ಈ ಪಂದ್ಯಕ್ಕೆ ಒಟ್ಟು ಎರಡು ಬದಲಾವಣೆ ಮಾಡಿತು. ಕುಲ್​ದೀಪ್​ ಯಾದವ್​ ಬದಲು ವಾಷಿಂಗ್ಟನ್​ ಸುಂದರ್​ ಅವರಿಗೆ ಅವಕಾಶ ನೀಡಿತು. ಟಾಸ್​ ಸೋತ ಭಾರತ ತಂಡ ಬ್ಯಾಟಿಂಗ್​ ಆಹ್ವಾನ ಪಡೆದು ಬ್ಯಾಟಿಂಗ್​ ನಡೆಸುತ್ತಿದೆ. ಪದಾರ್ಪಗೈದ ರಜತ್‌ ಪಾಟೀದಾರ್‌ ಆರಂಭಿಕನಾಗಿ ಕಣಕ್ಕಿಳಿದಿದ್ದಾರೆ.

22 ರನ್​ಗೆ ವಿಕೆಟ್​ ಕೈಚೆಲ್ಲಿದ ಪಾಟೀದಾರ್‌

ಆರಂಭಿಕನಾಗಿ ಕಣಕ್ಕಿಳಿ ಪಾಟೀದಾರ್‌ ಬಿರುಸಿನ ಬ್ಯಾಟಿಂಗ್ ನಡೆಸಲು ಹೋಗಿ ವಿಕೆಟ್​ ಕೈಚೆಲ್ಲಿದರು. 16 ಎಸೆತ ಎದುರಿಸಿ 22 ರನ್​ಗೆ ಆಟ ಮುಗಿಸಿದರು. ಅವರ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್​ ಒಳಗೊಂಡಿತು.​

ಭಾರತ ಆಡುವ ಬಳಗ

ರಜತ್‌ ಪಾಟೀದಾರ್‌, ಸಾಯಿ ಸುದರ್ಶನ್, ತಿಲಕ್ ವರ್ಮಾ, ಕೆ.ಎಲ್ ರಾಹುಲ್ (ನಾಯಕ), ಸಂಜು ಸ್ಯಾಮ್ಸನ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಶ್​ದೀಪ್​ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.

ದಕ್ಷಿಣ ಆಫ್ರಿಕಾ ಆಡುವ ಬಳಗ

ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೋರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ನಾಂಡ್ರೆ ಬರ್ಗರ್, ಲಿಜಾಡ್ ವಿಲಿಯಮ್ಸ್, ಬ್ಯೂರಾನ್ ಹೆಂಡ್ರಿಕ್ಸ್.

ಇದನ್ನೂ ಓದಿ IPL 2024: ‘ಆರ್​ಸಿಬಿಗೆ ಒಂದು ಕಪ್​ ಗೆಲ್ಲಿಸಿ ಕೊಡಿ’; ಧೋನಿಗೆ ಮನವಿ ಮಾಡಿದ ಅಭಿಮಾನಿ

5 ವರ್ಷಗಗಳಿಂದ ಭಾರತ ಸರಣಿ ಗೆದ್ದಿಲ್ಲ

ಭಾರತ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿ ಗೆಲುವು ಕಂಡಿದ್ದು 2018ರಲ್ಲಿ. ಇದಾದ ಬಳಿಕ ಭಾರತ ಆಡಿದ ಎಲ್ಲ ಏಕದಿನ ಸರಣಿಯಲ್ಲೂ ಸೋಲು ಕಂಡಿದೆ. ಇದೀಗ 5 ವರ್ಷದ ಬಳಿಕ ಈ ಪ್ರಶಸ್ತಿ ಬರವನ್ನು ನೀಗಿಸುವ ವಿಶ್ವಾಸದಲ್ಲಿ ರಾಹುಲ್​ ಸಾರಥ್ಯದ ಯಂಗ್​ ಟೀಮ್​ ಇಂಡಿಯಾ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ರಾಹುಲ್​ ಸಾರಥ್ಯದಲ್ಲೇ ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಆಡಲಾಗಿತ್ತಾದರೂ ಗೆಲುವು ಸಿಕ್ಕಿರಲಿಲ್ಲ. ಇದೀಗ ಈ ಸೋಲಿನ ಸೇಡನ್ನು ರಾಹುಲ್​ ತೀರಿಸಿಕೊಳ್ಳಬೇಕಿದೆ.

ಮುಖಾಮುಖಿ

ಇತ್ತಂಡಗಳು ಇದುವರೆಗೆ 93 ಏಕದಿನ ಪಂದ್ಯಗಳನ್ನು ಆಡಿದ್ದು ಭಾರತ 39 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 51 ಗೆಲುವುಗಳನ್ನು ಕಂಡಿದೆ. ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಗಮನಾರ್ಹವಾಗಿ, ದಕ್ಷಿಣ ಆಫ್ರಿಕಾದಲ್ಲಿ, ಭಾರತದ ಒಟ್ಟಾರೆ ದಾಖಲೆಯು ಪ್ರಭಾವಶಾಲಿಯಾಗಿಲ್ಲ. ‘ಮೆನ್ ಇನ್ ಬ್ಲೂ’ ತಂಡವು 39 ಪಂದ್ಯಗಳಲ್ಲಿ 11 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಆತಿಥೇಯರು 26 ರಲ್ಲಿ ಜಯಗಳಿಸಿದ್ದಾರೆ, ಎರಡು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

Exit mobile version