Site icon Vistara News

Rajkot Test Record: ರಾಜ್​ಕೋಟ್​ನಲ್ಲಿ ಯಾರು ಫೇವರಿಟ್​; ಭಾರತ-ಇಂಗ್ಲೆಂಡ್​ ​ಟೆಸ್ಟ್​ ದಾಖಲೆ ಹೇಗಿದೆ?

india vs england test team

ರಾಜ್​ಕೋಟ್​: ಭಾರತ ಮತ್ತು ಇಂಗ್ಲೆಂಡ್(India vs England Test Series)​ ನಡುವಣ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳ ಮುಕ್ತಾಯ ಕಂಡಿದೆ. ಇತ್ತಂಡಗಳು ತಲಾ ಒಂದು ಪಂದ್ಯಗಳನ್ನು ಗೆದ್ದು 1-1 ಸಮಬಲ ಸಾಧಿಸಿದೆ. ಇದೀಗ ಮೂರನೇ ಟೆಸ್ಟ್​(India vs England 3rd Test) ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ನಾಳೆಯಿಂದ ರಾಜ್​ಕೋಟ್​ನ(Rajkot) ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ(Saurashtra Cricket Association Stadium) ಈ ಪಂದ್ಯ ಆರಂಭಗೊಳ್ಳಲಿದೆ. ಇತ್ತಂಡಗಳು ಕೂಡ ಈ ಸ್ಟೇಡಿಯಂನಲ್ಲಿ ಉತ್ತಮ ದಾಖಲೆ(Rajkot Test record) ಹೊಂದಿದೆ. ಉಭಯ ತಂಡಗಳ ಟೆಸ್ಟ್​ ಸಾಧನೆಯ ಮಾಹಿತಿ ಇಂತಿದೆ.

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಚೊಚ್ಚಲ ಏಕದಿನ ಮತ್ತು ಟೆಸ್ಟ್​ ಪಂದ್ಯಗಳು ನಡೆದದ್ದು ಇಂಗ್ಲೆಂಡ್​ ಮತ್ತು ಭಾರತ ವಿರುದ್ಧವೇ. 2013ರಲ್ಲಿ ಭಾರತ ಮತ್ತು ಇಂಗ್ಲೆಂಡ್​ ಏಕದಿನ ಪಂದ್ಯವನ್ನಾಡುವ ಮೂಲಕ ಈ ಮೈದಾನಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಚಾಲನೆ ಸಿಕ್ಕಿತ್ತು. ಇದೇ ವರ್ಷ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯ ಕೂಡ ನಡೆದಿತ್ತು. 2016ರಲ್ಲಿ ಭಾರತ ಮತ್ತು ಇಂಗ್ಲೆಂಡ್​ ಮೊದಲ ಟೆಸ್ಟ್​ ಪಂದ್ಯ ಆಡಿತ್ತು. ಈ ಪಂದ್ಯದ ಡ್ರಾದಲ್ಲಿ ಅಂತ್ಯಕಂಡಿತ್ತು. ಒಟ್ಟಾರೆಯಾಗಿ ಈ ಸ್ಟೇಡಿಯಂನಲ್ಲಿ 2 ಟೆಸ್ಟ್‌, 4 ಏಕದಿನ, 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ.

ಇದನ್ನೂ ಓದಿ IND vs ENG: ಮೂರನೇ ಪಂದ್ಯದಲ್ಲಿ ಜುರೆಲ್‌, ಸರ್ಫ್‌ರಾಜ್‌ ಪದಾರ್ಪಣೆ ಖಚಿತ; ಇಲ್ಲಿದೆ ವಿಡಿಯೊ

ಅತ್ಯಧಿಕ ರನ್​ ಗಳಿಕೆ


ಭಾರತದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರು ಈ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹಂಚಿಕೊಂಡಿದ್ದಾರೆ. 2016 ಮತ್ತು 2018 ರ ನಡುವೆ, ಪೂಜಾರ ಎರಡು ಟೆಸ್ಟ್ ಪಂದ್ಯಗಳಲ್ಲಿ 76.00 ಸರಾಸರಿಯಲ್ಲಿ ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 228 ರನ್ ಗಳಿಸಿದ್ದಾರೆ. ಕೊಹ್ಲಿ ಕೂಡ ಎರಡು ಪಂದ್ಯಗಳಲ್ಲಿ 114 ರ ಸರಾಸರಿಯಲ್ಲಿ 228 ರನ್ ಬಾರಿಸಿ ಜಂಟಿ ದಾಖಲೆ ಹೊಂದಿದ್ದಾರೆ. ಈ ಬಾರಿಯ ಸರಣಿಯಲ್ಲಿ ಪೂಜಾರ ಮತ್ತು ವಿರಾಟ್​ ಕೊಹ್ಲಿ ಇಲ್ಲ. ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದರೆ, ಪೂಜಾರ ಕಳಪೆ ಫಾರ್ಮ್​ನಿಂದಾಗಿ ಆಯ್ಕೆಯಾಗಿಲ್ಲ.

ಇದನ್ನೂ ಓದಿ IND vs ENG: ರಾಜ್​ಕೋಟ್​ನ ಪಿಚ್​ ರಿಪೋರ್ಟ್​, ಹವಾಮಾನ ವರದಿ ಹೇಗಿದೆ?

