Site icon Vistara News

Ranji Trophy Final: ಬಂಗಾಳವನ್ನು ಮಣಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಸೌರಾಷ್ಟ್ರ

ranji trophy final

#image_title

ಕೋಲ್ಕೊತಾ: ರಣಜಿ ಟ್ರೋಫಿ ಫೈನಲ್(Ranji Trophy Final)​ ಪಂದ್ಯದಲ್ಲಿ ಬಂಗಾಳ ವಿರುದ್ಧ 9 ವಿಕೆಟ್​ಗಳಿಂದ ಗೆಲುವು ಸಾಧಿಸಿದ ಸೌರಾಷ್ಟ್ರ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಸೌರಾಷ್ಟ್ರ ಪರ ನಾಯಕ ಜೈದೇವ್​ ಉನಾದ್ಕತ್​ ದ್ವಿತೀಯ ಇನಿಂಗ್ಸ್​ನಲ್ಲಿ ಪ್ರಮುಖ ಆರು ವಿಕೆಟ್​ ಕಿತ್ತು ಮಿಂಚಿದರು.

ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜೈದೇವ್‌ ಉನಾದ್ಕತ್ ಬಳಗ ಮೊದಲ ಇನಿಂಗ್ಸ್‌ನಲ್ಲಿ 230 ರನ್‌ಗಳ ಮುನ್ನಡೆ ಪಡೆಯಿತು. ಮೂರನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ ಬಂಗಾಳ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 169 ರನ್ ಗಳಿಸಿ 61 ರನ್‌ಗಳಿಂದ ಹಿನ್ನಡೆಯಲ್ಲಿತ್ತು. ಭಾನುವಾರ ನಾಲ್ಕನೇ ದಿನದಾಟ ಮುಂದುವರಿಸಿದ ಬಂಗಾಲ 241 ರನ್​ಗೆ ಆಲೌಟ್​ ಆಗುವ ಮೂಲಕ 10 ರನ್​ಗಳ ಮುನ್ನಡೆ ಸಾಧಿಸಿತು. ಗೆಲುವಿಗೆ 11 ರನ್​ ಗುರಿ ಪಡೆದ ಸೌರಾಷ್ಟ್ರ 1 ವಿಕೆಟ್​ ನಷ್ಟಕ್ಕೆ 14 ರನ್​ ಪೇರಿಸಿ ಗೆಲುವು ದಾಖಲಿಸಿ 2ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡ ಸಾಧನೆ ಮಾಡಿತು.

ಸೌರಾಷ್ಟ್ರ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 404 ರನ್​ ಪೇರಿಸಿತ್ತು. ಪಂದ್ಯದಲ್ಲಿ ಒಟ್ಟು 9 ವಿಕೆಟ್​ ಪಡೆದ ನಾಯಕ ಜೈದೇವ್​ ಉನಾದ್ಕತ್​ ಪ್ರಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ IND VS AUS: ಜಡೇಜಾ ಸ್ಪಿನ್​ ಜಾದೂ; 113ಕ್ಕೆ​ ಕುಸಿತ ಕಂಡ ಆಸೀಸ್

ಸಂಕ್ಷಿಪ್ತ ಸ್ಕೋರ್​:

ಸೌರಾಷ್ಟ್ರ: ಮೊದಲ ಇನಿಂಗ್ಸ್​ 404ಕ್ಕೆ ಆಲೌಟ್​, ದ್ವಿತೀಯ ಇನಿಂಗ್ಸ್​ ಒಂದು ವಿಕೆಟ್​ಗೆ 14.

ಬಂಗಾಲ: ಮೊದಲ ಇನಿಂಗ್ಸ್​ 174ಕ್ಕೆ ಆಲೌಟ್​, ದ್ವಿತೀಯ ಇನಿಂಗ್ಸ್​ 241 ರನ್​ಗೆ ಆಲೌಟ್​

Exit mobile version