ಬೆಂಗಳೂರು: ಉತ್ತರಾಖಂಡದ(Uttarakhand) ವಿರುದ್ಧದ ರಣಜಿ ಟ್ರೋಫಿಯ(Ranji Trophy) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ (Karnataka) ಬೃಹತ್ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಉತ್ತರಾಖಂಡವು 384 ರನ್‌ಗಳ ಹಿನ್ನಡೆ ಅನುಭವಿಸಿದ್ದು, ಮಯಾಂಕ್ ಅಗರ್ವಾಲ್ ಪಡೆಯ ಗೆಲುವಿಗೆ ಏಳು ವಿಕೆಟ್‌ಗಳ ಅಗತ್ಯವಿದೆ.
ಬುಧವಾರ ನಡೆದ ಎರಡನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡವು ಐದು ವಿಕೆಟ್ಗೆ 474 ರನ್ ಗಳಿಸಿ 358 ರನ್ನುಗಳ ಮುನ್ನಡೆ ಸಾಧಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿತ್ತು. ಅದರಂತೆ ಗುರುವಾರ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ 606 ರನ್ ಗಳಿಸಿ ಇನಿಂಗ್ಸ್ ಮುಗಿಸಿತು. ಕರ್ನಾಟಕ ಪರ ಶ್ರೇಯಸ್ ಗೋಪಾಲ್(shreyas gopal) ಅಜೇಯ 161, ಮಯಾಂಕ್ ಅಗರ್ವಾಲ್ 83, ಸಮರ್ಥ್ 82, ಪಡಿಕ್ಕಲ್ 69 ರನ್ ಬಾರಿಸಿ ಮಿಂಚಿದ್ದರು.
ಇದನ್ನೂ ಓದಿ Ranji Trophy | ತ್ರಿಶತಕ ಬಾರಿಸಿ ದಾಖಲೆ ಬರೆದ ಮುಂಬೈ ಬ್ಯಾಟರ್ ಪೃಥ್ವಿ ಶಾ!
ಸದ್ಯ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಉತ್ತರಾಖಂಡವು, 106 ರನ್ ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡಿದ್ದು ಇನ್ನೂ 384 ರನ್‌ಗಳ ಹಿನ್ನಡೆಯಲ್ಲಿದೆ. ಕರ್ನಾಟಕ್ಕೆ ಇನ್ನೂ ಒಂದು ಇನಿಂಗ್ಸ್ ಬ್ಯಾಟಿಂಗ್ ಮಾಡುವ ಅವಕಾಶವಿದೆ. ಆದರೆ ಅದಕ್ಕೂ ಮೊದಲು ಉತ್ತರಾಖಂಡದ ಏಳು ವಿಕೆಟ್‌ಗಳನ್ನು ಉಡಾಯಿಸಿದರೆ ಅಗರ್ವಾಲ್ ಪಡೆ ಇನಿಂಗ್ಸ್ ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್ಗೇರಬಹುದು. ಆದ್ದರಿಂದ ನಾಲ್ಕನೇ ದಿನದಾಟದಲ್ಲಿ ಕರ್ನಾಟಕದ ಬೌಲರ್ಗಳು ಸಂಘಟಿತ ಪ್ರದರ್ಶನ ತೋರುವ ಮೂಲಕ ವಿಕೆಟ್ ಉರುಳಿಸಬೇಕಿದೆ.