ಕಡಿಮೆ ಮೊತ್ತ


ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಟೆಸ್ಟ್‌ನಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ದಾಖಲಿಸಿದೆ. ಕ್ರೈಗ್ ಬ್ರಾಥ್‌ವೈಟ್ ನೇತೃತ್ವದ ತಂಡ 2018 ರಲ್ಲಿ ಭಾರತ ಪ್ರವಾಸದ ಮೊದಲ ಟೆಸ್ಟ್​ ಪಂದ್ಯವನ್ನು ಇಲ್ಲಿ ಆಡಿತ್ತು. ಈ ಪಂದ್ಯದಲ್ಲಿ ವಿಂಡೀಸ್​ ಮೊದಲ ಇನಿಂಗ್ಸ್​ನಲ್ಲಿ 48 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟ್ ಆಗಿತ್ತು. ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೇವಲ 37 ರನ್‌ಗಳಿಗೆ ನಾಲ್ಕು ವಿಕೆಟ್‌ ಕಿತ್ತು ಮಿಂಚಿದ್ದರು. ಭಾರತವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 649/9 ರನ್​ಗೆ ಡಿಕ್ಲೇರ್​ ಮಾಡಿತ್ತು. ಭಾರತ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 272 ರನ್‌ಗಳ ಜಯ ಸಾಧಿಸಿತ್ತು.

kuldeep yadav


ಅತಿ ಹೆಚ್ಚು ವಿಕೆಟ್​ ಸಾಧನೆ


ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಅಶ್ವಿನ್​ ಇಲ್ಲಿ 2 ಟೆಸ್ಟ್​ ಪಂದ್ಯ ಆಡಿ 37.55 ಸರಾಸರಿಯಲ್ಲಿ ಒಂಬತ್ತು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ನಾಳಿನ ಪಂದ್ಯದಲ್ಲಿಯೂ ಅವರು ಆಡುವ ಕಾರಣ ವಿಕೆಟ್​ ಸಂಖ್ಯೆಯನ್ನು ಹೆಚ್ಚಿಸುವ ಅವಕಾಶ ಅವರ ಮುಂದಿದೆ.

kuldeep yadav


ಗರಿಷ್ಠ ವೈಯಕ್ತಿಕ ರನ್​ ಸಾಧಕರು


ವಿರಾಟ್ ಕೊಹ್ಲಿ ಅವರು ಈ ಸ್ಟೇಡಿಯಂನಲ್ಲಿ ಟೆಸ್ಟ್​ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಆಟಗಾರನಾಗಿದ್ದಾರೆ. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಮೊದಲ ಇನಿಂಗ್ಸ್​ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೊಹ್ಲಿ 230 ಎಸೆತಗಳಲ್ಲಿ 139 ರನ್ ಬಾರಿಸಿದ್ದರು. ಅವರ ಈ ಅದ್ಭುತ ಶತಕವು 10 ಬೌಂಡರಿಗಳೊಂದಿಗೆ ಸೇರಿತ್ತು. ಅವರ ಇನ್ನಿಂಗ್ಸ್ ಭಾರತಕ್ಕೆ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 649/9d ಗಳ ಬೃಹತ್ ಮೊತ್ತವನ್ನು ಗಳಿಸಲು ಸಹಾಯ ಮಾಡಿತ್ತು. ಈ ಬಾರಿ ಕೊಹ್ಲಿ ಗೈರಾಗಿದ್ದಾರೆ.

ಇದನ್ನೂ ಓದಿ IND vs ENG: ಒಂದು ದಿನ ಮುಂಚಿತವಾಗಿ 3ನೇ ಟೆಸ್ಟ್​ಗೆ ಆಡುವ ಬಳಗ ಪ್ರಕಟಿಸಿದ ಇಂಗ್ಲೆಂಡ್​

kuldeep yadav


ಗರಿಷ್ಠ ವೈಯಕ್ತಿಕ ವಿಕೆಟ್​ ಟೇಕರ್​


ಚೈನಾಮನ್ ಖ್ಯಾತಿಯ ಸ್ಪಿನ್ನ್​ ಬೌಲರ್​​ ಕುಲ್​ದೀಪ್ ಯಾದವ್ ಅವರು 2018 ರಲ್ಲಿ ವಿಂಡೀಸ್​ ಎದುರಿನ ಪಂದ್ಯದಲ್ಲಿ 57 ರನ್​ಗೆ 5 ವಿಕೆಟ್​ ಕಿತ್ತಿದ್ದರು. ಇದು ಈ ಮೈದಾನದಲ್ಲಿ ಬೌಲರ್​ ಒಬ್ಬ ಪಡೆದ ಗರಿಷ್ಠ ವೈಯಕ್ತಿಕ ಟೆಸ್ಟ್​ ವಿಕೆಟ್​ ಆಗಿದೆ. ಈ ಬಾರಿಯೂ ಕುಲ್​ದೀಪ್​ ಇಂಗ್ಲೆಂಡ್​ ಸರಣಿಯಲ್ಲಿ ಆಡುತ್ತಿದ್ದಾರೆ.

kuldeep yadav
Exit mobile version