ಇಸ್ಲಾಮಾಬಾದ್ : ಪಾಕಿಸ್ತಾನ ತಂಡದ ವೇಗದ ಬೌಲರ್ ವಾಸಿಮ್ ಅಕ್ರಮ್ ಅವರ ಆತ್ಮಚರಿತ್ರೆ ‘ಸುಲ್ತಾನ್; ಎ ಮೆಮೊಯಿರ್’ (Autobiography) ೮೦ ಹಾಗೂ ೯೦ರ ದಶಕದ ಪಾಕಿಸ್ತಾನ ಕ್ರಿಕೆಟ್ ತಂಡದ ಅವಿಸ್ಮರಣೀಯ ಕ್ಷಣಗಳನ್ನು ನೆನಪಿಸುತ್ತಿದೆ. ಅದಕ್ಕಿಂತ ಮಿಗಿಲಾಗಿ ಆ ತಂಡದ ಗಲಾಟೆಗಳು ಹಾಗೂ ಒಳರಾಜಕೀಯಗಳನ್ನು ಬಯಲು ಮಾಡುತ್ತಿದೆ. ಹೀಗಾಗಿ ವಾಸಿಮ್ ಅವರ ಪುಸ್ತಕದ ವಿವರಣೆಗಳು ಒಂದರ ಹಿಂದೆ ಒಂದರಂತೆ ವಿವಾದಗಳನ್ನೂ ಸೃಷ್ಟಿಸುತ್ತಿವೆ. ಅಂತೆಯೇ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಹಾಲಿ ಅಧ್ಯಕ್ಷ ರಮೀಜ್ ರಾಜಾ ಅವರ ಬಗ್ಗೆ ಬರೆದಿವುದೂ ಸಣ್ಣ ಮಟ್ಟದ ಕಿಡಿ ಹಚ್ಚಿದೆ.
ವೇಗದ ಬೌಲರ್ ವಾಸಿಮ್ ಹಾಗೂ ಬ್ಯಾಟರ್ ರಮೀಜ್ ೧೯೮೫ರಿಂದ ೧೯೯೭ರವರೆಗೆ ಜತೆಯಾಗಿ ಪಾಕಿಸ್ತಾನ ತಂಡದಲ್ಲಿ ಆಡಿದ್ದರು. ೧೮೮ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಪಾಕಿಸ್ತಾನ ತಂಡ ಪರವಾಗಿ ಆಡಿದ್ದು, ೧೯೯೨ರ ವಿಶ್ವ ಕಪ್ ಚಾಂಪಿಯನ್‌ಗಳು. ಇದೀಗ ಅವರಿಬ್ಬರ ಸಂಬಂಧ ಹೇಗಿತ್ತು ಎಂಬುದು ಆತ್ಮಚರಿತ್ರೆಯ ಮೂಲಕ ಬಯಲಾಗಿದೆ.
ರಮೀಜ್ ಕುರಿತು “ರಮೀಜ್ ರಾಜಾ ಯಾವಾಗಲೂ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡಬೇಕಿತ್ತು. ಅಲ್ಲೇ ಮಾಡುತ್ತೇನೆ ಎಂದು ಅವರು ಪಟ್ಟು ಹಿಡಿಯುತ್ತಿದ್ದರು. ಯಾಕೆಂದರೆ ಅವರ ಅಪ್ಪ ಪೊಲೀಸ್ ಕಮಿಷನರ್ ಆಗಿದ್ದರು. ಆದರೆ, ಅವರಿಗೆ ಕ್ಯಾಚ್ ಹಿಡಿಯಲು ಆಗುತ್ತಿರಲಿಲ್ಲ. ಚೆಂಡನ್ನು ಹಿಡಿಯುವುದಕ್ಕಿಂತ ಬಿಟ್ಟಿದ್ದೇ ಹೆಚ್ಚು,’ ಎಂದು ವಾಸಿಮ್ ಬರೆದಿದ್ದಾರೆ.
ಅಕ್ರಂ ಅವರು ಪಾಕ್ ಪರ 104 ಟೆಸ್ಟ್‌ಗಳಲ್ಲಿ ಆಡಿ 414 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ಪಾಕ್ ಬೌಲರ್ ಪಾಲಿಗೆ ಗರಿಷ್ಠ ಸಾಧನೆ. 356 ಏಕದಿನ ಪಂದ್ಯಗಳಲ್ಲಿ 502 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಇದನ್ನೂ ಓದಿ | Wasim Akram | ಶೂ ಪಾಲಿಶ್ ಮಾಡಿಸುತ್ತಿದ್ದ ಸಲೀಮ್ ಮಲಿಕ್; ಪಾಕ್ ಮಾಜಿ ಆಟಗಾರ ಅಕ್ರಮ್ ಆರೋಪ