Site icon Vistara News

Ranji Trophy 2022-23| ಕೇವಲ 25 ರನ್‌ಗಳಿಗೆ ಆಲ್​ಔಟ್​​; ರಣಜಿಯಲ್ಲಿ ನೆಗೆಟಿವ್ ದಾಖಲೆ ಬರೆದ ನಾಗಾಲ್ಯಾಂಡ್‌

Nagaland 25 all

ನವದೆಹಲಿ: ಬಿಗ್​ಬ್ಯಾಷ್​ ಲೀಗ್​ನಲ್ಲಿ ಶುಕ್ರವಾರವಷ್ಟೇ ಸಿಡ್ನಿ ಥಂಡರ್​ ಕೇವಲ 15 ರನ್​ಗೆ ಆಲ್​ಔಟ್​ ​ ಆಗಿ ಒಂದು ದಿನ ಕಳೆಯುವ ಮುನ್ನ ಇದೀಗ ರಣಜಿ ಟ್ರೋಫಿ(Ranji Trophy 2022-23) ಕ್ರಿಕೆಟ್​ನಲ್ಲಿ ನಾಗಾಲ್ಯಾಂಡ್‌ ತಂಡ 25 ರನ್​ಗೆ ಆಲ್​ಔಟ್​ ಆಗುವ ಮೂಲಕ ‌ ನೆಗೆಟಿವ್‌ ದಾಖಲೆಯನ್ನು ತನ್ನ ಬೆನ್ನ ಮೇಲೆ ಎಳೆದುಕೊಂಡಿದೆ!

ಉತ್ತರಾಖಂಡ ವಿರುದ್ಧದ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ ನಾಗಾಲ್ಯಾಂಡ್‌ 25 ರನ್‌ಗಳಿಗೆ ಆಲ್‌ಔಟ್‌ ಆಗುವ ಮೂಲಕ 174 ರನ್‌ಗಳ ಭಾರಿ ಅಂತರದಲ್ಲಿ ಸೋಲು ಅನುಭವಿಸಿದೆ.

25 ರನ್​ಗೆ ಆಲ್‌ಔಟ್‌ ​ ಆಗುವ ಮೂಲಕ ರಣಜಿ ಟ್ರೋಫಿ ಇತಿಹಾಸಲ್ಲಿಯೇ ಇದು ಅತ್ಯಂತ ನಾಲ್ಕನೇ ಕಡಿಮೆ ಮೊತ್ತ ಹಾಗೂ 41 ವರ್ಷಗಳ ಬಳಿಕ ಎರಡನೇ ಅತಿ ಕಡಿಮೆ ಮೊತ್ತಕ್ಕೆ ಕುಸಿದ ತಂಡ ಎಂಬ ಅವಮಾನಕ್ಕೆ ನಾಗಾಲ್ಯಾಂಡ್‌ ತಂಡ ಒಳಗಾಯಿತು. 2010-11ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ರಾಜಸ್ಥಾನ್‌ ವಿರುದ್ಧ ಹೈದರಾಬಾದ್‌ ತಂಡ ಕೇವಲ 21 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

‘ಎ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಉತ್ತರಾಖಂಡ, ಪ್ರಥಮ ಇನಿಂಗ್ಸ್‌ನಲ್ಲಿ 282 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ನಾಗಾಲ್ಯಾಂಡ್‌ ತಂಡ 389 ರನ್‌ ಗಳಿಸುವ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ 107 ರನ್‌ ಮುನ್ನಡೆ ಪಡೆದಿತ್ತು. ಆದರೆ ದ್ವಿತೀಯ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ ಉತ್ತರಾಖಂಡ ತಂಡ 7 ವಿಕೆಟ್‌ ನಷ್ಟಕ್ಕೆ 306 ರನ್‌ ಗಳಿಸಿ ಡಿಕ್ಲೆರ್‌ ಮಾಡಿಕೊಂಡಿತ್ತು.

ಗೆಲುವಿಗೆ 200 ರನ್‌ ಗುರಿ ಪಡೆದ ನಾಗಾಲ್ಯಾಂಡ್​ ಈ ಮೊತ್ತವನ್ನು ಬೆನ್ನಟ್ಟಿ ಗೆಲ್ಲಬಹುದು ಎಂದು ಊಹಿಸಲಾಗಿತ್ತು. ಆದರೆ ಮಯಾಂಕ್‌ ಮಿಶ್ರಾ(4ಕ್ಕೆ 5) ಹಾಗೂ ಸ್ವಪ್ಮಿಲ್‌ ಸಿಂಗ್‌ (21ಕ್ಕೆ 4) ಅವರ ಸ್ಪಿನ್‌ ಮೋಡಿಗೆ ನಲುಗಿ ನಾಗಾಲ್ಯಾಂಡ್​ ಕೇವಲ 25 ರನ್‌ಗಳಿಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು.

ಇದನ್ನೂ ಓದಿ | BBL 2022 | ಕೇವಲ 15 ರನ್​ಗೆ ಸರ್ವಪತನ ಕಂಡು ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್!

Exit mobile version