Site icon Vistara News

Ramiz Raja | ಬಿಜೆಪಿ ಮನಸ್ಥಿತಿ ಹೊಂದಿರುವ ಬಿಸಿಸಿಐ; ರಮೀಜ್​​ ರಾಜಾ​ ಹೇಳಿಕೆಗೆ​ ಆಕ್ರೋಶ!

Ramiz Raja

ನಹದೆಹಲಿ: ಪಾಕಿಸ್ತಾನ ಕ್ರಿಕೆಟ್​ ಪ್ರಗತಿಯನ್ನು ಹಾಳುಮಾಡುವ ಉದ್ದೇಶದಿಂದ ದುರದೃಷ್ಟವಶಾತ್ ಬಿಸಿಸಿಐ ಬಿಜೆಪಿ ಮನಸ್ಥಿತಿಗೆ ಸಿಲುಕಿದೆ ಎಂಬ ರಮೀಜ್​ ರಾಜಾ(Ramiz Raja) ಹೇಳಿಕೆಗೆ ಬಿಸಿಸಿಐ ಅಸಮಾಧಾನ ವ್ಯಕ್ಯಪಡಿಸಿದೆ. ಇದೊಂದು ತೀರಾ ಕೆಳಮಟ್ಟದ ಮನಸ್ಥಿತಿ ಎಂದು ಹೇಳಿದೆ.

ರಮೀಜ್​ ರಾಜಾ ಏಷ್ಯಾ ಕಪ್​ ವಿಚಾರದಲ್ಲಿ ಈ ಹಿಂದೆಯೂ ಬಿಸಿಸಿಐ ವಿರುದ್ಧ ಹಲವು ಬಾರಿ ಕಿತ್ತಾಡಿದ್ದರು. ಇದೀಗ ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಮತ್ತೆ ಬಿಸಿಸಿಐ ವಿರುದ್ಧ ಇಲ್ಲಸಲ್ಲದ ಆರೋಪವೊಂದನ್ನು ಮಾಡಿದ್ದಾರೆ.

“ಬಿಸಿಸಿಐ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿದೆ. ಕೆಂದ್ರ ಸರ್ಕಾರ ಏನು ಹೇಳುತ್ತದೆಯೋ ಅದನ್ನೇ ಬಿಸಿಸಿಐ ಪಾಲಿಸುತ್ತಿದೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್​ ಬೆಳವಣಿಗೆಯನ್ನು ನಾಶಮಾಡಲು ಆರಂಭಸಿದೆ” ಎಂದು ರಮೀಜ್​ ರಾಜಾ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಕೆ ನೀಡಿದ ಬಿಸಿಸಿಐ ರಮಿಜ್​ ರಾಜಾ ಹತಾಶ ಸ್ವಭಾವದ ವ್ಯಕ್ತಿ. ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಅವರು ತೀರಾ ಹತಾಶೆಯಾಗಿದ್ದಾರೆ. ಈ ಸೇಡನ್ನು ಬಿಸಿಸಿಐ ವಿರುದ್ಧ ತೀರಿಸಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಈ ರೀತಿಯ ಕೆಳಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಕ್ರಿಕೆಟ್​ ಜತೆಗೆ ರಾಜಕೀಯ ಬೆರೆಸುವುದು ಸರಿಯಲ್ಲ ಇನ್ನಾದರು ಪ್ರಬುದ್ಧ ಮನಸ್ಥಿತಿಯಿಂದ ವರ್ತಿಸಿ ಎಂದು ಬಿಸಿಸಿ ತಿರುಗೇಟು ನೀಡಿದೆ.

ಇದನ್ನೂ ಓದಿ | Ramiz Raja | ಭಾರತದ ಜತೆ ಕ್ರಿಕೆಟ್​ ಆಡದಿದ್ದರೆ ಪಾಕ್ ಕ್ರಿಕೆಟ್​ ಮಂಡಳಿ ಕುಸಿತ ಗ್ಯಾರಂಟಿ: ರಮೀಜ್​ ರಾಜಾ

Exit mobile version