Site icon Vistara News

Rajkot Stadium: ರಾಜ್‌ಕೋಟ್‌ ಸ್ಟೇಡಿಯಂಗೆ ನಾಳೆ ಮರುನಾಮಕರಣ

Rajkot Stadium

ರಾಜ್​ಕೋಟ್​: ಭಾರತದ ಪ್ರಮುಖ ಕ್ರಿಕೆಟ್‌ ಮೈದಾನಗಳಲ್ಲಿ ಒಂದಾಗಿರುವ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ(SCA)ಯ ಕ್ರೀಡಾಂಗಣದ ಹೆಸರು ನಾಳೆ ಮರುನಾಮಕರಣವಾಗಲಿದೆ. ಬಿಸಿಸಿಐನ ಮಾಜಿ ಕಾರ್ಯದರ್ಶಿ, ಹಿರಿಯ ಕ್ರಿಕೆಟ್‌ ಆಡಳಿತಗಾರ ನಿರಂಜನ್‌ ಶಾ(niranjan shah) ಹೆಸರನ್ನು ಇಡಲಾಗುವುದು. ಇದೇ ವೇಳೆ ಭಾರತ ಕ್ರಿಕೆಟ್​ ತಂಡದ ಚೇತೇಶ್ವರ​ ಪೂಜಾರ(Cheteshwar Pujara) ಮತ್ತು ರವೀಂದ್ರ ಜಡೇಜಾ(Ravindra Jadeja) ಅವರನ್ನು ಗೌರವಿಸಲಾಗುವುದು.

2013ರಲ್ಲಿ ಉದ್ಘಾಟನೆಗೊಂಡಿರುವ(Rajkot Stadium) ಕ್ರೀಡಾಂಗಣದಲ್ಲಿ ಈ ವರೆಗೂ 2 ಟೆಸ್ಟ್‌, 4 ಏಕದಿನ, 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ. ಸದ್ಯ ಎಸ್‌ಸಿಎ ಕ್ರೀಡಾಂಗಣ ಎಂಬ ಹೆಸರಿದ್ದು ನಾಳೆಯಿಂದ ನಿರಂಜನ್‌ ಶಾ ಕ್ರಿಕೆಟ್​ ಸ್ಟೇಡಿಯಂ ಎಂದು ಮರುನಾಮಕರಣವಾಗಲಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಹೊಸ ಹೆಸರನ್ನು ಅನಾವರಣಗೊಳಿಸಲಿದ್ದಾರೆ.

ನಿರಂಜನ್‌ ಶಾ ಕೊಡುಗೆ ಏನು?


ನಿರಂಜನ್‌ ಶಾ ಅವರು ಭಾರತ ತಂಡವನ್ನು ಪ್ರತಿನಿಧಿಸದಿದ್ದರೂ ದೇಶಿಯ ಕ್ರಿಕೆಟ್​ನಲ್ಲಿ ಮತ್ತು ಬಿಸಿಸಿಐನಲ್ಲಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ. 1965-66 ಮತ್ತು 1975-76ರ ನಡುವೆ ಅವರು ಸೌರಾಷ್ಟ್ರ ತಂಡಕ್ಕಾಗಿ 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಇದಾದ ಬಳಿಕ ಸುಮಾರು ನಾಲ್ಕು ದಶಕಗಳ ಕಾಲ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಬಿಸಿಸಿಐ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಸೌರಾಷ್ಟ್ರ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಹೆಸರನ್ನು ಸ್ಟೇಡಿಯಂಗೆ ಇಡಲು ನಿರ್ಧರಿಸಲಾಗಿದೆ. ನಿರಂಜನ್‌ ಶಾ ಅವರಿಗೆ ಈಗ 79 ವರ್ಷ ವಯಸ್ಸು.

ಇದನ್ನೂ ಓದಿ Ravindra Jadeja : ರವೀಂದ್ರ ಜಡೇಜಾ ಫುಲ್​ ಫಿಟ್​, ಮೂರನೇ ಪಂದ್ಯಕ್ಕೆ ಲಭ್ಯ?

