ಬೆಂಗಳೂರು: ಸೌರಾಷ್ಟ್ರ ವಿರುದ್ಧ ತವರಿನಂಗಳದಲ್ಲಿ ನಡೆದ ರಣಜಿ ಟ್ರೋಫಿಯ(Ranji Trophy) ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲು ಕಂಡಿದೆ. ಸೌರಾಷ್ಟ್ರ ತಂಡ ಈ ಗೆಲುವಿನೊಂದಿಗೆ ಫೈನಲ್ಗೆ ಲಗ್ಗೆ ಇಟ್ಟಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕರ್ನಾಟಕ ತಂಡ ನಾಲ್ಕು ವಿಕೆಟ್ಗಳ ಸೋಲು ಕಂಡು ಪ್ರಶಸ್ತಿ ಸುತ್ತಿಗೇರುವ ಅವಕಾಶದಿಂದ ವಂಚಿತವಾಯಿತು. ಕರ್ನಾಟಕದ 407 ರನ್ಗೆ ಉತ್ತರವಾಗಿ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್ನಲ್ಲಿ 527 ರನ್ ಗಳಿಸಿತು. 120 ರನ್ನುಗಳ ಹಿನ್ನಡೆಗೆ ಸಿಲುಕಿದ ಕರ್ನಾಟಕ ದ್ವಿತೀಯ ಇನಿಂಗ್ಸ್ನಲ್ಲಿ 234 ರನ್ಗಳಿಗೆ ಆಲೌಟ್ ಆಯಿತು.
ಇದನ್ನೂ ಓದಿ Women’s T20 World Cup: ಇಂಡೋ-ಪಾಕ್ ಕದನಕ್ಕೆ ಕ್ಷಣಗಣನೆ ಆರಂಭ
ಗೆಲುವಿಗೆ 115 ರನ್ಗಳ ಗುರಿ ಪಡೆದ ಸೌರಾಷ್ಟ್ರ ತಂಡ ನಾಯಕ ಅರ್ಪಿತ್ ವಸವಡ ಅವರ ಅಜೇಯ 47 ರನ್ಗಳ ನೆರವಿನಿಂದ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಸೌರಾಷ್ಟ್ರ ಫೈನಲ್ ಪಂದ್ಯದಲ್ಲಿ ಬಂಗಾಳ ವಿರುದ್ಧ ಸೆಣಸಾಡಲಿದೆ. ಉಭಯ ತಂಡಗಳ ಫೈನಲ್ ಪಂದ್ಯ ಫೆಬ್ರವರಿ 16 ರಂದು ನಡೆಯಲಿದೆ. ಬಂಗಾಲ ತಂಡ ಮಧ್ಯಪ್ರದೇಶ ವಿರುದ್ಧ 306 ರನ್ ಗಳಿಸಿ ಪೈನಲ್ ಪ್ರವೇಶಿಸಿತ್ತು.