Site icon Vistara News

‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಆಹ್ವಾನ ಪಡೆದ ಕ್ರಿಕೆಟಿಗರ ಪಟ್ಟಿ ಹೀಗಿದೆ

Cricketers Invited For Ram Temple

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir in Ayodhya) ಲೋಕಾರ್ಪಣೆಗೆ ಕೇವಲ ಒಂದು ದಿನ ಬಾಕಿ ಇದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ(Ayodhya Ram Mandir) ಮಾಡಲಿದ್ದಾರೆ. ರಾಮಮಂದಿರ ಉದ್ಘಾಟನೆಯ ಆಹ್ವಾನ ಪಡೆದ ಟೀಮ್​ ಇಂಡಿಯಾ ಆಟಗಾರರ ಪಟ್ಟಿ ಇಂತಿದೆ.

ಭಾರತ ಕ್ರಿಕೆಟ್​ ತಂಡದ ಹಾಲಿ ಆಟಗಾರ ವಿರಾಟ್​ ಕೊಹ್ಲಿ, ಸ್ಪಿನ್ನರ್​ ಆರ್​.ಅಶ್ವಿನ್​ ಮಾಜಿ ಆಟಗಾರರಾದ ಮಹೇಂದ್ರ ಸಿಂಗ್​ ಧೋನಿ, ಸಚಿನ್​ ತೆಂಡೂಲ್ಕರ್​ ಮತ್ತು ಮಿಥಾಲಿ ರಾಜ್​ ಅವರು ರಾಮಮಂದಿರದ ಉದ್ಘಾಟನೆಯ ಆಹ್ವಾನ ಪಡೆದ ಕ್ರಿಕೆಟಿಗರು. ಒಟ್ಟಾರೆ 5 ಮಂದಿಗೆ ಮಾತ್ರ ಆಹ್ವಾನ ಸಿಕ್ಕಿದೆ.

ಟೀಮ್​ ಇಂಡಿಯಾದ ಹಾಲಿ ನಾಯಕ ರೋಹಿತ್​ ಶರ್ಮ, ರವೀಂದ್ರ ಜಡೇಜಾ ಸೇರಿ ಇನ್ನು ಕೆಲ ಆಟಗಾರರಿಗೆ ಏಕೆ ಆಮಂತ್ರಣ ನೀಡಲಾಗಿಲ್ಲ ಎನ್ನುವ ಚರ್ಚೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡಿದೆ. ಕೆಲವರು ಈ ವಿಚಾರವಾಗಿ ಪರ ಮತ್ತು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬಹು ನಿರೀಕ್ಷಿತ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಜನವರಿ 22ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಹಾ ಕಾರ್ಯಕ್ರಮಕ್ಕೆ ಸಂತರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಜನರನ್ನು ಆಹ್ವಾನಿಸಲಾಗಿದೆ. ಪುರೋಹಿತರ ತಂಡದೊಂದಿಗೆ ಲಕ್ಷ್ಮೀಕಾಂತ್ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನಡೆಸಲಿದ್ದಾರೆ.

ಇದನ್ನೂ ಓದಿ Ram Mandir: ಅಯೋಧ್ಯೆಯಲ್ಲಿ ರಾಮಮಂದಿರವೇ ಇರ್ಲಿಲ್ಲ; ಅಸಾದುದ್ದೀನ್‌ ಓವೈಸಿ ವಿವಾದ!

ಏಳು ದಿನಗಳ ವೈದಿಕ ಆಚರಣೆಗಳು ಅಯೋಧ್ಯೆಯಲ್ಲಿ ಕಳೆದ ಮಂಗಳವಾರ ಪ್ರಾರಂಭವಾಯಿತು. ಶನಿವಾರ ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಿದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆಯಲಾಗುತ್ತದೆ. ಇದರ ನಂತರ ‘ವಾಸ್ತು ಶಾಂತಿ’ ಮತ್ತು ‘ಅನ್ನಾಧಿವಾಸ್’ ಆಚರಣೆಗಳು ನಡೆಯಲಿವೆ.

ಆಪ್​ ನಿರ್ಧಾರ ಧಿಕ್ಕರಿಸಿ ರಾಮಮಂದಿರಕ್ಕೆ ಹೊರಟ ಸಂಸದ ಹರ್ಭಜನ್​ ಸಿಂಗ್​


ಅಯೋಧ್ಯೆ(Ram Mandir) ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ವಿರೋಧ ಪಕ್ಷಗಳು ಆಹ್ವಾನ ನಿರಾಕರಿಸಿರುವ ಕುರಿತು ಮಾಜಿ ಕ್ರಿಕೆಟಿಗ ಮತ್ತು ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಮುಕ್ತವಾಗಿ ಮಾತನಾಡಿದ್ದಾರೆ.

“ಈ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸುತ್ತಿರುವುದು ನಮ್ಮ ಅದೃಷ್ಟ, ಆದ್ದರಿಂದ ನಾವೆಲ್ಲರೂ ಹೋಗಿ ಆಶೀರ್ವಾದ ಪಡೆಯಬೇಕು. ಯಾರು ಹೋದರೂ ಹೋಗದಿದ್ದರೂ ನಾನು ಖಂಡಿತ ಹೋಗುತ್ತೇನೆ. ಯಾವ ಪಕ್ಷ ಹೋದರೂ, ಹೋಗದಿದ್ದರೂ ನಾನು ಹೋಗುತ್ತೇನೆ. ನಾನು ರಾಮಮಂದಿರಕ್ಕೆ ಹೋಗುವುದರಿಂದ ಯಾರಿಗಾದರೂ ತೊಂದರೆಯಾದರೆ ನಾನಂತು ಹೋಗುವೆ” ಎಂದು ಆಮ್ ಆದ್ಮಿ ಪಕ್ಷದ ಹರ್ಭಜನ್​ ಸಿಂಗ್​ ಎಎನ್​ಐ ಜತೆ ಹೇಳಿದ್ದಾರೆ.

Exit mobile version