ಸ್ಟೇಡಿಯಂಗಳ ಹೆಸರನ್ನು ಬದಲಾಯಿಸಿದ್ದು ಇದೇ ಮೊದಲೇನಲ್ಲ. 2019ರಲ್ಲಿ ದೆಹಲಿಯ ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣಕ್ಕೆ ಕೇಂದ್ರ ಮಾಜಿ ಸಚಿವ ಅರುಣ್‌ ಜೇಟ್ಲಿ ಅವರ ಹೆಸರನ್ನು ಇಡಲಾಗಿತ್ತು. ಅರುಣ್ ಜೇಟ್ಲಿ ಅವರಿಗೆ ಗೌರವ ಪೂರ್ವಕವಾಗಿ ಅವರ ಹೆಸರನ್ನು ಮರಣೋತ್ತರವಾಗಿ ದಿಲ್ಲಿ ಕ್ರಿಕೆಟ್ ಅಸೋಸಿಯೇಶನ್ ಅವರ ಹೆಸರನ್ನು ಇಟ್ಟಿತ್ತು. ಈಗ ಈ ಸ್ಟೇಡಿಯಂ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಸ್ಟೇಡಿಯಂ ಎಂದೇ ಕರೆಯಲಾಗುತ್ತದೆ. 1999ರಿಂದ 2003ರವರೆಗೆ ಅರುಣ್ ಜೇಟ್ಲಿ ದೆಹಲಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದರು. ಇದೇ ವೇಳೆಯಲ್ಲಿ ಈ ಕ್ರೀಡಾಂಗಣದ ನವೀಕರಣ ಕೆಲಸ ನಡೆದಿತ್ತು. ಕ್ರೀಡಾಂಗಣದ ಡ್ರೆಸ್ಸಿಂಗ್ ರೂಮ್ ಅನ್ನು ವಿಶ್ವದರ್ಜೆಗೆ ಏರಿಸಿದ್ದರು.

ಪೂಜಾರ, ಜಡೇಜಾಗೆ ಸನ್ಮಾನ


ಹೊಸ ಹೆಸರನ್ನು ಅನಾವರಣಗೊಳಿಸುವ ಸಮಾರಂಭದಲ್ಲಿ ಜಡೇಜಾ ಮತ್ತು ಪೂಜಾರ ಅವರನ್ನು ಗೌರವಿಸಲಾಗುದು. ಈ ವಿಚಾರವನ್ನು ಎರಡು ದಿನಗಳ ಹಿಂದೆಯೇ ಎಸ್​ಸಿಎ ಅಧ್ಯಕ್ಷ ಜಯದೇವ್ ಶಾ(SCA President Jaydev Shah) ಪ್ರಕಟಿಸಿದ್ದರು. ಪೂಜಾರ ಅವರು ಎಲೈಟ್ 100-ಟೆಸ್ಟ್ ಕ್ಲಬ್‌ಗೆ ಪ್ರವೇಶಿಸಿದ ಕೇವಲ ಹದಿಮೂರನೇ ಭಾರತೀಯ ಆಟಗಾರರಾಗಿದ್ದಾರೆ. ಜಡೇಜಾ ಅವರು ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಭಾರತದ ಮ್ಯಾಚ್ ವಿನ್ನರ್ ಆಗಿದ್ದಾರೆ. ಮತ್ತು ಪ್ರಸ್ತುತ ಐಸಿಸಿ ಟೆಸ್ಟ್ ಆಲ್-ರೌಂಡರ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದಾರೆ.

“ಸ್ಥಳೀಯ ಆಟಗಾರ ಪೂಜಾರ ಮತ್ತು ಜಡೇಜಾ ಇಬ್ಬರೂ ಇಂಗ್ಲೆಂಡ್ ವಿರುದ್ಧ ಮೈದಾನಕ್ಕಿಳಿಯುವುದನ್ನು ನೋಡಲು ವಿಶೇಷವಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಈ ಬಗ್ಗೆ ಬೇಸರವಿಲ್ಲ ಇದು ಆಟದ ಭಾಗ” ಎಂದು ಜಯದೇವ್ ಹೇಳಿದ್ದರು.

Exit mobile version